ಮಂಗಳೂರು: ಪಿಲಿಕುಳ ನಿಸರ್ಗಧಾಮದಿಂದ ತಪ್ಪಿಸಿಕೊಂಡ ಕಾಳಿಂಗ ಸರ್ಪ - King Cobra Escapes - KING COBRA ESCAPES

🎬 Watch Now: Feature Video

thumbnail

By ETV Bharat Karnataka Team

Published : Mar 23, 2024, 6:51 AM IST

Updated : Mar 23, 2024, 7:12 AM IST

ಮಂಗಳೂರು (ದಕ್ಷಿಣ ಕನ್ನಡ): ನಗರದ ಪಿಲಿಕುಳ ನಿಸರ್ಗಧಾಮದ ಗೂಡಿನಲ್ಲಿದ್ದ ಕಾಳಿಂಗ ಸರ್ಪವೊಂದು ತಪ್ಪಿಸಿಕೊಂಡು ಹೋಗಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಪಿಲಿಕುಳ ಜೈವಿಕ ಉದ್ಯಾನವನದಿಂದ ತಪ್ಪಿಸಿಕೊಂಡ ಈ ಕಾಳಿಂಗ ಸರ್ಪ ರಸ್ತೆ ದಾಟಿ ವಿಜ್ಞಾನ ಸೆಂಟರ್​ನತ್ತ ಸಾಗುತ್ತಿತ್ತು. ತಕ್ಷಣ ಇದನ್ನು ಗಮನಿಸಿ ನಿಸರ್ಗಧಾಮದ ಸಿಬ್ಬಂದಿಯ ಸಹಾಯದಿಂದ ಅದನ್ನು ಹಿಡಿದು ಕಾಳಿಂಗ ಸರ್ಪದ ಸಂತಾನೋತ್ಪತ್ತಿ ಕೇಂದ್ರಕ್ಕೆ ಸಾಗಿಸಲಾಯಿತು. 

ಪಿಲಿಕುಳ ಜೈವಿಕ ಉದ್ಯಾನವನ ಪ್ರಸಿದ್ಧ ಪ್ರವಾಸಿ ತಾಣವೂ ಹೌದು. ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುತ್ತಾರೆ. ದೇಶದ ದೊಡ್ಡ 17 ಮೃಗಾಲಯಗಳ ಪೈಕಿ ಇದು ಕೂಡ ಒಂದು. ಸಂತಾನಾಭಿವೃದ್ಧಿಯಲ್ಲಿ ದೇಶದಲ್ಲೇ ನಂಬರ್​ ಒನ್​​ ಎಂಬ ಗೌರವಕ್ಕೂ ಪಾತ್ರವಾಗಿದೆ. ಅದರಲ್ಲೂ ಅಪರೂಪದ ಹುಲಿ, ಕಾಡು, ಶ್ವಾನ, ಕಾಳಿಂಗ, ರಿಯಾ ಜಾತಿಯ ಹಕ್ಕಿಯ ಸಂತಾನಾಭಿವೃದ್ಧಿಯಲ್ಲಿ ಪಿಲಿಕುಳ ಮೃಗಾಲಯ ಹೆಚ್ಚು ಪ್ರಸಿದ್ಧಿ ಪಡೆದಿದೆ. ಅಳಿವಿನಂಚಿನಲ್ಲಿರುವ ಜೀವಿಗಳು ಕೂಡ ಇಲ್ಲಿವೆ.

ಇದನ್ನೂ ಓದಿ: ವಿಶ್ವ ಜಲ ದಿನಾಚರಣೆ: ಜಲಮಂಡಳಿಯಿಂದ ಹೋಟೆಲ್​ಗಳಿಗೆ ಗ್ರೀನ್ ಸ್ಟಾರ್ ಚಾಲೆಂಜ್ ಸ್ಪರ್ಧೆ - Green Star Challenge Competition

Last Updated : Mar 23, 2024, 7:12 AM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.