ಕಡಬ: ಸತತ 7 ಗಂಟೆ ಕಾರ್ಯಾಚರಣೆ ಮೂಲಕ 13 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ - ವಿಡಿಯೋ - KING COBRA CAPTURED

By ETV Bharat Karnataka Team

Published : Mar 26, 2024, 4:17 PM IST

thumbnail

ಕಡಬ (ದಕ್ಷಿಣ ಕನ್ನಡ): ಬರೋಬ್ಬರಿ 13 ಅಡಿ ಉದ್ದವಿರುವ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಕೋಡಿಂಬಾಳ ಗ್ರಾಮದಲ್ಲಿ ಸೆರೆಸಿಕ್ಕಿದೆ. ಮಾ.23 ರಂದು ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಕಾರ್ಮಿಕರೊಬ್ಬರಿಗೆ ಹಾವೊಂದು ಬುಸುಗುಟ್ಟುವ ಸದ್ದು ಕೇಳಿದೆ. ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳದಲ್ಲಿ ಜನರು ಜಮಾಯಿಸಿದ್ದರು. ಹೆಬ್ಬಾವು ಇರಬಹುದೆಂದು ಹುಡುಕಾಟ ನಡೆಸಿದಾಗ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಸ್ಥಳೀಯರು ತಕ್ಷಣ ಸುಬ್ರಹ್ಮಣ್ಯದ ಉರಗ ರಕ್ಷಕ ಗೋಪಾಲ ಅವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಉರಗ ರಕ್ಷಕ ಗೋಪಾಲ ಗ್ರಾಮಸ್ಥರ ನೆರವಿನೊಂದಿಗೆ ಸತತ 7 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ದೈತ್ಯ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

ಕಾರ್ಯಾಚರಣೆ ವೇಳೆ ಕಾಳಿಂಗ ಸರ್ಪ ಕೋಪದಿಂದ ಜನರ ಮೇಲೆಯೇ ದಾಳಿಗೆ ಯತ್ನಿಸಿರುವ ಘಟನೆಯೂ ನಡೆದಿದೆ. ಆಹಾರ ಹುಡುಕಾಟದ ಸಂದರ್ಭ ಪ್ರಾಣಿಗಳನ್ನು ಬೆನ್ನಟ್ಟುತ್ತಾ ಈ ಕಾಳಿಂಗ ಸರ್ಪ ಬಂದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸುಬ್ರಹ್ಮಣ್ಯ ಸಮೀಪದ ದಟ್ಟ ಕಾಡಿನಲ್ಲಿ ಬಿಡಲಾಗಿದೆ. ಪದೇ ಪದೇ ಕಾಳಿಂಗ ಸರ್ಪಗಳು ಪತ್ತೆಯಾಗುತ್ತಿರುವ ಬಗ್ಗೆ ಇಲ್ಲಿನ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಟಿವಿ ನೋಡ್ತಾ ಹಾಯಾಗಿ ಮಲಗಿದ್ದ ವೃದ್ಧನ ಎದೆ ಏರಿ ಕುಳಿತ ನಾಗರಹಾವು!

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.