ಕಾಫಿನಾಡಲ್ಲಿ ಧಾರಾಕಾರ ಮಳೆ; ರೈತರ ಮುಖದಲ್ಲಿ ಮಂದಹಾಸ - Heavy rainfall in chikkamagalure

🎬 Watch Now: Feature Video

thumbnail

By ETV Bharat Karnataka Team

Published : Mar 17, 2024, 8:33 PM IST

ಚಿಕ್ಕಮಗಳೂರು : ಈ ಬಾರಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗದೆ ಮಲೆನಾಡು, ಅರೆ ಮಲೆನಾಡು ಹಾಗೂ ಬಯಲು ಸೀಮೆ ಭಾಗದಲ್ಲಿ ಭೂಮಿ ಕಾದ ಕಾವಲಿಯಂತಾಗಿತ್ತು. ನೀರಿಲ್ಲದೆ ಕಾಫಿ ತೋಟಗಳು, ಅಡಿಕೆ ತೋಟಗಳು ಇನ್ನಿತರ ಬೆಳೆಗಳು ಸಂಪೂರ್ಣ ಒಣಗಿ ನಿಂತಿದ್ದವು. ಮಳೆಗಾಗಿ ಕಾಯುತ್ತಿದ್ದ ರೈತರು ಹಾಗೂ ಜನರು ಯಾವಾಗ ಮಳೆ ಬರುತ್ತೋ ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದರು. ಆದರೆ ಜಿಲ್ಲೆಯ ಐದಳ್ಳಿ, ಕಣತಿ, ಮಾಗೋಡು, ಹುಣಸೇಹಳ್ಳಿ, ಕಡಬಗೆರೆ ಸುತ್ತಮುತ್ತ ವರುಣ ತಂಪೆರೆದಿದ್ದಾನೆ. 

ಸಾಧಾರಣಕ್ಕಿಂತ ಜೋರಾಗಿಯೇ ಸುರಿದ ಮಳೆಯಿಂದ ಜನರಲ್ಲಿ ಸಂತಸ ಮನೆ ಮಾಡಿದ್ದು, ಮಧ್ಯಾಹ್ನದ ನಂತರ ಈ ಭಾಗದಲ್ಲಿ ಮೋಡ ಕವಿದ ವಾತಾವರಣವಿತ್ತು. ಬಿಸಿಲ ಧಗೆಗೆ ಈ ಭಾಗದಲ್ಲಿ ಕಾಫಿ-ಮೆಣಸು ಉಳಿಸಿಕೊಳ್ಳೋದೆ ಸವಾಲಾಗಿತ್ತು. ಮಳೆಯಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

ಕಳೆದ ಐದು ದಿನದ ಹಿಂದೆ ಮಲೆನಾಡಿನಲ್ಲಿ ಮೊದಲ ಮಳೆಯಾಗಿತ್ತು. ಆ ಸಮಯದಲ್ಲಿ ಆ ಭಾಗದ ಜನರು ಸ್ವಲ್ಪ ನಿಟ್ಟಿಸಿರು ಬಿಡುವಂತಾಗಿತ್ತು. ಇಂದು ಹತ್ತಾರು ಭಾಗದಲ್ಲಿ ನಿರಂತರ ಧಾರಾಕಾರ ಮಳೆ ಸುರಿದಿದೆ. ಮಳೆ ಹೀಗೆಯೇ ಸುರಿಯಲಿ ಎಂದು ವರುಣ ದೇವರಲ್ಲಿ ಈ ಭಾಗದ ಜನರು ಬೇಡಿಕೊಂಡಿದ್ದಾರೆ.  

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಗ್ರಾಮಗಳಲ್ಲಿ ಮಳೆ ಸುರಿದಿದೆ. ಮಳೆಯನ್ನ ನೋಡಿ ರೈತರು ಹಾಗೂ ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಸರಿಯಾದ ಸಮಯಕ್ಕೆ ಮಳೆ ಬಾರದೆ, ಈ ವರ್ಷ ಬಯಲು ಸೀಮೆ ಭಾಗವಾದ ಕಡೂರು, ತರೀಕೆರೆ ತಾಲೂಕಿನಲ್ಲಿ ಅಂತರ್ಜಲ ಮಟ್ಟವೂ ಕುಸಿದಿದೆ. 

ಇದನ್ನೂ ಓದಿ : ಚಿಕ್ಕಮಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ವಿಡಿಯೋ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.