ETV Bharat / technology

ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದ ಯೂಟ್ಯೂಬ್​; ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ!?

Youtube New Features: ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ YouTube ನಲ್ಲಿ ಹೊಸ ವೈಶಿಷ್ಟ್ಯಗಳು ಲಭ್ಯವಾಗಿವೆ. ಈ ವೈಶಿಷ್ಟ್ಯಗಳಿಂದ ನಿಮಗೆ ಅನೇಕ ಅನುಕೂಲಗಳಾಗಲಿವೆ. ಅದು ಯಾವರೀತಿ ಎಂಬ ಮಾಹಿತಿ ಇಲ್ಲಿದೆ..

YOUTUBE NEW FEATURES  YOUTUBE FEATURES AND UPDATES 2024  YOUTUBE SLEEP TIMER  YOUTUBE MINIPLAYER
ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದ ಯೂಟ್ಯೂಬ್ (Youtube Blog)
author img

By ETV Bharat Tech Team

Published : Oct 19, 2024, 6:37 PM IST

Youtube New Features: ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್ ಬಳಕೆದಾರರನ್ನು ಆಕರ್ಷಿಸಲು ಹೊಸ ವೈಶಿಷ್ಟ್ಯಗಳನ್ನು ತಂದಿದೆ. ಇದು ಸ್ಲೀಪ್ ಟೈಮರ್, ರಿಸೈಜಬುಲ್​ ಮಿನಿ ಪ್ಲೇಯರ್, ನೆಚ್ಚಿನ ಪ್ಲೇ ಪಟ್ಟಿಯಂತಹ ಅನೇಕ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಕಂಪನಿಯು ತನ್ನ ಬ್ಲಾಗ್ ಪೋಸ್ಟ್ ಮೂಲಕ ಇದನ್ನು ಬಹಿರಂಗಪಡಿಸಿದೆ. ಈ ಹೊಸ ವೈಶಿಷ್ಟ್ಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಸಹ ಇದು ವಿವರಿಸುತ್ತದೆ.

ಸ್ಲೀಪ್ ಟೈಮರ್:

  • ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ನೋಡುತ್ತಾ ಅನೇಕರು ನಿದ್ರಿಸುತ್ತಾರೆ.
  • ಈ ಸಮಯದಲ್ಲಿ ವಿಡಿಯೋಗಳು ಪ್ಲೇ ಆಗುತ್ತಲೇ ಇರುತ್ತವೆ.
  • ಹೀಗಾಗಿ ಈ ಸಮಸ್ಯೆಯನ್ನು ಪರಿಶೀಲಿಸುತ್ತಾ YouTube ಹೊಸ ಸ್ಲೀಪ್ ಟೈಮರ್ ವೈಶಿಷ್ಟ್ಯವನ್ನು ತಂದಿದೆ.
  • ಈ ಹೊಸ ವೈಶಿಷ್ಟ್ಯದ ಸಹಾಯದಿಂದ ನೀವು ಟೈಮರ್ ಅನ್ನು ಸೆಟ್​ ಮಾಡಿ YouTube ನಲ್ಲಿ ವಿಡಿಯೋಗಳನ್ನು ಪ್ಲೇ ಮಾಡಬಹುದು.
  • ನಿಗದಿತ ಸಮಯ ಮುಗಿದ ನಂತರ ನಾವು ವಿಡಿಯೋವನ್ನು ಆಫ್ ಮಾಡಲು ಮರೆತರೂ ಅಥವಾ ನಿದ್ರಿಸಿದರೂ ಆಗ ವಿಡಿಯೋ ಆಟೋಮೆಟಿಕ್​ ಆಗಿ ಸ್ಟಾಪ್​ ಆಗುತ್ತದೆ. ಇದರಿಂದ ನೀವು ಅನೇಕ ಲಾಭ ಪಡೆದಂತಾಗುತ್ತದೆ.

ಸ್ಲೀಪ್ ಟೈಮರ್ ವೈಶಿಷ್ಟ್ಯವನ್ನು ಹೇಗೆ ಸಕ್ರಿಯಗೊಳಿಸುವುದು:

