ಬೆಳಗಾವಿಯಲ್ಲಿ ಟಿಸಿ ಏರಿ ಆತಂಕ ಮೂಡಿಸಿದ ಯುವಕ; ಯುವಕನ ಹುಚ್ಚಾಟಕ್ಕೆ ಬೆಚ್ಚಿಬಿದ್ದ ಜನ - young man sitting on TC - YOUNG MAN SITTING ON TC
🎬 Watch Now: Feature Video


Published : May 25, 2024, 10:07 AM IST
ಬೆಳಗಾವಿ: ವಿದ್ಯುತ್ ಟ್ರಾನ್ಸಫರ್ಮರ್(ಟಿಸಿ) ಮೇಲೆ ಹಾಡು ಹಾಡುತ್ತ ಕುಳಿತು ಅಪರಿಚಿತ ಯುವಕನೋರ್ವ ಹೈಡ್ರಾಮಾ ಸೃಷ್ಟಿಸಿದ ಘಟನೆ ಬೆಳಗಾವಿ ಟಿಳಕ ಚೌಕ್ನಲ್ಲಿ ನಿನ್ನೆ (ಶುಕ್ರವಾರ) ಸಂಜೆ ನಡೆದಿದೆ.
ಯುವಕನ ಹುಚ್ಚಾಟದಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ ಎಷ್ಟೇ ಕೇಳಿಕೊಂಡರೂ ಆತ ಕೆಳಗೆ ಇಳಿಯಲೇ ಇಲ್ಲ. ಆತ ಹಾಡು ಹಾಡುತ್ತ ಕುಳಿತುಕೊಂಡಿದ್ದ. ಈ ದೃಶ್ಯ ಕಂಡ ಕೆಳಗಿದ್ದ ಜನರು ಗಾಬರಿಗೊಂಡಿದ್ದಾರೆ.
ಸ್ಥಳೀಯರು ಹೆಸ್ಕಾಂ ಕಚೇರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಕೊನೆಗೆ ಟಿಸಿ ಏರಿದ ಹೆಸ್ಕಾಂ ಸಿಬ್ಬಂದಿಯು ಆ ಯುವಕನನ್ನು ಹೊಡೆದು, ಬಡಿದು ಹರಸಾಹಸ ಪಟ್ಟು ಕೆಳಗಿಸುವಲ್ಲಿ ಯಶಸ್ವಿಯಾದರು. ಈ ಯುವಕ ಯಾರು? ಯಾಕೆ ಕುಳಿತಿದ್ದ ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಕರ್ಕಶ ಶಬ್ದ ಮಾಡುತ್ತಿದ್ದ ಬೈಕ್ಗಳ ಸೈಲೆನ್ಸರ್ ನಾಶ ಮಾಡಿದ ಪೊಲೀಸರು: ವಿಡಿಯೋ - Noisy bike silencer destroyed
ಅಪರೂಪದ ಚಿಪ್ಪು ಹಂದಿ ರಕ್ಷಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ: ವಿಡಿಯೋ - Pangolin Rescued