Phone Overheating Frequently: ದಿನವಿಡೀ ಸ್ಮಾರ್ಟ್‌ಫೋನ್ ಬಳಸುವುದು ಅಭ್ಯಾಸವಷ್ಟೇ ಅಲ್ಲ ಅನಿವಾರ್ಯವೂ ಆಗಿಬಿಟ್ಟಿದೆ. ಹೆಚ್ಚು ಬಳಸಿದಂತೆ ಸಾರ್ಟ್ಫೋನ್ ಹೆಚ್ಚು ಬಿಸಿಯಾಗಲು ಪ್ರಾರಂಭಿಸುತ್ತದೆ. ಈ ವೇಳೆ ನಮಗೆ ಮುಂದೇನು ಮಾಡಬೇಕೆಂಬುದು ತಿಳಿದಿರುವುದಿಲ್ಲ. ಫೋನ್‌ನ ಹೆಚ್ಚಿದ ತಾಪಮಾನವನ್ನು ಕಡಿಮೆ ಮಾಡಲು ನೀವು ತಕ್ಷಣವೇ ಕೆಲವು ಸೆಟ್ಟಿಂಗ್‌ಗಳನ್ನು ಬದಲಾಯಿಸಬೇಕು. ಇಲ್ಲದಿದ್ದರೆ ನೀವು ನಿಮ್ಮ ಫೋನ್ ಅನ್ನು ಕಳೆದುಕೊಳ್ಳವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲ ಫೋನ್ ಅನ್ನು ದೀರ್ಘಕಾಲದವರೆಗೆ ಆನ್ನಲ್ಲಿದ್ರೆ ಬ್ಯಾಟರಿ ಪರ್ಫಾರ್ಮೆನ್ಸ್ಗೆ ಒಡೆತ ಬೀಳುತ್ತದೆ.
ದೀರ್ಘಕಾಲದವರೆಗೆ ಬಿಸಿ ಆದ ಫೋನ್‌ಗಳು ಬೆಂಕಿಗಾಹುತಿ ಅಥವಾ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚು. ಈ ಬಗ್ಗೆ ನೀವು ಆಗಾಗ್ಗೆ ಓದಿರುತ್ತೀರಿ. ಆದರೂ ಕೆಲ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ ನೀವು ಫೋನ್ ಅನ್ನು ಕೂಲ್ ಮತ್ತು ಸುರಕ್ಷಿತವಾಗಿರಿಸಬಹುದು. ನೀವು ಫೋನ್ ಅನ್ನು ಅಧಿಕ ಬಿಸಿಯಾಗದಂತೆ ರಕ್ಷಿಸಲು ಬಯಸಿದರೆ ನೀವು ಈ ಸೆಟ್ಟಿಂಗ್‌ಗಳನ್ನು ಬದಲಾಯಿಸಬೇಕಾಗುತ್ತದೆ. ಅವು ಯಾವುವು ಎಂಬುದು ನೋಡೋಣಾ ಬನ್ನಿ..
ಬ್ಲೂಟೂತ್ ಆಫ್: ಸ್ಮಾರ್ಟ್‌ವಾಚ್‌ಗಳು ಮತ್ತು ಬ್ಲೂಟೂತ್ ಇಯರ್‌ಬಡ್‌ಗಳು ಹೆಚ್ಚಿನ ಸಾಧನಗಳಿಗೆ ಸಂಪರ್ಕದಲ್ಲಿರುತ್ತವೆ. ಸ್ಥಿರವಾದ ಬ್ಲೂಟೂತ್ ಸಂಪರ್ಕವು ಕೆಲಸ ಮಾಡುವುದಲ್ಲದೆ, ನಿಮ್ಮ ಫೋನ್ ಹೊಸ ಸಾಧನಗಳಿಗಾಗಿ ಸ್ಕ್ಯಾನ್ ಮಾಡುತ್ತಿರುತ್ತದೆ. ಈ ಪ್ರಕ್ರಿಯೆಯನ್ನು ನಿಲ್ಲಿಸುವುದರಿಂದ ಫೋನ್ ಕೂಲ್ ಆಗಲು ಅನುಮತಿಸುತ್ತದೆ. ಆದ್ದರಿಂದ ನಿಮ್ಮ ಸ್ಮಾರ್ಟ್‌ಫೋನ್ ಬಿಸಿಯಾಗಿದ್ದರೆ ನೀವು ಸ್ವಲ್ಪ ಸಮಯದವರೆಗೆ ಬ್ಲೂಟೂತ್ ಅಥವಾ ಇತರ ಸಂಪರ್ಕ ಆಯ್ಕೆಗಳನ್ನು ಆಫ್ ಮಾಡಬೇಕು.
ಬ್ರೈಟ್ ನೆಸ್ ಕಡಿಮೆ: ಬೇಸಿಗೆಯಲ್ಲಿ ಫೋನ್‌ನ ಡಿಸ್ಪ್ಲೇ ಬ್ರೈಟ್ನೆಸ್ ಹೆಚ್ಚಾದಾಗ ಫೋನ್ ಬಿಸಿಯಾಗುತ್ತದೆ. ಫೋನ್ ಅನ್ನು ಕೂಲ್ ಮಾಡಲು ನೀವು ಬ್ರೈಟ್ನೆಸ್ ಸೆಟ್ಟಿಂಗ್ ಅನ್ನು ಕಡಿಮೆ ಮಾಡಬೇಕು. ನೀವು ಕತ್ತಲೆ ಅಂತಹ ಸ್ಥಳಗಳಲ್ಲಿ ಹೆಚ್ಚಾಗಿ ಫೋನ್ ಬಳಸುತ್ತಿದ್ರೆ ಬ್ರೈಟ್ನೆಸ್ ಅನ್ನು ಕಡಿಮೆ ಮಾಡುವುದರಿಂದ ಒಳ್ಳೆಯದು.
