ETV Bharat / technology

ಹೊಸ ವೈಶಿಷ್ಟ್ಯ ಪರಿಚಯಿಸಿದ ಯೂಟ್ಯೂಬ್​: ಇನ್ಮುಂದೆ ಯಾವುದೇ ಆಯ್ದ ಭಾಷೆಗಳಲ್ಲಿ ವಿಡಿಯೋಗಳನ್ನ ನೋಡಬಹುದು! - YOUTUBE AUTO DUB FEATURE

YouTube Auto Dub Feature: ಜನಪ್ರಿಯ ವೀಡಿಯೊ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಲ್ಲಿ ಗೂಗಲ್ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಈ ಹೊಸ ವೈಶಿಷ್ಟ್ಯವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಹಾಯದಿಂದ ಯಾವುದೇ ಭಾಷೆಗೆ ವಿಡಿಯೋಗಳನ್ನು ಭಾಷಾಂತರಿಸಬಹುದು ಮತ್ತು ಡಬ್ ಮಾಡಬಹುದು.

YOUTUBE  YOUTUBE DUB FEATURE  DUB VIDEO INTO ENGLISH  DUB VIDEO INTO HINDI
ಯೂಟ್ಯೂಬ್ (YouTube)
author img

By ETV Bharat Tech Team

Published : Dec 12, 2024, 9:39 AM IST

YouTube Auto Dub Feature: ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಲ್ಲಿ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಈ ವೈಶಿಷ್ಟ್ಯದ ಹೆಸರು ಆಟೋ ಡಬ್ಬಿಂಗ್. ಇದು ಎಐ ಅಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ. ಯೂಟ್ಯೂಬ್​ನ ಹೊಸ ವೈಶಿಷ್ಟ್ಯದ ಸಹಾಯದಿಂದ ಪ್ರಪಂಚದ ಅನೇಕ ಭಾಷೆಗಳಲ್ಲಿ ವಿಡಿಯೋಗಳನ್ನು ಈಗ ಸುಲಭವಾಗಿ ವೀಕ್ಷಿಸಬಹುದಾಗಿದೆ.

ಆಟೋ-ಡಬ್ಬಿಂಗ್ ವೈಶಿಷ್ಟ್ಯ: ಈ ವೈಶಿಷ್ಟ್ಯದ ಸಹಾಯದಿಂದ ಯೂಟ್ಯೂಬ್​ ಆಟೋಮೆಟಿಕ್​ ಆಗಿ ವಿಡಿಯೋವನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುತ್ತದೆ ಮತ್ತು ಡಬ್ ಮಾಡುತ್ತದೆ. ಇದರರ್ಥ ನೀವು ಇಂಗ್ಲಿಷ್‌ ಭಾಷೆಯಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ರೆ, ಅದು ಫ್ರೆಂಚ್, ಜರ್ಮನ್, ಹಿಂದಿ, ಇಂಡೋನೇಷಿಯನ್, ಇಟಾಲಿಯನ್, ಜಪಾನೀಸ್, ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಡಬ್ ಆಗುತ್ತದೆ. ನೀವು ಈ ಮೇಲಿನ ಯಾವುದೇ ಭಾಷೆಗಳಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ರೆ, ಅದು ಇಂಗ್ಲಿಷ್‌ಗೆ ಡಬ್ ಮಾಡುತ್ತದೆ. ಈ ವೈಶಿಷ್ಟ್ಯದ ದೊಡ್ಡ ಪ್ರಯೋಜನವೆಂದರೆ ಬಳಕೆದಾರರು ಈಗ ತಮ್ಮ ಆದ್ಯತೆಯ ಭಾಷೆಯಲ್ಲಿ ವಿಷಯವನ್ನು ಪಡೆಯುತ್ತಾರೆ. ಇದು ವಿಡಿಯೋವನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ.

