ಕೊಪ್ಪಳ ಗವಿಮಠ ಜಾತ್ರೆ, ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ - ತಾರಸಿ ಕೈತೋಟ

🎬 Watch Now: Feature Video

thumbnail

By ETV Bharat Karnataka Team

Published : Feb 1, 2024, 7:21 PM IST

ಕೊಪ್ಪಳ: ದಕ್ಷಿಣ ಭಾರತ ಮಹಾಕುಂಬ ಮೇಳ ಎಂಬ ಖ್ಯಾತಿಯ ಕೊಪ್ಫಳದ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ಜನರ ಕಣ್ಮನ ಸೆಳೆಯುತ್ತಿದೆ.

ತೋಟಗಾರಿಕೆ ಇಲಾಖೆಯಿಂದ ಒಂದು ವಾರ ಕಾಲ ಈ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಫೆ. 4ರ ವರೆಗೆ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಜನರು ತಮ್ಮ ಮನೆಯಲ್ಲಿಯೂ ತೋಟ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸುವ ತಾರಸಿ ತೋಟ, ಮನೆಯ ಮುಂದೆ ಕೈತೋಟ, ಲಂಬ ತೋಟ, ಕಡಿಮೆ ಜಾಗ ಇರುವಲ್ಲಿ ತರಕಾರಿ, ಔಷಧಿಯ ಸಸ್ಯ ಬೆಳೆಯುವ ಕುರಿತು ಪ್ರದರ್ಶನದಲ್ಲಿ ಮಾಹಿತಿ ನೀಡಲಾಗುತ್ತಿದೆ. ಈ ಪ್ರದರ್ಶನದಲ್ಲಿ ಮುಖ್ಯವಾಗಿ ಮನೆಯಲ್ಲಿ ಪೌಷ್ಟಿಕ ಆಹಾರ ಸಸ್ಯಗಳನ್ನು ಬೆಳೆದು ಬಳಸುವ ಕುರಿತು ಅರಿವು ಮೂಡಿಸಲಾಗಿದೆ.

ಗಮನ ಸೆಳೆಯುತ್ತಿದೆ ಚಂದ್ರಯಾನ-3 ಪ್ರತಿಕೃತಿ: ಫಲಪುಷ್ಪ ಪ್ರದರ್ಶನದಲ್ಲಿ ಇತ್ತೀಚೆಗೆ ಭಾರತ ಹೆಮ್ಮೆ ಪಡುತ್ತಿರುವ ಇಸ್ರೋ ಸಾಧನೆಯಾದ ಚಂದ್ರಯಾನ-3 ಯಶಸ್ವಿ ಉಡ್ಡಾವಣೆಯ ಪ್ರತಿಕೃತಿ ನಿರ್ಮಿಸಲಾಗಿದೆ. ಜಾತ್ರೆಗೆ ಬಂದವರು ಇಸ್ರೋ ಸಾಧನೆ ಕಣ್ಣತುಂಬಿಕೊಂಡು ಸೆಲ್ಫಿ ಕ್ಲಿಕಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ನೀರು ಸಂರಕ್ಷಣೆ, ಚಿಟ್ಟೆಗಳ ಸಂರಕ್ಷಣೆ, ಮಿನಿ ಜಲಪಾತ, ಜಿಲ್ಲೆಯಲ್ಲಿ ಬೆಳೆಯುವ ಹಣ್ಣುಗಳ ಪ್ರದರ್ಶನ ಕೂಡ ಇಲ್ಲಿದೆ. 

ಕೊಪ್ಪಳದ ಜಾತ್ರೆಯಲ್ಲಿ ತಾರಸಿ ಕೈತೋಟ, ಪೌಷ್ಟಿಕ ಆಹಾರ ಉತ್ಪಾದನೆ ಬಗ್ಗೆ ಮಾಹಿತಿ ನೀಡಬೇಕು ಎನ್ನುವ ಉದ್ದೇಶದಿಂದ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಮನೆಯ ತಾರಸಿಯ ಜಾಗವನ್ನು ಸದ್ಬಳಕೆ ಮಾಡಿಕೊಂಡು, ಕಡಿಮೆ ನೀರು ಬಳಸಿ ಮನೆಗೆ ಬೇಕಾದ ಪೌಷ್ಟಿಕ ತರಕಾರಿ ಬೆಳೆಯುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಅನುಶ್ರೀ ಅವರು ತಿಳಿಸಿದ್ದಾರೆ. 

ಇದನ್ನೂಓದಿ:ವೈಭವದಿಂದ ಜರುಗಿದ ಕೊಪ್ಪಳದ ಗವಿಸಿದ್ಧೇಶ್ವರರ ರಥೋತ್ಸವ: ದಕ್ಷಿಣ ಭಾರತದ ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.