ಪ್ರಕರಣ ವಾಪಸ್ ಪಡೆಯಲು ನಿರಾಕರಣೆ: ಗೃಹಿಣಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ - ಎರಡು ಗುಂಪುಗಗಳ ಗಲಾಟೆ

🎬 Watch Now: Feature Video

thumbnail

By ETV Bharat Karnataka Team

Published : Jan 23, 2024, 9:09 PM IST

ಹುಬ್ಬಳ್ಳಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೀದಿಯಲ್ಲಿ ಎರಡು ಗುಂಪುಗಳು ಕಟ್ಟಿಗೆ, ಕಲ್ಲುಗಳಿಂದ ಹೊಡೆದಾಡಿಕೊಂಡ ಘಟನೆ ಹಳೇ ಹುಬ್ಬಳ್ಳಿಯ ಶಿವಶಂಕರ ಕಾಲನಿಯಲ್ಲಿ ನಡೆದಿದೆ. ಜ್ಯೋತಿ ಹನೀಫ್​ ಅಂಚಿಟಗೇರಿ ಎಂಬುವವರು ಈ ಹಿಂದೆ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ತನ್ನ ಗಂಡನಾದ ಹನೀಫನ ವಿರುದ್ಧ ದೂರು ಸಲ್ಲಿಸಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ಕೇಸ್​​ ಹಿಂಪಡೆಯಲು ಹೇಳಿದ್ದಾರೆ. 

ಅದಕ್ಕೆ ಜ್ಯೋತಿ ಒಪ್ಪದಿದ್ದಕ್ಕೆ ಆರೋಪಿತರಾದ ಮೊಹಮ್ಮದ್​ ಹುಸೇನ್​ ಅಂಚಿಟಗೇರಿ, ಗುರುನಾಥ ಅಂಚೆಟಗೇರಿ, ಅನೀಲ ಹರ್ಪನಹಳ್ಳಿ, ಅರ್ಜುನ ಕಂಚಗಾರ ಸೇರಿ 12 ಜನರು ಕೂಡಿಕೊಂಡು ಇಟ್ಟಿಗೆ, ಕಟ್ಟಿಗೆಯಿಂದ ಹಾಗೂ ದೊಣ್ಣೆಯಿಂದ,  ಜ್ಯೋತಿ, ಮಂಜುನಾಥ, ಹಾಗೂ ಶಂಕರ ಇವರ ತಲೆಗೆ ಹೊಡೆದು, ಭರತ ಎಂಬಾತನ ಕೈ ಹೊಡೆದು ಗಾಯಗೊಳಿಸಿ ಅವಾಚ್ಯವಾಗಿ ಬೈದಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಜ್ಯೋತಿ ದೂರಿನಲ್ಲಿ ತಿಳಿಸಿದ್ದಾರೆ. 

ಪೊಲೀಸರ ಸಮ್ಮುಖದಲ್ಲಿಯೇ ಹೊಡೆದಾಟ ನಡೆದಿದ್ದು, ಲಘು ಲಾಠಿ ಏಟಿಗೆ ಜಗ್ಗದೇ ಮಾರಾಮಾರಿ ನಡೆಸಿದ ಕುಟುಂಬಸ್ಥರಲ್ಲಿ ನಾಲ್ವರಿಗೆ ಗಾಯಗಳಾಗಿದ್ದು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಿಮ್ಹಾನ್ಸ್​​​​ ಬಯಾಪ್ಸಿ ಸ್ಯಾಂಪಲ್ಸ್​​ ಕಳವು ಪ್ರಕರಣ: ಸಿಬ್ಬಂದಿಯಿಂದಲೇ ಕೇರಳದ ಮೆಡಿಕಲ್​​​ ಕಾಲೇಜುಗಳಿಗೆ ಮಾರಾಟ!

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.