ಬಳ್ಳಾರಿ: 'ಪಾರ್ಥ ವಿಜಯ' ಬಯಲಾಟದಲ್ಲಿ ಖಡ್ಗ ಹಿಡಿದು ಕುಣಿದ ಶ್ರೀರಾಮುಲು - Sriramulu Dance - SRIRAMULU DANCE
🎬 Watch Now: Feature Video
Published : May 24, 2024, 2:10 PM IST
ಬಳ್ಳಾರಿ: ಬಳ್ಳಾರಿಯ ಹಡ್ಲಿಗಿ ಗ್ರಾಮದಲ್ಲಿ ಆಯೋಜಿಸಿದ್ದ ಬಯಲಾಟ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶ್ರೀರಾಮುಲು ಕುಣಿದು ಕುಪ್ಪಳಿಸಿದರು. ವೇದಿಕೆಯ ಮೇಲೆ ಪಾತ್ರಧಾರಿಗಳೊಂದಿಗೆ ಖಡ್ಗ ಹಿಡಿದ ಶ್ರೀರಾಮುಲು ಅವರನ್ನು ನೋಡಿ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹೊಡೆದರು.
ಲೋಕಸಭೆ ಚುನಾವಣೆಗೆ ಬಳ್ಳಾರಿ-ವಿಜಯನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ಸ್ಫರ್ಧಿಸಿದ್ದಾರೆ. ಬಳ್ಳಾರಿ ಸಂಸದೀಯ ಕ್ಷೇತ್ರ ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕೂಡ್ಲಿಗಿ, ಕಂಪ್ಲಿ, ಬಳ್ಳಾರಿ, ಬಳ್ಳಾರಿ ನಗರ, ಸಂಡೂರು 8 ವಿಧಾನಸಭಾ ಕ್ಷೇತ್ರಗಳಿವೆ. ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದು ಜೂನ್ 4ರ ಫಲಿತಾಂಶದತ್ತ ಎಲ್ಲರ ದೃಷ್ಟಿ ನೆಟ್ಟಿದೆ.
ಏನಿದು ಬಯಲಾಟ: ಕರ್ನಾಟಕ ಜಾನಪದ ಕಲೆಗಳಲ್ಲಿ ಬಯಲಾಟವು ಒಂದು. ಈ ಬಯಲಾಟ ಉತ್ತರ ಕನ್ನಡದಲ್ಲಿ ಪ್ರಸಿದ್ಧ. ಕರಾವಳಿ ಮಂದಿಗೆ ಯಕ್ಷಗಾನ ಹೇಗೋ. ಉತ್ತರ ಕನ್ನಡ ಮಂದಿಗೆ ಬಯಲಾಟವು ಹಾಗೇ. ಊರ ಜಾತ್ರೆ, ಸಮಾರಂಭ ಕಾರ್ಯಕ್ರಮದಲ್ಲಿ ಬಯಲಾಟ ನಡೆಸಲಾಗುತ್ತದೆ. ಬಯಲಾಟದ ಪಾತ್ರಧಾರಿಗಳು ಭರ್ಜರಿ ವೇಷಭೂಷಣ ಧರಿಸಿ ಭವ್ಯವಾದ ರಂಗಮಂಟಪದಲ್ಲಿ ಉದ್ದವಾದ ಮಾತುಗಾರಿಕೆ, ಹಾಸ್ಯ, ರೋಷ, ಸಂಗೀತದ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಾರೆ.
ಇದನ್ನೂ ಓದಿ: ಅದ್ಧೂರಿಯಾಗಿ ಜರುಗಿದ ಸ್ಕಂದಗಿರಿ ಪಾರ್ವತಾಂಭ ರಥೋತ್ಸವ: ವೈಭವ ಕಣ್ತುಂಬಿಕೊಂಡ ಭಕ್ತವೃಂದ - Rathotsava