ಬಸ್ ಅಡ್ಡಗಟ್ಟಿ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ: ಯುವಕನ ವಿರುದ್ಧ ಪ್ರಕರಣ - crime news - CRIME NEWS
🎬 Watch Now: Feature Video
Published : Apr 6, 2024, 6:13 PM IST
ಕಾರವಾರ: ಕ್ಷುಲ್ಲಕ ಕಾರಣಕ್ಕಾಗಿ ಬಸ್ ಅಡ್ಡಗಟ್ಟಿ ಯುವಕನೊಬ್ಬನು ದಾಂಧಲೆ ನಡೆಸಿದ್ದಲ್ಲದೇ ಚಾಲಕ ನಿರ್ವಾಹಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಕಾರವಾರ ತಾಲೂಕಿನ ಶಿರವಾಡದ ಜಾಂಬಾ ಕ್ರಾಸ್ ಬಳಿ ನಡೆದಿದೆ.
ಶಿರವಾಡ ಮೂಲದ ಸುಭಾಷ್ ಬಾಡ್ಕರ್ ಎಂಬ ಯುವಕ ಬಸ್ ಚಾಲಕ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಆರೋಪಿ. ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಸ್ಕೂಟಿ ಚಲಾಯಿಸಿದ್ದಲ್ಲದೇ, ಈತ ಕಾರವಾರದಿಂದ ಕಡವಾಡ ಗ್ರಾಮಕ್ಕೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ಗೆ ಹೋಗಲು ದಾರಿ ಬಿಡದೇ ಕಾಡಿಸಿದ್ದಾನೆ. ಈ ಯುವಕ ಬೇಕಂತಲೇ ಬಸ್ ಮುಂದೆ ಬೈಕ್ ಸ್ಲೋ ಆಗಿ ಓಡಿಸುತ್ತ, ಅಲ್ಲಲ್ಲಿ ಬೈಕ್ ನಿಲ್ಲಿಸುತ್ತ ಬಸ್ ಸಂಚಾರಕ್ಕೆ ಅಡತಡೆ ಮಾಡಿದ್ದಲ್ಲದೇ ಉದ್ಧಟತನ ಪ್ರದರ್ಶಿಸಿದ್ದಾನೆ.
ಕೊನೆಗೆ ಬಸ್ ಮುಂದೆಯೇ ಸ್ಕೂಟಿ ನಿಲ್ಲಿಸಿ ಚಾಲಕ, ನಿರ್ವಾಹಕರೊಂದಿಗೆ ವಾಗ್ವಾದಕ್ಕೆ ಇಳಿದು ಹಲ್ಲೆ ಕೂಡ ನಡೆಸಿದ್ದಾನೆ. ಈ
ಘಟನೆಯಲ್ಲಿ ಚಾಲಕ ಮಹ್ಮದ್ ಇಸಾಕ್ ಹಲ್ಲೆಗೊಳಗಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು, ಯುವಕ ನಡೆಸಿರುವ ದಾಂಧಲೆ ಮೊಬೈಲ್ದಲ್ಲಿ ಸೆರೆ ಹಿಡಿಯಲಾಗಿದ್ದು, ಈ ಬಗ್ಗೆ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಗುಂಡು ಹಾರಿಸಿ ದರೋಡೆ: ಆರೋಪಿಗಳ ಬಂಧನ - House Robbery Case