ಹಾವೇರಿ: ಅಡುಗೆ ಸಿಲಿಂಡರ್ ಸ್ಫೋಟ; ಹೋಟೆಲ್ ಮಾಲೀಕನಿಗೆ ಗಾಯ - Gas Cylinder Explosion - GAS CYLINDER EXPLOSION
🎬 Watch Now: Feature Video
Published : Jul 25, 2024, 11:46 AM IST
ಹಾವೇರಿ: ರಸ್ತೆ ಬದಿ ಇರುವ ಹೊಟೇಲ್‌ನಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಮಾಲೀಕನಿಗೆ ಗಾಯವಾಗಿರುವ ಘಟನೆ ಹಾನಗಲ್ ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ಇಂದು ಮುಂಜಾನೆ ನಡೆಯಿತು.
ಇದನ್ನೂ ಓದಿ : ಕೃಷ್ಣಾ ನದಿಯಲ್ಲಿ ಪ್ರವಾಹದ ಭೀತಿ: ನಡುಗಡ್ಡೆಯಲ್ಲಿ ಸಿಲುಕಿದ 40ಕ್ಕೂ ಹೆಚ್ಚು ಕುಟುಂಬಗಳು - family stuck in island
ಗ್ರಾಮದ ಪ್ಲಾಟ ಎಂಬಲ್ಲಿರುವ ಬಸ್ ನಿಲ್ದಾಣದ ಸಮೀಪ ಈ ಅಂಗಡಿ ಇದ್ದು ಬೆಳಗ್ಗೆ ಚಹಾ ಮಾಡಲು ಹೋದಾಗ ಸಿಲಿಂಡರ್ ದಿಢೀರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಮಾಲೀಕ ಹನುಮಂತಪ್ಪಗೆ ಸುಟ್ಟಗಾಯಗಳಾಗಿದ್ದು, ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.
ಇದನ್ನೂ ಓದಿ : ಮದ್ದು ಕಟ್ಟುವ ವೇಳೆ ಸ್ಫೋಟ: ಓರ್ವ ವ್ಯಕ್ತಿ ಸಜೀವ ದಹನ