ETV Bharat / technology

ಭಾರತದಲ್ಲಿ ಟ್ರಿಲಿಯನ್​ಗಟ್ಟಲೇ ವೀಕ್ಷಣೆ ಪಡೆದುಕೊಳ್ಳುತ್ತಿದೆ ಯೂಟ್ಯೂಬ್​ ಶಾರ್ಟ್ಸ್​​ - YouTube Shorts in india - YOUTUBE SHORTS IN INDIA

11 ಸಾವಿರಕ್ಕೂ ಹೆಚ್ಚಿನ ಭಾರತೀಯ ಚಾನಲ್​ಗಳು ಮಿಲಿಯನ್​ಗಟ್ಟಲೇ ಸಬ್​ಸ್ಕ್ರೈಬರ್​ಗಳನ್ನು ಹೊಂದಿದ್ದಾರೆ. ಈ ಚಂದಾದಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ

YouTube Shorts now has trillions of views in the India
ಸಾಂದರ್ಭಿಕ ಚಿತ್ರ (ETV Bharat - ಸಂಗ್ರಹ ಚಿತ್ರ)
author img

By ETV Bharat Karnataka Team

Published : Aug 8, 2024, 10:33 AM IST

ನವದೆಹಲಿ: ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಲಾದ ಗೂಗಲ್​ ಮಾಲೀಕತ್ವದ ಯೂಟ್ಯೂಬ್​​ ಶಾರ್ಟ್​​ ಇದೀಗ ದೇಶದಲ್ಲಿ ಟ್ರಿಲಿಯನ್​ಗಟ್ಟಲೇ ವೀಕ್ಷಣೆ ಪಡೆದಿದೆ. ದೇಶಿಯ ಕ್ರಿಯೇಟರ್​ಗಳ ಸ್ಥಳೀಯ ಟ್ರೇಡ್​​ಗೆ ಅನುಸಾರವಾಗಿ ಪ್ರೇರಿತ ವಿಡಿಯೋಗಳನ್ನು ಇದರಲ್ಲಿ ಅಪ್ಲೋಡ್​ ಮಾಡುತ್ತಿದ್ದಾರೆ ಎಂದು ಯೂಟ್ಯೂಬ್​ನ ಸಿಇಒ ನೀಲ್​ ಮೋಹನ್​ ತಿಳಿಸಿದ್ದಾರೆ.

ಭಾರತೀಯ ಕ್ರಿಯೇಟರ್​​ಗಳು ಇದರ ಮೂಲಕ ಕೇವಲ ವಿಡಿಯೋವನ್ನು ಹಂಚಿಕೊಳ್ಳುತ್ತಿಲ್ಲ. ಅವರು ಜಗತ್ತಿಗೆ ಭಾರತದ ಸಂಸ್ಕೃತಿಯನ್ನು ರವಾನಿಸುತ್ತಿದ್ದಾರೆ. 11 ಸಾವಿರಕ್ಕೂ ಹೆಚ್ಚಿನ ಭಾರತೀಯ ಚಾನಲ್​ಗಳು ಮಿಲಿಯನ್​ಗಟ್ಟಲೇ ಸಬ್​ಸ್ಕ್ರೈಬರ್​ಗಳನ್ನು ಹೊಂದಿದ್ದಾರೆ. ಈ ಚಂದಾದಾರರು ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ರಾಷ್ಟ್ರರಾಜಧಾನಿಯಲ್ಲಿ ಯೂಟ್ಯೂಬ್​ ಆಯೋಜಿಸಿದ್ದ ಬ್ರಾಂಡ್​ಕ್ಯಾಸ್ಟ್​ 2024 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಯ ಬದಲಾಗಿದೆ. ಇದೀಗ ಕ್ರಿಯೇಟರ್​ಗಳು ಹೊಸ ಎ ಲಿಸ್ಟ್​​ನಲ್ಲಿದ್ದಾರೆ. ಯೂಟ್ಯೂಬ್​ನಲ್ಲಿ ತಮ್ಮ ಹಾಸ್ಯದ ಪ್ರಯಾಣ ಆರಂಭಿಸಿದ ಪ್ರಜಕ್ತಾ ಕೋಲಿ ಇದೀಗ ನೆಟ್​ಫ್ಲಿಕ್​​ನ ಸೀರಿಸ್​ನಲ್ಲಿ ತಮ್ಮದೇ ಪಾತ್ರ ನಿರ್ವಹಿಸುವ ಜೊತೆಗೆ ಬಾಲಿವುಡ್​ ಪ್ರವೇಶಕ್ಕೆ ಸಜ್ಜಾಗಿದ್ದಾರೆ. 9 ವರ್ಷದ ಹಿಂದೆ ಯೂಟ್ಯೂಬ್​ ಸೇರಿದ ಪಂಜಾಬಿ ಕಲಾವಿದ ದಿಲ್ಜಿತ್ ದೋಸಾಂಜ್ ಕೋಚೆಲ್ಲಾದಲ್ಲಿ ಪ್ರದರ್ಶನ ತೋರಿದ್ದಾರೆ.

