ಬಜೆಟ್ ಅಧಿವೇಶನ: ರಾಜ್ಯಸಭೆಯಲ್ಲಿ ಚರ್ಚೆ - ನೇರ ಪ್ರಸಾರ - ಕೇಂದ್ರ ಮಧ್ಯಂತರ ಬಜೆಟ್
🎬 Watch Now: Feature Video
Published : Feb 8, 2024, 11:20 AM IST
|Updated : Feb 8, 2024, 1:30 PM IST
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಇಂದು ಕೇಂದ್ರ ಮಧ್ಯಂತರ ಬಜೆಟ್ 2024 - 25 ಕುರಿತು ಚರ್ಚೆ ಮುಂದುವರಿದಿದೆ. ಇಂದು ಉಭಯ ಸದನದಲ್ಲಿ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಲು ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಸಂಪುಟ ಸದಸ್ಯರ ಜೊತೆ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚಿಸಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉಭಯ ಸದನಗಳಲ್ಲಿ ಶ್ವೇತ ಪತ್ರ ಮಂಡಿಸಲಿದ್ದಾರೆ. 2014ಕ್ಕಿಂತ ಮುಂಚಿನ 10 ವರ್ಷಗಳ ಮತ್ತು ನಂತರದ 10 ವರ್ಷಗಳ ದೇಶದ ಆರ್ಥಿಕ ಸ್ಥಿತಿಗತಿಯ ಕುರಿತು ಮಾಹಿತಿ ಬಹಿರಂಗಪಡಿಸಲಿದ್ದಾರೆ. ಪ್ರತಿಪಕ್ಷಗಳ ಆರೋಪಗಳಿಗೆ ಶ್ವೇತಪತ್ರದ ಮೂಲಕ ಪ್ರಧಾನಿ ಮೋದಿ ಸರ್ಕಾರ ತಿರುಗೇಟು ನೀಡುತ್ತಿದೆ.
ಜನವರಿ 31ರಿಂದ ಮಧ್ಯಂತರ ಬಜೆಟ್ ಅಧಿವೇಶನ ಆರಂಭವಾಗಿದೆ. ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದರು. ಬಜೆಟ್ ಮಂಡಿಸಿದ ದಿನವೇ ಸಚಿವೆ ನಿರ್ಮಲಾ ಸೀತಾರಾಮನ್ ಶ್ವೇತಪತ್ರ ಕುರಿತು ಸುಳಿವು ನೀಡಿದ್ದರು. ಆರ್ಥಿಕ ವ್ಯವಸ್ಥೆ ಕುರಿತು ಸರ್ಕಾರವು ಶ್ವೇತಪತ್ರ ಹೊರತರಲಿದೆ ಎಂದಿದ್ದರು.
2014ರವರೆಗೆ ನಾವು ಎಲ್ಲಿದ್ದೆವು? ಮತ್ತು ಈಗ ಎಲ್ಲಿದ್ದೇವೆ ಎಂಬುದನ್ನು ಅರಿತುಕೊಳ್ಳಲು ಇದು ಸೂಕ್ತ ಸಮಯ. ಆ ವರ್ಷಗಳ ದುರಾಡಳಿತದಿಂದ ಪಾಠ ಕಲಿಯುವ ಉದ್ದೇಶದಿಂದ ಮಾತ್ರ ಸರ್ಕಾರ ಸದನದ ಮುಂದೆ ಶ್ವೇತಪತ್ರ ಇಡಲಿದೆ'' ಎಂದು ವಿತ್ತ ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದರು. ನಂತರ ಸುದ್ದಿಗೋಷ್ಠಿಯಲ್ಲೂ ವಿಷಯವನ್ನು ಅವರು ಖಚಿತಪಡಿಸಿದ್ದರು.