ಮೈಸೂರು: ಒಂದು ತಿಂಗಳು, ಒಂದೇ ಸ್ಥಳದಲ್ಲಿ 5ನೇ ಚಿರತೆ ಸೆರೆ: ವಿಡಿಯೋ - LEOPARD CAPTURED
🎬 Watch Now: Feature Video
Published : Oct 29, 2024, 5:27 PM IST
ಮೈಸೂರು: ಹೆಚ್‌ಡಿ ಕೋಟೆ ತಾಲೂಕಿನ ಹೌಸಿಂಗ್ ಬೋರ್ಡ್ ಬಳಿ ಗಂಡು ಚಿರತೆಯೊಂದು ಬೋನಿಗೆ ಬಿದ್ದಿದೆ. ಈ ಮೂಲಕ ಒಂದು ತಿಂಗಳಲ್ಲಿ, ಒಂದೇ ಸ್ಥಳದಲ್ಲಿ ಬೋನಿಗೆ ಬಿದ್ದ ಐದನೇ ಚಿರತೆ ಇದಾಗಿದೆ.
ಮಾಜಿ ಶಾಸಕ, ದಿವಂಗತ ಎನ್. ನಾಗರಾಜು ಜಮೀನಿನಲ್ಲಿ 7 ವರ್ಷದ ಚಿರತೆ ಬೋನಿಗೆ ಬಿದ್ದಿದೆ. ಸೆರೆ ಸಿಕ್ಕ ಚಿರತೆ ನೋಡಲು ಜನರು ಮುಗಿಬಿದ್ದಿದ್ದರು. ಚಿರತೆಯ ಆರೋಗ್ಯ ತಪಾಸಣೆ ನಡೆಸಿ ಬಳಿಕ ಕಾಡಿಗೆ ಬಿಡಲು ಅರಣ್ಯ ಇಲಾಖೆ ಮುಂದಾಗಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಹೆಚ್ಚಾಗಿತ್ತು. ಈಗಾಗಲೇ ಈ ಭಾಗದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ನಾಲ್ಕು ಚಿರತೆಗಳನ್ನ ಸೆರೆಹಿಡಿದಿತ್ತು.
ಈ ಕುರಿತು ಡಿಸಿಎಫ್ ಬಸವರಾಜ್ 'ಈಟಿವಿ ಭಾರತ' ಜೊತೆ ಮಾತನಾಡಿ, "ಈ ಭಾಗದಲ್ಲಿ ಚಿರತೆಗಳ ಕಾಟ ಹೆಚ್ಚಾಗಿತ್ತು. ಗ್ರಾಮಸ್ಥರ ಮನವಿಯ ಮೇರೆಗೆ ಜಮೀನಿನಲ್ಲಿ ಬೋನ್ ಇರಿಸಲಾಗಿತ್ತು. ಸೋಮವಾರ ರಾತ್ರಿ ಸುಮಾರು 7 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ. ಒಂದೇ ಸ್ಥಳದಲ್ಲಿ ಬೋನಿಗೆ ಬಿದ್ದ ಐದನೇ ಚಿರತೆ ಇದಾಗಿದೆ. ಆಹಾರ ಅರಸಿ ಚಿರತೆಗಳು ಇಲ್ಲಿಗೆ ಹೆಚ್ಚಾಗಿ ಬರುತ್ತಿವೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಧಾರವಾಡದಲ್ಲಿ ಮನೆಗೆ ಬಂದು ನಾಯಿ ಕೊಂದ ಚಿರತೆ