ETV Bharat / technology

ಜಗತ್ತಿಗೆ AI ಉತ್ಪನ್ನ ತಯಾರಿಸಲು ಭಾರತೀಯ ಡೆವಲಪರ್‌ಗಳಿಗೆ ಮೈಕ್ರೋಸಾಫ್ಟ್‌ ಪ್ರೋತ್ಸಾಹ: ನಾದೆಲ್ಲಾ - Microsoft

ಮೈಕ್ರೋಸಾಫ್ಟ್​ನ ಗಿಟ್​ಹಬ್​ನಲ್ಲಿ ಭಾರತೀಯ ಡೆವಲಪರ್​ಗಳು ಎರಡನೇ ಸ್ಥಾನದಲ್ಲಿದ್ದಾರೆ. ಭವಿಷ್ಯದಲ್ಲಿ ಅವರು ಮುಂಚೂಣಿಯಲ್ಲಿ ಇರಲಿದ್ದಾರೆ ಎಂದು ಮೈಕ್ರೋಸಾಫ್ಟ್‌ನ ಸತ್ಯ ನಾದೆಲ್ಲಾ ಭವಿಷ್ಯ ನುಡಿದಿದ್ದಾರೆ.

Satya Nadella says GitHub forecasts Indian will surpass the US

author img

By ETV Bharat Karnataka Team

Published : Feb 8, 2024, 3:27 PM IST

ಹೈದರಾಬಾದ್​: ಮೈಕ್ರೋಸಾಫ್ಟ್ ಕಂಪನಿಯು​ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಡೆವಲಪರ್‌ಗಳ ಸಮುದಾಯವನ್ನು ಕೇವಲ ದೇಶದ ಉತ್ಪನ್ನ ಮತ್ತು ಸೇವೆಗಳನ್ನು ನೀಡಲು ಮಾತ್ರವೇ ಅಲ್ಲದೇ, ಜಾಗತಿಕವಾಗಿ ಅವರನ್ನು ಸಬಲರನ್ನಾಗಿ ಮಾಡುತ್ತದೆ ಎಂದು ಮೈಕ್ರೋಸಾಫ್ಟ್​​ ಅಧ್ಯಕ್ಷ ಮತ್ತು ಸಿಇಒ ಸತ್ಯಾ ನಾದೆಲ್ಲಾ ತಿಳಿಸಿದರು. ಭಾರತ ಪ್ರವಾಸದಲ್ಲಿರುವ ಅವರು, ದೇಶದ ಡೆವಲಪರ್​ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಮೈಕ್ರೋಸಾಫ್ಟ್​ ಅಂತಿಮವಾಗಿ ಒಂದು ಡೆವಲಪರ್​​ ಕಂಪನಿ. ಸಂಸ್ಥೆಯ ಕೃತಕ ಬುದ್ಧಿಮತ್ತೆ (ಎಐ) ಉತ್ಪನ್ನಗಳ ತಯಾರಿಕೆಗೆ ನಮ್ಮ ಫ್ಲಾಟ್​ಫಾರ್ಮ್​ ಗಿಟ್​ಹಬ್‌ನಲ್ಲಿ ಭಾರತದ ಡೆವಲಪರ್​ಗಳ ಪಾತ್ರ ಅತ್ಯಂತ ದೊಡ್ಡ ಭರವಸೆ ಮೂಡಿಸಿದೆ. ಅಮೆರಿಕದಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ಭಾರತ 2017ರಲ್ಲಿ ಗಿಟ್​​ಹಬ್​ನಲ್ಲಿ ಅತಿ ದೊಡ್ಡ ಡೆವಲಪರ್​ ಸಮುದಾಯವನ್ನು ಹೊಂದಲಿದೆ. ಗಿಟ್​ಹಬ್‌ಗಳಾಗಿ ಎಐ ಆಧಾರಿತ ಯೋಜನೆ ರೂಪಿಸುವ ಪ್ರಮುಖ 10 ಜಾಗತಿಕ ಸಮುದಾಯದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು.

