LIVE: ಕಲಬುರಗಿಯಲ್ಲಿ ಪ್ರಧಾನಿ ಮೋದಿ, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಿನಿಂದ ಮತಬೇಟೆ ಶುರು - LIVE - Pm Modi campaiagn

🎬 Watch Now: Feature Video

thumbnail

By ETV Bharat Karnataka Team

Published : Mar 16, 2024, 2:33 PM IST

Updated : Mar 16, 2024, 3:21 PM IST

2024ರ ಲೋಕಸಭಾ ಚುನಾವಣೆ ರಂಗೇರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಪ್ರಚಾರ ಆರಂಭಿಸಿದ್ದು, ಇಂದು ಕಲಬುರಗಿಯಲ್ಲೂ ಮತಬೇಟೆಗೆ ರಣಕಹಳೆ ಮೊಳಗಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೂಡ ಕಲಬುರಗಿಯಿಂದಲೇ ಪ್ರಧಾನಿ ಮೋದಿ ಪ್ರಚಾರ ಶುರು ಮಾಡಿದ್ದರು. ಈ ಬಾರಿಯೂ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಿಂದಲೇ ಕರ್ನಾಟಕದಲ್ಲಿ ನಮೋ ಪತಾಕೆ ಹಾರಿಸಿದ್ದಾರೆ.ನಗರದ ಎನ್ ವಿ ಕಾಲೇಜು ಮೈದಾನದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿ ಮತಯಾಚನೆ ಮಾಡುತ್ತಿದ್ದಾರೆ. ಬೃಹತ್‌ ಸಮಾವೇಶದ ವೇದಿಕೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಆಸನದ ವ್ಯವಸ್ಥೆ ಮಾಡಲಾಗಿದೆ. ಪ್ರಚಾರ ಕಾರ್ಯಕ್ರಮದಲ್ಲಿ ಬೀದರ್ ಹಾಗೂ ಕಲಬುರಗಿ ಲೋಕಸಭೆ ಕ್ಷೇತ್ರದ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಭಾಗಿಯಾಗಿರುವ ನಿರೀಕ್ಷೆ ಇದೆ.ತೆಲಂಗಾಣದಿಂದ ನೇರವಾಗಿ ಕಲಬುರಗಿ ಏರ್‌ಪೋರ್ಟ್‌ಗೆ ವಿಶೇಷ ವಿಮಾನ ಮೂಲಕ ಮೋದಿ ಆಗಮಿಸಿದರು. ಬಳಿಕ ಏರ್‌ಪೋರ್ಟ್‌ನಿಂದ ಸೇನಾ ಹೆಲಿಕಾಪ್ಟರ್​ನಲ್ಲಿ ನಗರದ ಡಿಎಆರ್ ಪೊಲೀಸ್ ಮೈದಾನಕ್ಕೆ ಬಂದರು. ನಂತರ ಹೆಲಿಪ್ಯಾಡ್​ನಿಂದ ಸಮಾವೇಶ ನಡೆಯುವ ಸ್ಥಳ ಎನ್‌ವಿ ಮೈದಾನದವರೆಗೆ 10 ರಿಂದ 12 ನಿಮಿಷಗಳ ಕಾಲ 2.5 ಕಿ.ಮೀ ವರೆಗೆ ಸೆಮಿ ರೋಡ್ ಶೋ ನಡೆಸಿದರು. ಪ್ರಧಾನಿ ಮೋದಿ ಅಧ್ಯಕ್ಷತೆಯ ಬಿಜೆಪಿ ಬೃಹತ್ ಸಮಾವೇಶದ ಹಿನ್ನೆಲೆ ಎನ್ ವಿ ಮೈದಾನದ ಸುತ್ತಲೂ ಪೊಲೀಸರ ಸರ್ಪಗಾವಲು ಇರಲಿದ್ದು, ಬಂದೋಬಸ್ತ್​​​​ಗೆ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
Last Updated : Mar 16, 2024, 3:21 PM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.