ಫ್ಲೈಟ್ ಮೋಡ್ ಆನ್ ಮಾಡಿ: ನಿಮ್ಮ ಫೋನ್ ಇದ್ದಕ್ಕಿದ್ದಂತೆ ತುಂಬಾ ಬಿಸಿಯಾಗಿದ್ರೆ ನೀವು ತಕ್ಷಣವೇ ಫ್ಲೈಟ್ ಮೋಡ್ ಆನ್ ಮಾಡಬೇಕು. ಬ್ಯಾಕ್ಗ್ರೌಂಡ್ನಲ್ಲಿ ಅನೇಕ ಅಪ್ಲಿಕೇಶನ್‌ಗಳು ರನ್ ಆಗುತ್ತಿರುವ ಹಿನ್ನೆಲೆ ನಿಮ್ಮ ಫೋನ್ ಬಿಸಿಯಾಗುತ್ತಿರುತ್ತದೆ. ಆಗ ನಿಮ್ಮ ಮೊಬೈಲ್ ಡೇಟಾ ವ್ಯರ್ಥವಾಗುತ್ತಿರುತ್ತದೆ. ಅಂತಹ ಸಂದರ್ಭಗಳಲ್ಲಿ ನಿಮ್ಮ ಫೋನ್ ಅನ್ನು ಸ್ವಲ್ಪ ಸಮಯದವರೆಗೆ ಫ್ಲೈಟ್ ಮೋಡ್‌ನಲ್ಲಿ ಇರಿಸುವುದು ಸೂಕ್ತ. ಆಗ ನಿಮ್ಮ ಫೋನ್ ತಾಪಮಾನವು ಸಾಮಾನ್ಯ ಸ್ಥಿತಿಗೆ ಬರುತ್ತದೆ.
ಚಾರ್ಜ್ ಮಾಡುವಾಗ ಹುಷಾರ್: ಅನೇಕ ಜನರು ತಮ್ಮ ಫೋನ್ ಅನ್ನು ದೀರ್ಘಕಾಲದವರೆಗೆ ಚಾರ್ಜ್ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಫೋನ್ ಬಿಸಿಯಾಗಿದ್ದರೆ, ತಕ್ಷಣ ಫೋನ್ ಚಾರ್ಜ್ ಮಾಡುವುದನ್ನು ನಿಲ್ಲಿಸಬೇಕು. ಅಲ್ಲದೆ, ನಿಮ್ಮ ಫೋನ್‌ಗೆ ನೀವು ಇತರೆ ಕಂಪನಿಯ ಚಾರ್ಜರ್ ಅನ್ನು ಬಳಸಬಾರದು. ಚಾರ್ಜ್ ಮಾಡುವ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸೂಕ್ತವಲ್ಲ. ಫೋನ್ ಚಾರ್ಜ್ ಮಾಡುತ್ತಿರುವಾಗಲೇ ಫೋನ್ ಬಳಸುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಅಪಾಯ ಎದುರಾಗುವ ಸಂಭವ ಹೆಚ್ಚಾಗಿರುತ್ತದೆ.
Enable special modes: ಅನೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆದಾರರು ವಿಶೇಷವಾಗಿ ಪರ್ಫಾಮೆನ್ಸ್ ಮೋಡ್ ಅಥವಾ ಬ್ಯಾಟರಿ ಸೇವಿಂಗ್ ಮೋಡ್‌ಗಳನ್ನು ಆಯ್ಕೆ ಮಾಡಿರುತ್ತಾರೆ. ನೀವು ಸಹ ಈ ಸೆಟ್ಟಿಂಗ್ಗಳು ಬಳಸಬೇಕು. ಪರ್ಫಾಮೆನ್ಸ್ ಮೋಡ್ ಅಥವಾ ಬ್ಯಾಟರಿ ಸೇವಿಂಗ್ ಮೋಡ್ ಲಭ್ಯವಿದ್ದರೆ, ಅದನ್ನು ಸಕ್ರಿಯಗೊಳಿಸುವ ಮೂಲಕ ಫೋನ್ ಓವರ್‌ಲೋಡ್ ಆಗುವುದಿಲ್ಲ.
ಈ ರೀತಿ ಸೆಟ್ಟಿಂಗ್ಗಳು ನಿಮ್ಮ ಸ್ಮಾರ್ಟ್ ಫೋನ್ಗಳಲ್ಲಿ ಸಕ್ರಿಯಗೊಳಿಸುವುದರ ಮೂಲಕ ನೀವು ನಿಮ್ಮ ಫೋನ್ಗಳನ್ನು ಸುರಕ್ಷಿತ ಮತ್ತು ಬಿಸಿಯಾಗದಂತೆ ತಡೆದಂತಾಗುತ್ತದೆ.
ಓದಿ: ಸ್ಮಾರ್ಟ್ ವಾಚ್ ಮೂಲಕ ಟ್ಯಾಪ್ ಆ್ಯಂಡ್ ಪೇ ವೈಶಿಷ್ಟ್ಯ ಪರಿಚಯಿಸಿದ ಬೋಟ್! - TAP AND PAY IN BOAT