  • YouTube ನಲ್ಲಿ ವಿಡಿಯೋವನ್ನು ಪ್ಲೇ ಮಾಡಿದ ನಂತರ ಸ್ಕ್ರೀನ್​ ಮೇಲಿನ ಸೆಟ್ಟಿಂಗ್‌ಗಳ ಐಕಾನ್ ಮೇಲೆ ಟ್ಯಾಪ್ ಮಾಡಿ. ಅಲ್ಲಿ 'ಸ್ಲೀಪ್ ಟೈಮರ್' ಆಯ್ಕೆ ಕಾಣಿಸಿಕೊಳ್ಳುತ್ತದೆ.
  • ನೀವು ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ ಬೇಕಾದ ಸಮಯವನ್ನು ಸೆಟ್​ ಮಾಡಿಕೊಳ್ಳಿ.
  • ಈ ಹಿಂದೆ ಪ್ರೀಮಿಯಂ ಬಳಕೆದಾರರಿಗೆ ಮಾತ್ರ ಸೀಮಿತವಾಗಿದ್ದ ಈ ವೈಶಿಷ್ಟ್ಯವನ್ನು ಈಗ YouTube ಎಲ್ಲರಿಗೂ ಲಭ್ಯವಾಗುವಂತೆ ಮಾಡಿದೆ.

ಪ್ಲೇ ಲಿಸ್ಟ್​ಗಾಗಿ ಥಂಬ್‌ನೇಲ್‌ಗಳು:

  • YouTube ಈಗಾಗಲೇ ಪ್ಲೇ ಲಿಸ್ಟ್​ ಅನ್ನು ರಚಿಸುವ ಸೌಲಭ್ಯವನ್ನು ಹೊಂದಿದೆ.
  • ಪ್ರಸ್ತುತ QR ಕೋಡ್ ಸಹಾಯದಿಂದ ನಿಮ್ಮ ಆತ್ಮೀಯರಿಗೆ ಕಳುಹಿಸುವ ಆಪ್ಷನ್​ ಅನ್ನು ತರಲಾಗಿದೆ.
  • ಅಲ್ಲದೆ, ಲಿಸ್ಟ್​ನ ಥಂಬ್‌ನೇಲ್‌ಗಳನ್ನು AI ಸಹಾಯದಿಂದ ರಚಿಸಬಹುದು.
  • ಬೇಕಿದ್ದರೆ ನಿಮ್ಮ ಫೋಟೋಗಳನ್ನೂ ಸಹ ಇದರಲ್ಲಿ ಬಳಸಬಹುದು ಎಂದು ಯೂಟ್ಯೂಬ್ ಹೇಳಿದೆ.

ಬಯಸಿದಂತೆ ಮಿನಿ-ಪ್ಲೇಯರ್:

  • ಮಲ್ಟಿಟಾಸ್ಕಿಂಗ್‌ನ ಭಾಗವಾಗಿ ಮಿನಿ ಪ್ಲೇಯರ್‌ನಲ್ಲಿ YouTube ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ.
  • ಸಾಮಾನ್ಯವಾಗಿ YouTube ನಲ್ಲಿ ಮಿನಿ ಪ್ಲೇಯರ್ ಕೆಳಗಿನ ಬಲ ಮೂಲೆಯಲ್ಲಿ ಕಾಣಿಸಿಕೊಳ್ಳುತ್ತದೆ.
  • ಆದರೆ ಈಗ ನೀವು ನಿಮ್ಮ ಮಿನಿ ಪ್ಲೇಯರ್ ಅನ್ನು ನೀವು ಎಲ್ಲಿ ಬೇಕಾದರೂ ಬದಲಾಯಿಸಬಹುದು.
  • ಇದಲ್ಲದೆ ಬಯಸಿದಲ್ಲಿ, ಅದರ ಗಾತ್ರವನ್ನು ಸಹ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.
  • ಬ್ಯಾಡ್ಜ್ ಸೌಲಭ್ಯ:
  • ಇವುಗಳ ಜೊತೆಗೆ ಯೂಟ್ಯೂಬ್ ಮತ್ತು ಯೂಟ್ಯೂಬ್ ಮ್ಯೂಸಿಕ್ ಆಪ್​ಗಳಿಗೆ ಬ್ಯಾಡ್ಜ್ ಸೌಲಭ್ಯವನ್ನು ತಂದಿದೆ.
  • ಈ ಕೆಲವು ವೈಶಿಷ್ಟ್ಯಗಳು ಈಗಾಗಲೇ ಲಭ್ಯವಿದೆ.
  • ಇನ್ನೂ ಕೆಲವು ವೈಶಿಷ್ಟ್ಯಗಳು ಶೀಘ್ರದಲ್ಲೇ ಬರಲಿವೆ ಎಂದು YouTube ಬಹಿರಂಗಪಡಿಸಿದೆ.

ಓದಿ: ಜಪಾನಿನಂತೆ ಭೂಗರ್ಭದಲ್ಲಿ ಬೃಹತ್ ಸುರಂಗ ಕೊರೆಯಲು ಮುಂದಾದ ಹೈದರಾಬಾದ್‌!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.