ಮೈಸೂರಿನ ರಾಜ ಬೀದಿಗಳಲ್ಲಿ ದಸರಾ ಆನೆಗಳ ಗಾಂಭೀರ್ಯದ ನಡಿಗೆ: ವಿಡಿಯೋ - Dasara Elephants walking - DASARA ELEPHANTS WALKING

🎬 Watch Now: Feature Video

thumbnail

By ETV Bharat Karnataka Team

Published : Aug 23, 2024, 4:13 PM IST

ಮೈಸೂರು: ದಸರಾ ಗಜಪಡೆ ಅರಣ್ಯ ಭವನದಿಂದ ಮೈಸೂರು ಅರಮನೆಗೆ ಇಂದು ಬಿಗಿ ಪೊಲೀಸ್ ಭದ್ರತೆಯ ನಡುವೆ ಆಗಮಿಸಿತು. ನಗರದ ರಾಜಬೀದಿಗಳಲ್ಲಿ ಗಂಭೀರ ಹೆಜ್ಜೆ ಹಾಕುತ್ತಾ ಆಗಮಿಸಿದ ಆನೆಗಳ ತಂಡವನ್ನು ನೋಡಲು ರಸ್ತೆ ಪಕ್ಕದಲ್ಲಿ ಜನರು ಕಿಕ್ಕಿದು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಅನೇಕರು ಸೆಲ್ಫಿ ಕ್ಲಿಕ್ಕಿಸಿದರು. ಇನ್ನೂ ಕೆಲವರು ತಮ್ಮ ಮನೆಯ ಎದುರು ಸಾಗುತ್ತಿದ್ದ ಗಜಪಡೆಗೆ ಆರತಿ ಬೆಳಗಿ, ಪೂಜೆ ಸಲ್ಲಿಸಿ ಸಂಭ್ರಮಿಸಿದರು.  

ಇದಕ್ಕೂ ಮುನ್ನ, ಅರಣ್ಯ ಭವನದಲ್ಲಿ ಅಭಿಮನ್ಯು ನೇತೃತ್ವದ 9 ದಸರಾ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಕುಂಬಳಕಾಯಿ ಒಡೆದು, ದೃಷ್ಟಿ ತೆಗೆಯಲಾಯಿತು. ಇದಾದ ಬಳಿಕ ಗಜಪಡೆ ಅಶೋಕಪುರಂ, ಬಳ್ಳಾಲ್‌ ವೃತ್ತ, ರಾಮಸ್ವಾಮಿ ವೃತ್ತ ಹಾಗೂ ಚಾಮರಾಜ ಜೋಡಿ ರಸ್ತೆಯ ಮೂಲಕ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಸಾಗಿ ಅರಮನೆಯ ಜಯಮಾರ್ತಾಂಡ ದ್ವಾರ ತಲುಪಿದವು. 

ಆನೆಗಳಿಗೆ ಪೊಲೀಸ್ ಕಮಾಂಡೋ ಪಡೆ ಹಗ್ಗ ಹಿಡಿದು ಭದ್ರತೆ ನೀಡಿದರೆ, ಅರಣ್ಯ ಇಲಾಖೆಯೂ ವಿಶೇಷ ಭದ್ರತೆ ಒದಗಿಸಿ ಮುತುವರ್ಜಿ ವಹಿಸಿದ್ದು ಕಂಡುಬಂತು.

ಇದನ್ನೂ ಓದಿ: ಮೈಸೂರು ದಸರಾ: ಅರಮನೆಗೆ ಬಂದ ಗಜ ಪಡೆಗೆ ಅದ್ಧೂರಿ ಸ್ವಾಗತ - DASARA GAJAPADE

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.