IPHONE 16 HIGHLIGHTS: Apple iPhone 16 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಸೆಪ್ಟೆಂಬರ್ 9ರಂದು 'ಇಟ್ಸ್ ಗ್ಲೋಟೈಮ್' ಎಂಬ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಇದರೊಂದಿಗೆ ಕಂಪನಿಯು Apple Watch Series 10 ಮತ್ತು Apple AirPods ಗ್ಯಾಜೆಟ್‌ಗಳನ್ನು ಪರಿಚಯಿಸಿದೆ. ಇದರ ವೈಶಿಷ್ಟ್ಯ ಮತ್ತು ಬೆಲೆಗಳ ಬಗ್ಗೆ ತಿಳಿಯೋಣ.
- ಐಫೋನ್ 16 ಬೇಸ್ ಮಾಡೆಲ್ 6.1 ಇಂಚಿನ ಡಿಸ್ಪ್ಲೇ ಮತ್ತು ಐಫೋನ್ 16 ಪ್ಲಸ್ ಮಾದರಿಯು 6.7 ಇಂಚಿನ ಡಿಸ್ಪ್ಲೇ 120 Hz OLED ಜೊತೆಗೆ 2000 nitsನ ಬ್ರೈಟ್ನೆಸ್ ಸಾಮರ್ಥ್ಯ ಹೊಂದಿವೆ.
- ಐಫೋನ್ 16 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳ ಹೊರತಾಗಿ, ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಹೊಸ ರಿಯರ್ ಕ್ಯಾಮೆರಾ ವಿನ್ಯಾಸ ಹೊಂದಿವೆ.
- ಇದರ ಜೊತೆಗೆ, ಆ್ಯಪಲ್ ತನ್ನ ಐಫೋನ್ 16 ಸರಣಿಯ ಆವೃತ್ತಿಯಲ್ಲಿ ಈ ಬಾರಿ ಬದಿಯಲ್ಲಿ ಹಲವು ಬಟನ್‌ಗಳನ್ನು ನೀಡಿದೆ. ಅದರಂತೆ, ಕ್ಯಾಮೆರಾ ಬಟನ್ ಅನ್ನು ಹಲವು ವೈಶಿಷ್ಟ್ಯಗಳೊಂದಿಗೆ ಹೊಸದಾಗಿ ಪರಿಚಯಿಸಲಾಗಿದೆ.
- ಐಫೋನ್ 16 ಮಾದರಿಯಲ್ಲಿನ ಆ್ಯಕ್ಷನ್ ಬಟನ್ ಅನ್ನು ಸಮಯಕ್ಕೆ ಸರಿಹೊಂದುವಂತೆ ಮಾಡಬಹುದು ಮತ್ತು ಬಹು ಅಪ್ಲಿಕೇಶನ್‌ಗಳನ್ನು ನಿರ್ವಹಿಸಬಹುದು.
- ಭಾರತದಲ್ಲಿ iPhone 16ರ ಬೆಲೆ ರೂ.79,900, iPhone 16 Plus ಬೆಲೆ ರೂ.89,900, iPhone 16 Proರ ಬೆಲೆ ರೂ.1,19,900 ಮತ್ತು iPhone 16 Pro Maxರ ಬೆಲೆ ರೂ.1,44,900ರಿಂದ ಪ್ರಾರಂಭವಾಗುತ್ತದೆ.
- Apple iPhone 16 ಮಾದರಿಗಳಲ್ಲಿ ಹೊಸದಾಗಿ ಸುಧಾರಿತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಿದೆ. ಕಂಪನಿಯು 'ಆ್ಯಪಲ್ ಇಂಟೆಲಿಜೆನ್ಸ್' ಎಂದು ಹೆಸರಿಸಿದೆ. ಆ್ಯಪಲ್ ತನ್ನ ಉದ್ಘಾಟನಾ ಸಮಾರಂಭದಲ್ಲಿ ಹೊಸ ಅಪ್ಡೇಟ್ ಮೂಲಕ ಬಳಕೆದಾರರಿಗೆ ಸೇವೆಯನ್ನು ಕ್ರಮೇಣವಾಗಿ ಹೊರತರಲಾಗುವುದು ಎಂದು ಘೋಷಿಸಿತು.
- A18 ಚಿಪ್‌ಸೆಟ್ ಅನ್ನು iPhone 16 ಮಾದರಿಗಳಲ್ಲಿ ಬಳಸಲಾಗುತ್ತದೆ. ಇದು ಮಷಿನ್ ಲರ್ನಿಂಗ್ ಜೊತೆಗೆ ಸಂಪೂರ್ಣವಾಗಿ ಸಿಂಕ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದಾಗಿ, ಐಫೋನ್ 16 ಸರಣಿಯ ಸ್ಮಾರ್ಟ್‌ಫೋನ್‌ಗಳು ಕೃತಕ ಬುದ್ಧಿಮತ್ತೆಯೊಂದಿಗೆ ನಿರ್ವಹಿಸುವ ಕಾರ್ಯಗಳನ್ನು ಇನ್ನಷ್ಟು ಸುಲಭಗೊಳಿಸುತ್ತವೆ.
- ಐಫೋನ್ 16ನ ಮೂಲ ಮಾದರಿಗಳು ಹೊಸ 48-ಮೆಗಾಪಿಕ್ಸೆಲ್ ಫ್ಯೂಷನ್ ಕ್ಯಾಮೆರಾವನ್ನು ಹೊಂದಿವೆ.
- iOS 18 ಹೊಸ ಆವೃತ್ತಿಯು ಸುಧಾರಿತ ಸ್ಯಾಟ್ಲೈಟ್ ಮೇಸೆಜ್ ಕಳುಹಿಸುವ ವೈಶಿಷ್ಟ್ಯ ಒಳಗೊಂಡಿದೆ.
- ಹೊಸ ಪ್ಲಾಟ್‌ಫಾರ್ಮ್ ಚಾಟ್‌ಜಿಪಿಟಿ ಒಳಗೊಂಡಿದೆ ಎಂದು ಆ್ಯಪಲ್ ದೃಢಪಡಿಸಿದೆ.