ಸಂಸತ್ತಿನ ಬಜೆಟ್​ ಅಧಿವೇಶನ: ನೇರಪ್ರಸಾರ

🎬 Watch Now: Feature Video

thumbnail

By ETV Bharat Karnataka Team

Published : Jan 31, 2024, 11:04 AM IST

Updated : Jan 31, 2024, 12:52 PM IST

ನವದೆಹಲಿ: ಹಾಲಿ ಕೇಂದ್ರ ಸರ್ಕಾರದ ಕೊನೆಯ ಅಧಿವೇಶನವೂ ಆಗಿರುವ ಸಂಸತ್ತಿನ ಬಜೆಟ್​ ಅಧಿವೇಶನ ಇಂದಿನಿಂದ ಆರಂಭವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಕಲಾಪಗಳು ಆರಂಭವಾಗಲಿವೆ. 

ನಾಳೆ ಬಜೆಟ್‌ ಮಂಡನೆಯಾಗಲಿದೆ. ಈ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು, ಇರುವ ಅವಧಿಗೆ ಯೋಜನೆಗಳಿಗೆ ಅನುದಾನ ಪಡೆಯಲು ಮಂಡಿಸುವ ಮಧ್ಯಂತರ ಬಜೆಟ್​ ಇದಾಗಿದೆ. ಲೋಕಸಭೆಗೆ ಚುನಾವಣೆ ನಡೆದ ಬಳಿಕ ಅಧಿಕಾರಕ್ಕೆ ಬರುವ ಸರ್ಕಾರ ಜೂನ್​ ಅಥವಾ ಜುಲೈನಲ್ಲಿ ಪೂರ್ಣ ಬಜೆಟ್​ ಮಂಡಿಸಲಿದೆ. 

ನಾಳೆ ಮಂಡನೆಯಾಗುವ ಮಧ್ಯಂತರ ಬಜೆಟ್​ ಹಣಕಾಸಿನ ವರ್ಷದ ಆರಂಭಿಕ ತಿಂಗಳುಗಳಿಗೆ ಮಾತ್ರ ಅನ್ವಯವಾಗಿರುತ್ತದೆ. ಅಂದರೆ, 2024ರ ಏಪ್ರಿಲ್​ನಿಂದ ಜೂನ್‌ವರೆಗಿನ ಸಿಬ್ಬಂದಿ ವೇತನ ಮತ್ತು ಇತರ ಅಗತ್ಯ ವೆಚ್ಚಗಳನ್ನು ನಿಭಾಯಿಸುವ ಸಲುವಾಗಿ ಈ ಆಯವ್ಯಯ ಇರಲಿದೆ. 

ಬಜೆಟ್​ ಅಧಿವೇಶನ ಫೆಬ್ರವರಿ 9ರವರೆಗೆ ನಡೆಯಲಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಹಣಕಾಸುವ ಸಚಿವೆ ನಿರ್ಮಲಾ ಸೀತಾರಾಮನ್​ ಆಯವ್ಯಯ ಮಂಡಿಸುವರು.

ಇದನ್ನೂ ಓದಿ: ಕೇಂದ್ರ ಬಜೆಟ್‌: ಲೋಕ ಸಮರದ ಹೊಸ್ತಿಲಲ್ಲಿ ರಾಜ್ಯಕ್ಕೆ ಸಿಗುವುದೇ ಭರಪೂರ ಕೊಡುಗೆ?

Last Updated : Jan 31, 2024, 12:52 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.