ಶಾಲೆ ಆರಂಭ : ಎಂಟನೇ ತರಗತಿ ಇಂಗ್ಲೀಷ್ ಪಾಠ ಬೋಧಿಸಿದ ಡಿಸಿ - DC Divya Prabhu Teach English - DC DIVYA PRABHU TEACH ENGLISH
🎬 Watch Now: Feature Video
Published : May 31, 2024, 5:26 PM IST
|Updated : May 31, 2024, 5:31 PM IST
ಧಾರವಾಡ : ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಆರಂಭಗೊಂಡಿವೆ. ಅದರಂತೆ ಧಾರವಾಡದಲ್ಲಿ ಶಾಲಾ ಪ್ರಾರಂಭೋತ್ಸವದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಮಕ್ಕಳಿಗೆ ಎಂಟನೇ ತರಗತಿ ಇಂಗ್ಲೀಷ್ ಪಾಠ ಮಾಡಿದರು.
ಧಾರವಾಡದ ಟಿಇಟಿ ಶಾಲೆಗೆ ಭೇಟಿ ನೀಡಿದ ಡಿಸಿ ದಿವ್ಯಪ್ರಭು ಮಕ್ಕಳ ಮೇಲೆ ಹೂವು ಹಾಕುವ ಮೂಲಕ ಶಾಲೆಗೆ ಸ್ವಾಗತ ಕೋರಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಗೆ ಡಿಸಿ ಪಾಠ ಮಾಡಿದರು. ಶಿಕ್ಷಕಿಯಾಗಿ ಮಕ್ಕಳಿಗೆ ಪಾಠ ಮಾಡಿದ ಜಿಲ್ಲಾಧಿಕಾರಿ ವಿದ್ಯಾರ್ಥಿಗಳೊಂದಿಗೆ ಫೋಟೋ ತೆಗೆಸಿಕೊಂಡು ಶುಭಕೋರಿದರು. ಪಾಠ ಮಾಡುವಾಗ ನಿಮಗೆ ಯಾವ ವಿಷಯ ಕಠಿಣ ಎಂದು ವಿದ್ಯಾರ್ಥಿಗಳನ್ನು ಕೇಳಿದರು. ಅದಕ್ಕೆ ಮಕ್ಕಳು ಇಂಗ್ಲೀಷ್ ಭಾಷೆ ಕಠಿಣ ಎಂದು ಹೇಳಿದರು. ಹೀಗಾಗಿ ವಿದ್ಯಾರ್ಥಿಗಳಿಗೆ ಎಂಟನೇ ತರಗತಿಯ ಇಂಗ್ಲೀಷ್ ಪಾಠ ಬೋಧಿಸಿದರು. ಜಿಲ್ಲಾಧಿಕಾರಿ ಬೋಧನೆಯನ್ನು ವಿದ್ಯಾರ್ಥಿಗಳು ಶ್ರದ್ದೆಯಿಂದ ಆಲಿಸಿದರು.
ಇಂಗ್ಲೀಷ್ ಭಾಷೆಯನ್ನು ಕೇವಲ ಒಂದು ವಿಷಯವಾಗಿ ನೋಡಬೇಕು. ಮಾತೃ ಭಾಷೆ ತಪ್ಪಾದರೆ ಮಾತ್ರ ತಪ್ಪು. ಬೇರೆ ಭಾಷೆ ಅರ್ಥವಾದರೆ ಸಾಕು ಎಂಬ ಮಾತನ್ನು ಹೇಳುವ ಮೂಲಕ ಮಕ್ಕಳಲ್ಲಿ ಉತ್ಸಾಹ ತುಂಬಿದರು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಹೊಂದಬೇಕು ಎಂದು ಕಿವಿಮಾತು ಹೇಳಿದರು. ಮಕ್ಕಳೊಂದಿಗೆ ಬೆರೆತಿರೋದರಿಂದ ಖುಷಿಯಾಗಿದೆ. ಮಕ್ಕಳಿಗೆ ಪಾಠ ಮಾಡಿದ್ದು ನನ್ನ ಬಾಲ್ಯದ ದಿನಗಳ ನೆನಪು ಮಾಡಿದೆ ಎಂದು ಖುಷಿ ಹಂಚಿಕೊಂಡರು.
ಇದನ್ನೂ ಓದಿ : ಟ್ರ್ಯಾಕ್ಟರ್ನಲ್ಲಿ ಶಾಲೆಗೆ ಮೊದಲ ದಿನ ಮಕ್ಕಳ ಗ್ರ್ಯಾಂಡ್ ಎಂಟ್ರಿ - School Reopen