ಸಿಎಂ ಸಿದ್ದರಾಮಯ್ಯಗೆ ನೀಡಿದ ಮನವಿ ಪತ್ರಗಳು ಕಸದರಾಶಿಯಲ್ಲಿ ಪತ್ತೆ; ರೈತರ ಪ್ರತಿಭಟನೆ - Petition letters found in garbage - PETITION LETTERS FOUND IN GARBAGE
🎬 Watch Now: Feature Video
Published : Jul 12, 2024, 3:56 PM IST
ಚಾಮರಾಜನಗರ : ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೊಟ್ಟಿದ್ದ ಮನವಿ ಪತ್ರಗಳು ಕಸದರಾಶಿಯಲ್ಲಿ ಪತ್ತೆಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಜು. 10 ರಂದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಹಿನ್ನೆಲೆ ಚಾಮರಾಜನಗರದ ಡಾ. ಬಿ. ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕೃತಜ್ಞತೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಚಾಮರಾಜನಗರ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ತಮ್ಮ ಸಮಸ್ಯೆಗೆ ಪರಿಹಾರಕ್ಕಾಗಿ ಮನವಿ ಪತ್ರ ಸಲ್ಲಿಸಿದ್ದರು.
ಆದರೆ, ಮುಖ್ಯಮಂತ್ರಿಗಳಿಗೆ ಕೊಟ್ಟ ಪತ್ರಗಳು ಕಾರ್ಯಕ್ರಮ ನಡೆದ ಸ್ಥಳದಲ್ಲೇ ಸಿಕ್ಕಿವೆ. ಸ್ಟೇಡಿಯಂಗೆ ಶುಕ್ರವಾರದಂದು ಕ್ರಿಕೆಟ್ ಆಡಲು ತೆರಳಿದ್ದ ಯುವಕರು ವೇದಿಕೆ ಬಳಿ ಹೋಗಿದ್ದಾಗ ಮನವಿ ಪತ್ರಗಳು ಅಲ್ಲೇ ಬಿದ್ದಿರುವುದನ್ನು ಕಂಡಿದ್ದಾರೆ. ಬಳಿಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ, ಮನವಿ ಪತ್ರಗಳು ಕಸದರಾಶಿಯಲ್ಲಿ ಪತ್ತೆಯಾಗಿರುವುದಕ್ಕೆ ಜನರು, ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕಬ್ಬು ಬೆಳೆಗಾರರಿಂದ ಪ್ರತಿಭಟನೆ : ಜನರು, ರೈತ ಸಂಘಟನೆ ಕಾರ್ಯಕರ್ತರು ಕೊಟ್ಟ ಮನವಿ ಪತ್ರಗಳು ಕಸದ ರಾಶಿಯಲ್ಲಿ ಸಿಕ್ಕಿರುವುದು ಖಂಡನೀಯ. ಸಮಸ್ಯೆಗಳ ಪತ್ರವನ್ನು ಕೊಟ್ಟರೆ ಈಡೇರಿಸುವ ಬದಲು ಅಲ್ಲೇ ಬಿಸಾಡುವುದು ಎಷ್ಟು ಸರಿ?. ಕೂಡಲೇ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ಬೆಳಗಾವಿಯಲ್ಲಿ ರೈತರ ಪ್ರತಿಭಟನೆ - Farmers Protest