ಚಾಮರಾಜನಗರ: ಅಕ್ಷಯ ತದಿಗೆ ಅಮಾವಾಸ್ಯೆ, ಮಾದಪ್ಪನ ಬೆಟ್ಟಕ್ಕೆ ಹರಿದು ಬಂದ ಭಕ್ತರ ದಂಡು - MALE MAHADESHWARA TEMPLE
🎬 Watch Now: Feature Video
ಚಾಮರಾಜನಗರ: ನಾಡಿನ ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಹದೇಶ್ವರ ಬೆಟ್ಟಕ್ಕೆ ಅಕ್ಷಯ ತದಿಗೆ ಅಮಾವಾಸ್ಯೆ ಹಿನ್ನೆಲೆ ಭಕ್ತಸಾಗರವೇ ಹರಿದು ಬಂದಿದೆ. ಅಕ್ಷಯ ತದಿಗೆ ಅಮಾವಾಸ್ಯೆ ಪ್ರಯುಕ್ತ ಬೆಳಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನಡೆದಿದ್ದು, ಜೊತೆಗೆ ಹುಲಿ ವಾಹನ ಉತ್ಸವ, ಬಸವ ವಾಹನ ಉತ್ಸವ, ರುದ್ರಾಕ್ಷಿ ಮಂಟಪೋತ್ಸವ, ಬೆಳ್ಳಿ ರಥೋತ್ಸವ ಸಡಗರದಿಂದ ಜರುಗಿದೆ.
ಇನ್ನು ಅಮವಾಸ್ಯೆ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಮಹದೇಶ್ವರನ ದರ್ಶನ ಮಾಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬಂದಿದ್ದು, ಮಳೆಯ ನಡುವೆಯೂ ಭಕ್ತಾದಿಗಳು ಉತ್ಸಾಹದಿಂದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ದೇವಾಲಯದ ಸಮೀಪದ ಅಲಂಬಡಿ ಬಸವನಿಗೆ ಎಣ್ಣೆ ಹಾಗೂ ಹಾಲಾಭಿಷೇಕ ಮಾಡಿದ ರೈತರು ಮಳೆ-ಬೆಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಏನಿದು ತದಿಗೆ ಅಮಾವಾಸ್ಯೆ: ಚೈತ್ರ ಮಾಸದ ಅಮಾವಾಸ್ಯೆಯನ್ನು ಚೈತ್ರ ಅಮಾವಾಸ್ಯೆ ಅಥವಾ ಅಕ್ಷಯ ತದಿಗೆ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಈ ಅಮಾವಾಸ್ಯೆಯ ನಂತರ 2024 ರ ವೈಶಾಖ ಮಾಸ ಆರಂಭವಾಗುತ್ತದೆ. ಅಮವಾಸ್ಯೆಯ ದಿನದಂದು ಕೆಲವು ಧಾರ್ಮಿಕ ಆಚರಣೆಗಳನ್ನು ಮಾಡುವುದರಿಂದ ಎಲ್ಲ ರೀತಿಯ ದೋಷಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ನೇಮದಲ್ಲಿ ಪಾಲ್ಗೊಂಡ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ: ಮತ್ತಷ್ಟು ಎತ್ತರಕ್ಕೆ ಬೆಳೆಯುವ ಅಭಯ ನೀಡಿದ ದೈವ - Srinidhi Shetty