ETV Bharat / technology

ಯೂಟ್ಯೂಬ್ ಗ್ರಾಹಕರಿಗೆ ಬಿಗ್​ ಶಾಕ್!: ಟಿವಿ ಚಂದಾದಾರರಿಗೆ ಬೆಲೆ ಹೆಚ್ಚಿಸಲಿರುವ ಸ್ಟ್ರೀಮಿಂಗ್​ ಕಂಪನಿ - YOUTUBE TV PLAN PRICE HIKED

YouTube TV Plan Price Hiked: ಯೂಟ್ಯೂಬ್​ ತನ್ನ ಚಂದಾದಾರಿಕೆ ಬೆಲೆ ಹೆಚ್ಚಿಸುತ್ತಿದೆ. ಇದರಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿಯಾಗಿದೆ. ಯೂಟ್ಯೂಬ್​ ಎಷ್ಟು ಬೆಲೆ ಹೆಚ್ಚಿಸಲಿದೆ ಎಂಬ ಮಾಹಿತಿ ಇಲ್ಲಿದೆ..

YOUTUBE TV PLAN  YOUTUBE SUBSCRIBES  YOUTUBE CHANNEL  YOUTUBE NEWS
ಯೂಟ್ಯೂಬ್ (YouTube)
author img

By ETV Bharat Tech Team

Published : Dec 13, 2024, 12:43 PM IST

YouTube TV Plan Price Hiked: ನೀವು ಯೂಟ್ಯೂಬ್​ ಚಂದಾದಾರಾಗಿದ್ದರೆ ಇದು ನಿಮಗೆ ಶಾಕಿಂಗ್​ ಸುದ್ದಿ. ಯೂಟ್ಯೂಬ್​ ಸಂಸ್ಥೆ ಸ್ಟ್ರೀಮಿಂಗ್​ ಸೇವೆಯನ್ನು ದುಬಾರಿ ಮಾಡಲು ನಿರ್ಧರಿಸಿದೆ. ಇದರಿಂದಾಗಿ ನಿಮ್ಮ ಮಾಸಿಕ ಬೆಲೆ ಹೆಚ್ಚಾಗಲಿದೆ.

ಯೂಟ್ಯೂಬ್ ತನ್ನ ಸ್ಟ್ರೀಮಿಂಗ್ ಸೇವೆಯ ಮೂಲ ಯೋಜನೆಯನ್ನು 10 ಡಾಲರ್‌ಗಳಿಗೆ (ಸುಮಾರು ರೂ 850) ಹೆಚ್ಚಿಸಲಿದೆ ಎಂದು ಹೇಳಿದೆ. ಕಂಟೆಂಟ್ ಮತ್ತು ಇತರ ಹೂಡಿಕೆಗಳ ವೆಚ್ಚ ಹೆಚ್ಚುತ್ತಿರುವುದು ಇದರ ಹಿಂದಿನ ಕಾರಣ ಎಂದು ಕಂಪನಿ ಹೇಳಿದೆ. ಇದರ ನಂತರ ಕಂಪನಿಯ ಯೋಜನೆಗಳು ದುಬಾರಿಯಾಗುತ್ತವೆ.

ಮುಂದಿನ ತಿಂಗಳಿಂದ ಹೊಸ ದರ ಅನ್ವಯ: ಮುಂದಿನ ತಿಂಗಳು ಅಂದರೆ ಜನವರಿಯಿಂದ ಕಂಪನಿಯ ಪ್ಲಾನ್ ಬೆಲೆ 82.99 ಡಾಲರ್​ (ಅಂದಾಜು ರೂ.7,042) ಆಗಲಿದೆ. ಇದು ಅಸ್ತಿತ್ವದಲ್ಲಿರುವ ಚಂದಾದಾರರಿಗೆ ಮತ್ತು ಹೊಸ ಸೈನ್-ಅಪ್ ಗ್ರಾಹಕರಿಗೆ ಅನ್ವಯಿಸುತ್ತದೆ. ನಿರ್ದಿಷ್ಟ ಪ್ರಚಾರ ಯೋಜನೆಯಲ್ಲಿ ಯೂಟ್ಯೂಬ್​ ಟಿವಿ ವೀಕ್ಷಿಸುತ್ತಿರುವ ಚಂದಾದಾರರ ಮೇಲೆ ಇದು ಪರಿಣಾಮ ಬೀರುವುದಿಲ್ಲ.