ಈ ವೈಶಿಷ್ಟ್ಯವು ಕಾರ್ಯನಿರ್ವಹಿಸುವುದು ಹೇಗೆ?: ಯೂಟ್ಯೂಬ್​ನ ಈ ವೈಶಿಷ್ಟ್ಯವು ಎಐ ತಂತ್ರಜ್ಞಾನದ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ. ಎಐ ಸಿಸ್ಟಮ್​ ಅದರ ಆಡಿಯೋದಿಂದ ಅಪ್‌ಲೋಡ್ ಮಾಡಿದ ವಿಡಿಯೋವನ್ನು ಗುರುತಿಸುತ್ತದೆ. ನಂತರ, ಸಿಸ್ಟಮ್ ಅನುವಾದ ಮತ್ತು ಡಬ್ಬಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ವಿಡಿಯೋದಲ್ಲಿ ಬಳಸಲಾದ ಭಾಷೆಯನ್ನು ಬದಲಾಯಿಸಲಾಗುತ್ತದೆ ಮತ್ತು ನೀವು ಆಯ್ಕೆ ಮಾಡಿಕೊಂಡ ಭಾಷೆಗೆ ಪರಿವರ್ತಿಸಲಾಗುತ್ತದೆ. ಈ ವೈಶಿಷ್ಟ್ಯವು ಇನ್ನೂ ಹೊಸ ತಂತ್ರಜ್ಞಾನವನ್ನು ಆಧರಿಸಿದೆ, ಆದ್ದರಿಂದ ಆರಂಭಿಕ ಹಂತದಲ್ಲಿ ಅನುವಾದದಲ್ಲಿ ಕೆಲವು ದೋಷಗಳು ಇರಬಹುದು. ಆದರೆ ಈ ತಂತ್ರಜ್ಞಾನವು ಕಾಲಾನಂತರದಲ್ಲಿ ಗೂಗಲ್​ ಸುಧಾರಣೆ ಮಾಡುತ್ತಾ ಮುಂದೆ ಸಾಗುತ್ತದೆ.

ಈ ವೈಶಿಷ್ಟ್ಯವು ಎಲ್ಲ ಬಳಕೆದಾರರಿಗೆ ಇನ್ನೂ ಲಭ್ಯವಿಲ್ಲ. ಪ್ರಸ್ತುತ, ಇದನ್ನು ಆಯ್ದ ಚಾನಲ್‌ಗಳಲ್ಲಿ ಹೊರತರಲಾಗಿದೆ. ಈ ವೈಶಿಷ್ಟ್ಯವು ನಿಮ್ಮ ಚಾನಲ್‌ಗೆ ಲಭ್ಯವಿದ್ದರೆ, ಸುಧಾರಿತ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ನೀವು ಅದನ್ನು ಪರಿಶೀಲಿಸಬಹುದು. ವೈಶಿಷ್ಟ್ಯವನ್ನು ಆನ್ ಮಾಡಿದ ನಂತರ, ಡಬ್ ಮಾಡಿದ ವಿಡಿಯೋವನ್ನು ಪಬ್ಲಿಷ್​ ಮಾಡುವ ಮೊದಲು ಅದನ್ನು ಸರಿಯಾಗಿ ಡಬ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನೀವು ಅದನ್ನು ಮತ್ತೊಮ್ಮೆ ಪರಿಶೀಲಿಸಬಹುದು.

ಬ್ಲಾಗ್ ಪೋಸ್ಟ್‌ವೊಂದರಲ್ಲಿ ಯೂಟ್ಯೂಬ್​ ಹೇಳಿಕೆ ಪ್ರಕಾರ, ಆಟೋ-ಡಬ್ ಒಂದು ಹೊಸ ತಂತ್ರಜ್ಞಾನವಾಗಿದೆ. ಇದು ಪರಿಪೂರ್ಣ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ. ಡಬ್ಬಿಂಗ್‌ನ ನಿಖರತೆ ಮತ್ತು ಅಭಿವ್ಯಕ್ತಿಶೀಲತೆಯನ್ನು ಹೆಚ್ಚಿಸಲು ನಾವು Google DeepMind ಮತ್ತು Google Translate ಜೊತೆಗೆ ಸಹಕರಿಸುತ್ತಿದ್ದೇವೆ. ಮುಂಬರುವ ಅಪ್​ಡೇಟ್​ಗಳು ಕ್ರಿಯೆಟರ್ಸ್​ನ ಧ್ವನಿ ಮತ್ತು ಪರಿಸರವನ್ನು ಉತ್ತಮವಾಗಿ ಸೆರೆಹಿಡಿಯಲು 'Expressive Speech' ಅನ್ನು ಪರಿಚಯಿಸುತ್ತದೆ ಎಂದು ಕಂಪನಿ ಹೇಳಿದೆ.

ಓದಿ: ಮಧ್ಯರಾತ್ರಿ ವಾಟ್ಸ್​ಆ್ಯಪ್​, ಫೇಸ್​ಬುಕ್, ಇನ್​ಸ್ಟಾಗ್ರಾಮ್ ಡೌನ್​: ಕ್ಷಮೆಯಾಚಿಸಿದ ಮೆಟಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.