ಬಜೆಟ್ ಅಧಿವೇಶನ: ವಿಧಾನಪರಿಷತ್ ಕಲಾಪದ ನೇರ ಪ್ರಸಾರ
🎬 Watch Now: Feature Video
ಬೆಂಗಳೂರು: ಫೆ.23ರವರೆಗೆ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಪರಿಷತ್ ಕಲಾಪ ನಡೆಯುತ್ತಿದೆ. ವಿಧಾನಪರಿಷತ್ ಕಲಾಪದ ನೇರಪ್ರಸಾರ ಇಲ್ಲಿದೆ. ಬುಧವಾದರ ಕಲಾಪದ ವೇಳೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ನಿಲುವಳಿ ಸೂಚನೆ ಮಂಡಿಸಿತ್ತು, ನಿಯಮ 59 ರ ಅಡಿ ಚರ್ಚೆಗೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ನಿಯಮ 72 ರ ಅಡಿ ಚರ್ಚೆಗೆ ಅವಕಾಶ ನೀಡಿ ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು.
ಮಂಗಳವಾರದ ಪರಿಷತ್ ಕಲಾಪದ ವೇಳೆ ಮಾತನಾಡಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಡ್ತಿ ಪಡೆದು ಉಪನ್ಯಾಸಕರಾಗಿರುವ ಹಿರಿಯ ಮತ್ತು ಕಿರಿಯ ಸರ್ಕಾರಿ ನೌಕರರ ವೇತನದಲ್ಲಿನ ತಾರತಮ್ಯ ನಿವಾರಿಸಲು ಪ್ರಸ್ತುತ ಚಾಲ್ತಿಯಲ್ಲಿರುವ ವೇತನ ಹೆಚ್ಚಳ ನಿಯಮಗಳು/ಆದೇಶಗಳಿಗೆ ಆದಷ್ಟು ಬೇಗ ತಿದ್ದುಪಡಿ ತರಲಾಗುತ್ತದೆ ಎಂದು ತಿಳಿಸಿದ್ದರು. ನಿಯಮ 330ರ ಅಡಿ ಸದಸ್ಯರಾದ ಮರಿತಿಬ್ಬೇಗೌಡ, ಬೋಜೇಗೌಡ ಹಾಗೂ ಎಸ್.ವಿ.ಸಂಕನೂರ್ ಅವರು ಪ್ರಸ್ತಾಪಿಸಿದ ಚರ್ಚೆಗೆ ಸಚಿವರು ಉತ್ತರಿಸಿದ್ದರು.