ಎಚ್ಚರಿಕೆಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಇದು ತನ್ನ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದಿದೆ ಅಂತಾ ಕಂಪನಿ ಹೇಳಿದೆ. ಕಳೆದ ವರ್ಷಗಳಲ್ಲಿ ಕಂಪನಿಯು ಈ ಯೋಜನೆಯ ಬೆಲೆಯನ್ನು ಹಲವಾರು ಬಾರಿ ಹೆಚ್ಚಿಸಿದೆ. 2017 ರಲ್ಲಿ, ಇದನ್ನು ತಿಂಗಳಿಗೆ 35 ಡಾಲರ್​ (ರೂ. 2,970) ದರದಲ್ಲಿ ಪ್ರಾರಂಭಿಸಿತು. 2019 ರಲ್ಲಿ ಅದರ ಬೆಲೆ 50 ಡಾಲರ್​ಗೆ (ರೂ 4,242) ಹೆಚ್ಚಿಸಿತು. ಅಂದಿನಿಂದ ಅದರ ಬೆಲೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಕೂಡ ಗೂಗಲ್ ತನ್ನ ಬೆಲೆಯನ್ನು ಹೆಚ್ಚಿಸಿದೆ.

ಈ ಬಾರಿ ಹೊಸದೇನೂ ಬದಲಾವಣೆ ಇಲ್ಲ: ಕೆಲವು ವರ್ಷಗಳ ಹಿಂದೆ ಯೂಟ್ಯೂಬ್ ತನ್ನ ಚಂದಾದಾರರಿಗೆ ಯೋಜನೆಯ ಬೆಲೆಯನ್ನು ಹೆಚ್ಚಿಸುವ ಮೂಲಕ ಹೊಸ ಚಾನಲ್‌ಗಳನ್ನು ಸೇರಿಸುತ್ತಿತ್ತು. ಆದರೆ ಕಳೆದ ವರ್ಷದಂತೆ, ಈ ಬಾರಿಯೂ ಅಂತಹದ್ದೇನೂ ಬದಲಾವಣೆ ಮಾಡಲಾಗಿಲ್ಲ. ಕಂಪನಿಯು ಪರವಾನಗಿಗೆ ಸಂಬಂಧಿಸಿದಂತೆ ಅನೇಕ ವಿವಾದಗಳನ್ನು ಎದುರಿಸುತ್ತಿದೆ. ಇದರಿಂದಾಗಿ ಅದರ ಮೇಲೆ ಒತ್ತಡ ಹೆಚ್ಚಾಗಿದೆ. ಆದ್ದರಿಂದ ಈ ಹೆಚ್ಚಳದ ಹಿಂದಿನ ಕಾರಣ ಕಾರ್ಯಾಚರಣೆಯ ವೆಚ್ಚದಲ್ಲಿನ ಏರಿಕೆಗೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ, ಯೂಟ್ಯೂಬ್ ಮಾತ್ರವಲ್ಲದೇ ನೆಟ್‌ಫ್ಲಿಕ್ಸ್, ಆಪಲ್ ಟಿವಿ ಮತ್ತು ಡಿಸ್ನಿ ಮುಂತಾದ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ತಮ್ಮ ಪ್ಲಾನ್‌ಗಳ ಬೆಲೆಗಳನ್ನು ಹೆಚ್ಚಿಸಿವೆ. ಅಷ್ಟೇ ಅಲ್ಲ ತಮ್ಮ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲು ಪಾಸ್‌ವರ್ಡ್ ಮಿತಿಗಳಂತಹ ಅನೇಕ ಹೊಸ ವಿಷಯಗಳನ್ನು ಸೇರಿಸಿದೆ.

ಓದಿ: ನ್ಯೂ- ಇಯರ್​ ​ಆಫರ್​ ಘೋಷಿಸಿದ ಜಿಯೋ - ಇದು ಕೇವಲ 200 ದಿನಗಳಿಗೆ ಮಾತ್ರವೇ ಲಭ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.