ಚಿಕ್ಕಮಗಳೂರಿನಲ್ಲಿ ಮನೆಯೊಳಗೆ ನುಗ್ಗಿದ 12 ಅಡಿ ಉದ್ದದ ಕಾಳಿಂಗ ಸರ್ಪ!: ವಿಡಿಯೋ ನೋಡಿ - King Cobra - KING COBRA
🎬 Watch Now: Feature Video
Published : May 26, 2024, 8:23 AM IST
ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಾಳಿಂಗ ಸರ್ಪಗಳ ಹಾವಳಿ ಹೆಚ್ಚು. ಈ ದೈತ್ಯ ಹಾವುಗಳು ಇದೀಗ ಮನೆಯೊಳಗೂ ಬರಲಾರಂಭಿಸಿವೆ. ಜಿಲ್ಲೆಯ ಎನ್ಆರ್ಪುರ ತಾಲೂಕಿನ ನಿವಾಸಿಯಾದ ಮಂಜುನಾಥ ಗೌಡರ ಮನೆಯೊಳಗೆ 12 ಅಡಿ ಉದ್ದದ ಕಾಳಿಂಗ ನುಗ್ಗಿದ್ದು, ಉರಗ ರಕ್ಷಕರು ರಕ್ಷಿಸಿದ್ದಾರೆ.
ಮಂಜುನಾಥ ಗೌಡ ಅವರು ಸ್ನಾನ ಮಾಡಿ ಬಟ್ಟೆ ಹರಡಲು ಮನೆ ಹಿಂಬದಿಯ ಬಾಗಿಲು ತೆಗೆಯುತ್ತಿದ್ದಂತೆ ದಿಢೀರ್ ಮನೆಯೊಳಗೆ ನುಗ್ಗಿದ ಕಾಳಿಂಗ ಅಡುಗೆ ಮನೆಗೆ ಹೋಗಿದೆ. ಅಡುಗೆ ಮನೆಗೆ ಬರುತ್ತಿದ್ದಂತೆ ಬುಸುಗುಟ್ಟುತ್ತಾ ಭಯ ಹುಟ್ಟಿಸಿದೆ. ತಕ್ಷಣ ಮಂಜುನಾಥ ಅವರು ಕುದುರೆ ಗುಂಡಿಯ ಉರಗ ತಜ್ಞ ಪಿ.ಜಿ.ಹರೀಂದ್ರ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅವರು ಹಾವಿಗೆ ಗಾಯವಾಗದಂತೆ ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಬಳಿಕ ಅರಣ್ಯ ಇಲಾಖೆಯ ಸಲಹೆಯಂತೆ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