ಸಂಸೆ ಟೀ ಎಸ್ಟೇಟಲ್ಲಿ ಕಾಣಿಸಿಕೊಂಡ 13 ಅಡಿ ಉದ್ದದ ಹೆಬ್ಬಾವು: ವಿಡಿಯೋ - PYTHON SPOTTED IN TEA ESTATE
🎬 Watch Now: Feature Video


Published : Dec 6, 2024, 8:13 PM IST
ಚಿಕ್ಕಮಗಳೂರು: ಕಳಸ ತಾಲೂಕಿನ ಸಂಸೆ ಟೀ ಎಸ್ಟೇಟ್ ಒಂದರಲ್ಲಿ ಟೀ ಸೊಪ್ಪು ಕೊಯ್ಯುವ ವೇಳೆ 13 ಅಡಿ ಉದ್ದದ ಭಾರೀ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಉರಗ ತಜ್ಞ ಸ್ನೇಕ್ ರಿಜ್ವಾನ್ ಅವರು ಹೆಬ್ಬಾವು ಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಟೀ ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಹೆಬ್ಬಾವು ಕಾಣಿಸಿದೆ. ಕೂಡಲೇ ಭಯದಿಂದ ಅಲ್ಲಿಂದ ತೆರಳಿದ್ದಾರೆ. ನಂತರ ಕಾರ್ಮಿಕರು ಕಳಸ ತಾಲೂಕಿನ ಉರಗತಜ್ಞ ರಿಜ್ವಾನ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಮನವಿ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು, ಟೀ ಎಸ್ಟೇಟ್ನಲ್ಲಿ ಹೆಬ್ಬಾವಿಗೆ ಹುಡುಕಾಡಿ ಸೆರೆ ಹಿಡಿದರು. ಬಳಿಕ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಸೇರಿದಂತೆ ಸುತ್ತಮುತ್ತಲ ಪ್ರದೇಶದ ಕಾಫಿ, ಟೀ ಎಸ್ಟೇಟ್ಗಳಲ್ಲಿ ಕಾಳಿಂಗ ಸರ್ಪ ಅಥವಾ ಹೆಬ್ಬಾವುಗಳು ಗೊತ್ತಿಲ್ಲದ ರೀತಿ ಗಿಡಗಳೆಡೆಯಲ್ಲಿ ಅಡಗಿ ಮಲಗಿರುತ್ತವೆ. ಈ ವೇಳೆ ಜೀವಕ್ಕೆ ಹಾನಿಯಾದರೂ ಆಗಬಹುದು. ಹಾಗಾಗಿ ಕೆಲಸ ಮಾಡುವಾಗ ಜಾಗ್ರತೆ ವಹಿಸುವಂತೆ ಅರಣ್ಯ ಇಲಾಖೆಯ ಸಿಬ್ಬಂದಿ, ಕಾರ್ಮಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Watch.. ಮೆಮೊರಿಯಲ್ ಹಾಲ್ನಲ್ಲಿ ಕಾಣಿಸಿಕೊಂಡ ಹೆಬ್ಬಾವು: ರಕ್ಷಿಸಿ ಕಾಡಿಗೆ ಬಿಟ್ಟ ಸ್ನೇಕ್ ಶ್ಯಾಮ್