ಕಳೆದ ನವೆಂಬರ್​ನಲ್ಲಿ ಗಿಟ್​ಹಬ್​ಗೆ 3.5 ಮಿಲಿಯನ್​ ಜನರು ಸೇರುವ ಮೂಲಕ ಭಾರತೀಯರ ಸಂಖ್ಯೆ 13.2 ಮಿಲಿಯನ್​ ತಲುಪಿದೆ. ಜಾಗತಿಕವಾಗಿ ಗಿಟ್​​ಹಬ್​ ರೂಪಿಸುವ ಎಐ ಯೋಜನೆಯಲ್ಲಿ ಭಾರತ ಅತಿ ದೊಡ್ಡ ಕೊಡುಗೆ ಹೊಂದಿದೆ. ಈ ಸುಸ್ಥಿರ ಮತ್ತು ಗಮನಾರ್ಹ ಬೆಳವಣಿಗೆಯಿಂದಾಗಿ ಗಿಟ್​ಹಬ್​ ಅಂದಾಜಿಸುವಂತೆ 2017ರ ಹೊತ್ತಿಗೆ ಸಂಸ್ಥೆಯಲ್ಲಿ ಒಟ್ಟಾರೆ ಡೆವಲಪರ್ಗಳ​ ಸಂಖ್ಯೆಯಲ್ಲಿ ಅಮೆರಿಕವನ್ನು ಭಾರತ ಹಿಂದಿಕ್ಕಲಿದೆ ಎಂದು ಅವರು ಭವಿಷ್ಯ ನುಡಿದರು.

ಭಾರತದ ಡೆವಲಪರ್​ ಸಮುದಾಯಗಳು ವರ್ಷದಿಂದ ವರ್ಷಕ್ಕೆ ಸುಸ್ಥಿರ ಬೆಳವಣಿಗೆ ಕಾಣುತ್ತಿದೆ. 2023ರಲ್ಲಿ ಈ ದರ ಶೇ 36ರಷ್ಟಿತ್ತು. 2015ಕ್ಕೆ ಭಾರತದ 5 ಟ್ರಿಲಿಯನ್​ ಡಾಲರ್​ ಆರ್ಥಿಕತೆಯ ಗುರಿಯಲ್ಲಿ ಎಐ ಪಾತ್ರ ಶೇ 10ರಷ್ಟಿರಲಿದೆ. 2025ರಲ್ಲಿ 2 ಮಿಲಿಯನ್​ ಜನರಿಗೆ ಮೈಕ್ರೋಸಾಫ್ಟ್​ ಎಐ ಕೌಶಲ್ಯದ ಅವಕಾಶ ನೀಡಲಿದೆ. ಎಐ ಜಗತ್ತಿನಲ್ಲಿ ಭಾರತದ ಯುವಜನತೆ ಎಐ ಕಲಿತುಕೊಳ್ಳುವುದು ಅವಶ್ಯಕ ಎಂದು ನುಡಿದರು.

ಗಿಟ್​ಹಬ್​ನ ಸ್ಟೇಟ್ ಆಫ್ ದಿ ಆಕ್ಟೋವರ್ಸ್ ವರದಿ 2023ರಲ್ಲಿ ಜನರೇಟಿವ್​ ಎಐ ಕೊಡುಗೆಗಳು ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ ಎಂದು ತಿಳಿಸಿದೆ. ಡೆವಲಪರ್​ ಸಮುದಾಯದಲ್ಲಿ ಅಮೆರಿಕ, ಭಾರತ ಮತ್ತು ಜರ್ಮನಿ ಪ್ರಮುಖ ಮೂರು ಸ್ಥಾನದಲ್ಲಿದ್ದು ನಂತರದಲ್ಲಿ ಯುಕೆ, ಜಪಾನ್​, ಹಾಂಕ್‌ಕಾಂಗ್​ ಮತ್ತು ಫ್ರಾನ್ಸ್​ ಇದೆ.(ಐಎಎನ್​ಎಸ್​)

ಇದನ್ನೂ ಓದಿ: 20 ಲಕ್ಷ ಭಾರತೀಯರಿಗೆ ಮೈಕ್ರೋಸಾಫ್ಟ್​ನಿಂದ AI ತರಬೇತಿ: ಬೆಂಗಳೂರಿನಲ್ಲಿ ನಾದೆಲ್ಲಾ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.