LIVE: ಲೋಕಸಭೆ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ: ಲೋಕಸಭಾ ಅಧಿವೇಶನದ ನೇರ ಪ್ರಸಾರ - Lok Sabha Live

By ETV Bharat Karnataka Team

Published : Jun 26, 2024, 11:06 AM IST

Updated : Jun 26, 2024, 1:18 PM IST

thumbnail

ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನದ ಮೂರನೇ ದಿನವಾದ ಇಂದು ಬೆಳಗ್ಗೆ 11 ಗಂಟೆಗೆ ಮಹತ್ವದ ಲೋಕಸಭೆ ಸ್ಪೀಕರ್​ ಚುನಾವಣೆ ನಡೆಯಿತು. ಓಂ ಬಿರ್ಲಾ ಅವರು ನೂತನ ಸ್ಪೀಕರ್​ ಆಗಿ ಧ್ವನಿಮತದ ಮೂಲಕ ಆಯ್ಕೆ ಆಗಿದ್ದಾರೆ.  ಆಡಳಿತಾರೂಢ ಎನ್​ಡಿಎ ಹಾಗೂ ಪ್ರತಿಪಕ್ಷ 'ಇಂಡಿಯಾ' ಮೈತ್ರಿಕೂಟ ನಡುವೆ ಸ್ಪೀಕರ್ ಆಯ್ಕೆಗೆ ಒಮ್ಮತ ಏರ್ಪಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸ್ಪೀಕರ್​ ಹುದ್ದೆಗೆ ಬಿಜೆಪಿ ಸಂಸದ, ಮಾಜಿ ಸ್ಪೀಕರ್ ಓಂ ಬಿರ್ಲಾ ಹಾಗೂ ಕಾಂಗ್ರೆಸ್​ ಸಂಸದ ಕೆ.ಸುರೇಶ್ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ-ತಮ್ಮ ಸಂಸದರಿಗೆ ಬುಧವಾರ ಸದನಕ್ಕೆ ಹಾಜರಾಗುವಂತೆ ಮೂರು ಸಾಲಿನ ವಿಪ್ ಜಾರಿಗೊಳಿಸಿದ್ದವು.ಲೋಕಸಭೆಯಲ್ಲಿ ಎನ್‌ಡಿಎಯ 293 ಸಂಸದರ ಬೆಂಬಲವನ್ನು ಹೊಂದಿದೆ. ಕಾಂಗ್ರೆಸ್​ ನೇತೃತ್ವದ  'ಇಂಡಿಯಾ' ಮೈತ್ರಿಕೂಟವು 233 ಸಂಸದರ ಬೆಂಬಲ ಹೊಂದಿದೆ. ಜೊತೆಗೆ ಮೂರು ಸ್ವತಂತ್ರ ಸದಸ್ಯರ ಬೆಂಬಲವನ್ನೂ ಪ್ರತಿಪಕ್ಷಗಳು ಹೊಂದಿವೆ. ಇದೇ ವೇಳೆ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಲ್ವರು ಸದಸ್ಯರ ಬೆಂಬಲವನ್ನು ಎನ್​ಡಿಎ ನಿರೀಕ್ಷೆ ಮಾಡಿತ್ತು.  ಮಂಗಳವಾರ ಲೋಕಸಭೆಯ ಪ್ರತಿಪಕ್ಷದ ನಾಯಕರಾಗಿ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ 'ಇಂಡಿಯಾ' ಮೈತ್ರಿಕೂಟದ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ.

Last Updated : Jun 26, 2024, 1:18 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.