ಧಾರವಾಡದಲ್ಲಿ ಧಾರಾಕಾರ ಮಳೆ ; ತುಂಬಿ ಹರಿದ ಇಂದಿರಮ್ಮನ ಕೆರೆ - Hulikere Indiramma lake overflowing
Published : Jul 30, 2024, 5:43 PM IST
ಧಾರವಾಡ : ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಳ್ನಾವರ ತಾಲೂಕಿನ ಹುಲಿಕೇರಿಯ ಇಂದಿರಮ್ಮನ ಕೆರೆ ತುಂಬಿ ಹರಿಯುತ್ತಿದೆ. ಇಂದಿರಮ್ಮನ ಕೆರೆಯು ಹುಲಿಕೇರಿ ಗ್ರಾಮದ ಐತಿಹಾಸಿಕ ಕೆರೆಯಾಗಿದೆ. ಈ ಕೆರೆಯ ನೀರು ಡೌಗಿನಾಲಾದಿಂದ ಕಾಳಿ ನದಿಗೆ ಸೇರುತ್ತದೆ.
2019ರಲ್ಲಿ ಇಂದಿರಮ್ಮನ ಕೆರೆ ಕೋಡಿ ಒಡೆದು ಅನಾಹುತ ಸೃಷ್ಟಿ ಮಾಡಿತ್ತು. ಮಳೆ ನೀರು ಹೆಚ್ಚಾದರೆ ಕೆರೆಯ ನೀರು ಅಳ್ನಾವರ ಭಾಗದ ಕೆಲವು ಮನೆಗಳಿಗೆ ನುಗ್ಗುವ ಸಾಧ್ಯತೆಯಿದೆ. ಇಂದಿರಮ್ಮನ ಕೆರೆ ತುಂಬಿ ಹರಿಯುತ್ತಿರುವುದನ್ನು ಹಾಗೂ ಇದರ ರಮಣೀಯ ದೃಶ್ಯಗಳನ್ನು ಸ್ಥಳೀಯರು ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ.
ಧಾರವಾಡ-ಉತ್ತರ ಕನ್ನಡ ಜಿಲ್ಲೆ ಮಧ್ಯದ ಅರಣ್ಯ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆ ಬೇಡ್ತಿ ಹಳ್ಳ ಉಕ್ಕಿ ಹರಿಯುತ್ತಿದೆ. ಇದರಿಂದ ಅಂಬ್ಲಿಕೊಪ್ಪ-ಡೊಂಬರಿಕೊಪ್ಪ ಮಧ್ಯದ ಸಂಪರ್ಕ ಕಡಿತಗೊಂಡು, ಸೇತುವೆ ಮುಳುಗಡೆಯಾಗಿದೆ. ರಾತ್ರಿಯಿಡೀ ಅರಣ್ಯ ಭಾಗದಲ್ಲಿ ಮಳೆ ಸುರಿದಿದೆ. ಈ ಹಿನ್ನೆಲೆ ಬೇಡ್ತಿಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ.
ಇದನ್ನೂ ಓದಿ : ಬಾಗಲಕೋಟೆ: ಘಟಪ್ರಭಾ ನದಿ ಪ್ರವಾಹ, ಯಾದವಾಡ ಸೇತುವೆ ಮುಳುಗಡೆ - yadwada bridge inundation