ದೆಹಲಿಯ ಕರ್ತವ್ಯ ಪಥದಲ್ಲಿ 75ನೇ ಗಣರಾಜ್ಯೋತ್ಸವ ಪರೇಡ್: ನೇರಪ್ರಸಾರ

🎬 Watch Now: Feature Video

thumbnail

ನವದೆಹಲಿ: ಭಾರತ ಇಂದು 75ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. 1950ರ ಜನವರಿ 26ರಂದು ಸಂವಿಧಾನ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದು ದೇಶ ಗಣರಾಜ್ಯವಾಗಿತ್ತು. ಹೀಗಾಗಿ ಈ ದಿನವನ್ನು ಅತ್ಯಂತ ಸಂಭ್ರಮ, ಅದ್ಧೂರಿಯಾಗಿ ಆಚರಿಸಲಾಗುತ್ತದೆ. 

ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ ಮಿಲಿಟರಿ ಶಕ್ತಿ, ಮಹಿಳಾ ಸಬಲೀಕರಣ, ಸಂಸ್ಕೃತಿ ಹಾಗು ಪರಂಪರೆಯನ್ನು ಬಿಂಬಿಸುವ ಪರೇಡ್‌ ನಡೆಯುತ್ತಿದೆ. ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.ಎರಡು ದಿನಗಳ ಭಾರತ ಭೇಟಿ ಆರಂಭಿಸಿರುವ ಮ್ಯಾಕ್ರಾನ್‌ ಗುರುವಾರ ರಾಜಸ್ಥಾನದ ಜೈಪುರಕ್ಕೆ ಬಂದಿಳಿದಿದ್ದರು.

ಇಂದಿನ ಪರೇಡ್​ನಲ್ಲಿ ಫ್ರಾನ್ಸ್‌ನ ಸೇನಾ ತುಕಡಿಯೂ ಭಾಗವಹಿಸುತ್ತಿದೆ. 95 ಸದಸ್ಯರ ಕವಾಯತು ತಂಡ ಮತ್ತು 33 ಸದಸ್ಯರ ಬ್ಯಾಂಡ್ ತುಕಡಿಯು ಕರ್ತವ್ಯ ಪಥದಲ್ಲಿ ಸಾಗುತ್ತಿದೆ. ಗಣರಾಜ್ಯೋತ್ಸವದ ಮುನ್ನಾದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮುರ್ಮು ಅವರು ಪರೇಡ್​ ಮೆರವಣಿಗೆಯಲ್ಲಿ ಸಾಗುತ್ತಿರುವ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸುತ್ತಿದ್ದಾರೆ.

ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ, ಪೊಲೀಸ್ ಮತ್ತು ಅರೆಸೈನಿಕ ಸಿಬ್ಬಂದಿ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಈ ಪರೇಡ್ ಸುಮಾರು 90 ನಿಮಿಷಗಳ ಕಾಲ ನಡೆಯಲಿದೆ.

ಇದನ್ನೂ ಓದಿ: ರಾಮಮಂದಿರವು ಭಾರತೀಯ ಪರಂಪರೆಯ ಮರು ಶೋಧದ ಪ್ರತೀಕ: ರಾಷ್ಟ್ರಪತಿ ಬಣ್ಣನೆ

Last Updated : Jan 26, 2024, 12:51 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.