ಗೀತಾ ಶಿವರಾಜ್ ಕುಮಾರ್ ಪ್ರಚಾರದ ವೇಳೆ ನಟ ಶಿವಣ್ಣನಿಗೆ ಮೇಕೆ ಮರಿ ಉಡುಗೂರೆ - Baby goat gift to Shivarajkumar - BABY GOAT GIFT TO SHIVARAJKUMAR
🎬 Watch Now: Feature Video
Published : Apr 12, 2024, 10:25 AM IST
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತವರು ಕ್ಷೇತ್ರ ಶಿಕಾರಿಪುರದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ನಿನ್ನೆ ಬೆಳಗ್ಗೆಯಿಂದ ಸಂಜೆ ತನಕ ಪ್ರಚಾರ ನಡೆಸಿದ ಅವರು ಈ ಬಾರಿ ತಮಗೆ ಮತ ಹಾಕಿ ಎಂದು ಮನವಿ ಮಾಡಿದರು. ಈ ವೇಳೆ ಶಿಕಾರಿಪುರ ತಾಲೂಕು ಕಾಗಿನಲ್ಲಿ ಪ್ರಚಾರ ಸಭೆ ನಡೆಸುವಾಗ ನಟ ಶಿವರಾಜ್ ಕುಮಾರ್ ಅವರಿಗೆ ಅಭಿಮಾನಿಗಳು ಕಂಬಳಿ ಹಾಗೂ ಮೇಕೆ ಮರಿಯನ್ನು ಉಡುಗೊರೆಯಾಗಿ ನೀಡಿದರು. ಅಭಿಮಾನಿಗಳ ಪ್ರಿತಿಯ ಗಿಪ್ಟ್ನ್ನು ನಟ ಶಿವಣ್ಣ ಸಂತೋಷದಿಂದ ಸ್ವೀಕಾರ ಮಾಡಿದರು. ನಂತರ ತಮ್ಮ ಪತ್ನಿಗೆ ಮತ ನೀಡಿ ಒಂದು ಅವಕಾಶ ನೀಡುವಂತೆ ವಿನಂತಿಸಿಕೊಂಡರು.
ಬಳಿಕ ಅಭಿಮಾನಿಗಳ ಕೋರಿಕೆಯ ಮೇರೆಗೆ ತಮ್ಮ ವಿವಿಧ ಚಿತ್ರದ ಗೀತೆಯ ಹಾಡುಗಳನ್ನು ಹಾಡಿದರು. ಮೈಲಾಪುರ ಮೈಲಾರಿ ಸಾಂಗ್ ಹಾಡಿ ರಂಜಿಸಿದರು. ಈ ವೇಳೆ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ಆಯನೂರು ಮಂಜುನಾಥ್, ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗರಾಜ್ ಗೌಡ, ದರ್ಶನ್ ಉಳ್ಳಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಇದನ್ನೂ ಓದಿ : ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವರಾಜ್ಕುಮಾರ್ ಚುನಾವಣಾ ರ‍್ಯಾಲಿ