ಕ್ರಿಯೇಟರ್ಸ್​​ ಮತ್ತು ಕಲಾವಿದರು ಉದ್ಯಮದ ತಂತ್ರ, ಬರವಣಿಗೆ, ನಿರ್ಮಾಣ ಮತ್ತು ಕಂಟೆಂಟ್​ ಸೃಷ್ಟಿಸುವ ಜವಾಬ್ದಾರಿಯನ್ನು ಹೊಂದಿದ್ದು, ಜನರು ಪ್ರೀತಿಯಿಂದ ಇವುಗಳನ್ನು ನೋಡುತ್ತಿದ್ದಾರೆ. ಯೂಟ್ಯೂಬ್​ನ ಬೆಳವಣಿಗೆಯ ಚಾಲಕರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತದಲ್ಲಿ ಮೊದಲ ಸ್ಥಾನ ತಲುಪಿದ್ದು, ಇದೀಗ ಯೂಟ್ಯೂಬ್​ ಹೆಚ್ಚಿನ ವಾಚ್​ಟೈಮ್​ ಆಗಿದೆ ಎಂದರು.

ಲಕ್ಷಾಂತರ ಜನರು ಹಿಂದಿ, ಬೆಂಗಾಲಿ, ಮರಾಠಿ ಮತ್ತು ಇತರ ಅವರ ನೆಚ್ಚಿನ ಭಾಷೆಗಳಲ್ಲಿ ಅವರ ಇಷ್ಟದ ಕಾಮಿಡಿಯನ್ಸ್​ಗಳನ್ನು ಯೂಟ್ಯೂಬ್​ನಲ್ಲಿ ವೀಕ್ಷಿಸುತ್ತಿದ್ದಾರೆ. ಅಭಿಮಾನಿಗಳು ವೀಕ್ಷಣೆ ಮಾಡುವುದರ ಜೊತೆಗೆ ಜಗತ್ತಿನೆಲ್ಲೆಡೆ ನಡೆಯುವ ತಮ್ಮ ನೆಚ್ಚಿನ ಹಾಸ್ಯಕಲಾವಿದ ವೇದಿಕೆ ಕಾರ್ಯಕ್ರಮಕ್ಕೆ ಟಿಕೆಟ್​ ಕೊಳ್ಳುತ್ತಿದ್ದಾರೆ. ಈ ಚಾನಲ್​ಗಳು ಭಾರತದಲ್ಲೂ ಶುರುವಾಗಿದ್ದು, ಇದೀಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅವರ ಅಭಿಮಾನಿಗಳನ್ನು ಆಸ್ಟ್ರೇಲಿಯಾದಿಂದ ಅಮೆರಿಕದವರೆಗೆ ಎಲ್ಲೆಡೆ ಕಾಣಬಹುದಾಗಿದೆ.

ಕಳೆದ ವರ್ಷದ ಕ್ರಿಕೆಟ್​​ ವಿಡಿಯೋಗಳು 50 ಬಿಲಿಯನ್​ ವೀಕ್ಷಣೆ ಕಂಡಿವೆ. ಟಿ20 ವಿಶ್ವಕಪ್​ನ ಗೆಲುವಿನ ಲೈವ್​ಸ್ಟ್ರೀಮ್​ ವಾಚ್​ಲಾಂಗ್​ಗಳಂತಹ ಕ್ರಿಕೆಟ್​​ ಜಗತ್ತಿನ ವಿಡಿಯೋಗಳು ತನ್ನದೇ ಸಮುದಾಯಗಳನ್ನು ಸೃಷ್ಟಿಸಿಕೊಂಡಿವೆ. ಅದರಲ್ಲಿ ಐಪಿಎಲ್​ ಪಂದ್ಯದ ಮರುಸೃಷ್ಟಿ, ಟಿ20 ವರ್ಲ್ಡ್​​ಕಪ್​ ಗೆಲುವು, ಆಟಗಾರರ ಆಫ್​ ಫೀಲ್ಡ್​​ ವಿಡಿಯೋ ಅವರ ಮದುವೆಯಂತಹ ವಿಷಯಾಧಾರಿತ ವಿಡಿಯೋಗಳು ಹೆಚ್ಚು ಸದ್ದು ಮಾಡಿದೆ.

ಟಿವಿಯೊಂದಿಗೆ ಸಂಪರ್ಕ ಹೊಂದಿರುವ ಯೂಟ್ಯೂಬ್​ ಅತಿ ಹೆಚ್ಚು ವೀಕ್ಷಣಾ ಸೇವೆಯನ್ನು ಹೊಂದಿದೆ. ಕಳೆದ 3 ವರ್ಷಗಳಲ್ಲಿ ಭಾರತದಲ್ಲಿ ಟಿವಿ ಸಂಪರ್ಕಿತ ಯೂಟ್ಯೂಬ್​ ವೀಕ್ಷಣೆ ನಾಲ್ಕುಪಟ್ಟು ಹೆಚ್ಚಾಗಿದೆ. ಯೂಟ್ಯೂಬರ್​, ವೀಕ್ಷಕರ ಕ್ರಿಯಾತ್ಮಕತೆ ಬಲಗೊಳಿಸಲು ಎಐ ಸಾಧನವನ್ನು ಪರಿಚಯಿಸಲಾಗಿದೆ. ಕಳೆದ ತಿಂಗಳಷ್ಟೇ ನಾವು ಇಲ್ಲಿ ಡ್ರೀಮ್​ಸ್ಕ್ರೀನ್​ ಪ್ರಾರಂಭಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಹಾಕಿಕೊಳ್ಳುವ ಬೂಟಿನಲ್ಲಿ ಕರೆಂಟ್​​​​ ಉತ್ಪಾದನೆ!!: ನಡೆದಾಗ ವಿದ್ಯುತ್​ ಉತ್ಪಾದಿಸುವ ಶೂ ತಯಾರಿಸಿದ ಐಐಟಿ ಇಂದೋರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.