ವಿಜಯಪುರ: ಅಪರೂಪದ ಪುನುಗು ಬೆಕ್ಕು ಪತ್ತೆ; ಚಿಕಿತ್ಸೆ ಕೊಡಿಸಿ ರಕ್ಷಿಸಿದ ಜನ - Civet Rescued - CIVET RESCUED

🎬 Watch Now: Feature Video

thumbnail

By ETV Bharat Karnataka Team

Published : Aug 7, 2024, 12:46 PM IST

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಊರಹಳ್ಳದ ಬಳಿ ಅಪರೂಪದ, ಅಳಿವಿನಂಚಿನ ಕಾಡು ಪ್ರಾಣಿ ಪುನುಗು ಬೆಕ್ಕು ಪತ್ತೆಯಾಗಿದೆ. ಪುನುಗು ಬೆಕ್ಕು ಅನಾರೋಗ್ಯದಿಂದ ಬಳಲುತ್ತಿದ್ದನ್ನು ಕಂಡ ತಡವಲಗಾ ಗ್ರಾಮದ ಸಂತೋಷ ಅಳ್ಳೊಳ್ಳಿ ಹಾಗೂ ಬಸವರಾಜ ತಾರಾಪೂರ ಎಂಬವರು ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ.

ಪುನುಗು ಬೆಕ್ಕನ್ನು ತಾವೇ ಹಿಡಿದು, ತಮ್ಮ ಬೈಕ್​ನಲ್ಲಿ ತಡವಲಗಾ ಗ್ರಾಮದ ಪಶುಸಂಗೋಪನಾ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ. ಪಶು ವೈದ್ಯಕೀಯ ಪರಿಕ್ಷಕ ಅಶೋಕ ಕಾಗರ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಪುನುಗು ಬೆಕ್ಕು ಚೇತರಿಸಿಕೊಂಡಿದೆ. ನಂತರ ಅದನ್ನು ಮತ್ತೆ ಊರಹಳ್ಳದ ಬಳಿ ಬಿಡಲಾಯಿತು.

ಅನಾರೋಗ್ಯದಿಂದ ಬಳಲುತ್ತಿದ್ದ ಅಪರೂಪದ ಪ್ರಾಣಿಯನ್ನು ಪಶು ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದ ಗ್ರಾಮಸ್ಥರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಂಡೀಪುರದಲ್ಲಿ ಅಪರೂಪದ ಚಿರತೆ: ಎರಡೂ ಕಣ್ಣುಗಳ ಬಣ್ಣ ವಿಭಿನ್ನ! - Leopard With Different Eye Colours

ಪುನುಗು ಬೆಕ್ಕುಗಳಂದ್ರೆ?: ಪ್ರಪಂಚದಲ್ಲಿ ಸುಮಾರು 7 ತರಹದ ಪುನುಗು ಬೆಕ್ಕುಗಳನ್ನು ಕಾಣಬಹುದಾಗಿದೆ. ಅವುಗಳ ಚರ್ಮ ಮತ್ತು ದೇಹದ ಕೆಲವೊಂದು ಭಾಗಗಳನ್ನು ಔಷಧವಾಗಿ ಕೆಲವರು ಬಳಸುತ್ತಾರೆ. ಹೀಗಾಗಿ, ಇತ್ತೀಚಿನ ವರ್ಷಗಳಲ್ಲಿ ಪುನುಗು ಬೆಕ್ಕುಗಳು ಕಾಣುವುದು ಅಪರೂಪವಾಗಿದೆ. ಅಳಿವಿನಂಚಿನಲ್ಲಿರುವ ಈ ಪ್ರಾಣಿಗಳನ್ನು ಬೇಟೆಗಾರರಿಂದ ರಕ್ಷಿಸಬೇಕಿದೆ. 

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.