ಕರ್ಕಶ ಶಬ್ದ ಮಾಡುತ್ತಿದ್ದ ಬೈಕ್ಗಳ ಸೈಲೆನ್ಸರ್ ನಾಶ ಮಾಡಿದ ಪೊಲೀಸರು: ವಿಡಿಯೋ - Noisy bike silencer destroyed - NOISY BIKE SILENCER DESTROYED
🎬 Watch Now: Feature Video


Published : May 24, 2024, 7:19 PM IST
ಚಿಕ್ಕಮಗಳೂರು : ಜಿಲ್ಲೆಯ ಕಡೂರು ತಾಲೂಕಿನ ಪೊಲೀಸರು ಇಡೀ ತಾಲೂಕಿನ ಜನತೆ ಮೆಚ್ಚುವಂತಹ ಹಾಗೂ ಶ್ಲಾಘನೆ ವ್ಯಕ್ತಪಡಿಸುವಂತಹ ಕೆಲಸವನ್ನು ಮಾಡಿದ್ದಾರೆ. ನಿತ್ಯ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕರ್ಕಶ ಶಬ್ದ ಮಾಡುತ್ತಿದ್ದ ಕೆಲ ಯುವಕರ ಬೈಕ್ಗಳಲ್ಲಿನ ಸೈಲೆನ್ಸರ್ಗಳನ್ನು ವಶಕ್ಕೆ ಪಡೆದು ನಾಶ ಮಾಡಿದ್ದಾರೆ.
ಕಡೂರು ಪೊಲೀಸರಿಂದ ಡಿಫೆಕ್ಟಿವ್ ಸೈಲೆನ್ಸರ್ ಕಾರ್ಯಾಚರಣೆ ತುಂಬಾ ಜೋರಾಗಿ ಮುಂದುವರೆದಿದೆ. ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್ಗಳನ್ನು ಕಿತ್ತು ಹಾಕಿಸಿ, ಬೈಕ್ ಸವಾರರ ಮುಂದೆಯೇ ರೋಡ್ ರೋಲರ್ ಹತ್ತಿಸುವ ಮೂಲಕ ನೂರಾರು ಸೈಲೆನ್ಸರ್ಗಳನ್ನು ನಾಶ ಮಾಡಿದ್ದಾರೆ.
ಇತ್ತೀಚಿಗೆ ಪಟ್ಟಣದಲ್ಲಿ ಕರ್ಕಶ ಶಬ್ದವನ್ನುಂಟು ಮಾಡುವ ಬೈಕುಗಳ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದ್ದವು. ಈ ಬಗ್ಗೆ ಸಾರ್ವಜನಿಕರು ಹಾಗೂ ಕೆಲ ಪ್ರಜ್ಞಾವಂತರು ಕೂಡಲೇ ಪೊಲೀಸರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಎಚ್ಚೆತ್ತ ಪೊಲೀಸರು ದಿಟ್ಟ ಕ್ರಮ ಜರುಗಿಸಿದ್ದಾರೆ. ಡಿಫೆಕ್ಟಿವ್ ಸೈಲೆನ್ಸರ್ ಅಳವಡಿಸದಂತೆ ವಾರ್ನಿಂಗ್ ಕೂಡ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಯಾರಾದರೂ ಈ ರೀತಿಯ ಸೈಲೆನ್ಸರ್ ಅಳವಡಿಸಿ ರಸ್ತೆಗೆ ಇಳಿದರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಹಾಗೂ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಕರ್ಕಶ ಶಬ್ಧ ಮಾಡುವ ಬೈಕ್ ಸೈಲೆನ್ಸರ್ ಸದ್ದಡಗಿಸಿದ ಹುಬ್ಬಳ್ಳಿ ಪೊಲೀಸರು; ರೋಡ್ ರೋಲರ್ನಿಂದ ಪುಡಿ ಪುಡಿ - BIKE SILENCER