ETV Bharat / technology

ಮೈಕ್ರೋಸಾಫ್ಟ್ ಎಐ ನೂತನ ಸಿಇಒ ಮುಸ್ತಫಾ ಸುಲೇಮಾನ್ ಯಾರು?: ಅವರ ಸಾಧನೆಗಳೇನು? - Mustafa Suleyman

ಮೈಕ್ರೋಸಾಫ್ಟ್ ಎಐ ವಿಭಾಗದ ಮುಖ್ಯಸ್ಥರಾಗಿ ಮುಸ್ತಫಾ ಸುಲೇಮಾನ್ ನೇಮಕವಾಗಿದ್ದಾರೆ.

Mustafa Suleyman
Mustafa Suleyman
author img

By ETV Bharat Karnataka Team

Published : Mar 20, 2024, 6:44 PM IST

ನವದೆಹಲಿ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ದಿಗ್ಗಜ, ಬ್ರಿಟಿಷ್ ವ್ಯಕ್ತಿ ಮುಸ್ತಫಾ ಸುಲೇಮಾನ್ ಅವರನ್ನು ಮೈಕ್ರೋಸಾಫ್ಟ್ ತನ್ನ ಎಐ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಿದೆ. ಗೂಗಲ್ ಡೀಪ್ ಮೈಂಡ್​ನ ಸಹ-ಸಂಸ್ಥಾಪಕರಾಗಿರುವ ಸುಲೇಮಾನ್ ಈಗ ನೇರವಾಗಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಅವರ ಕೈಕೆಳಗೆ ಕೆಲಸ ಮಾಡಲಿದ್ದಾರೆ.

ಸುಲೇಮಾನ್ ಸ್ವತಃ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಮೈಕ್ರೋಸಾಫ್ಟ್ ಎಐ ವಿಭಾಗದ ಮುಖ್ಯಸ್ಥರಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಕೂಡ ಸುಲೇಮಾನ್ ಅವರನ್ನು ಕಂಪನಿಗೆ ಸ್ವಾಗತಿಸಿದ್ದಾರೆ. ಮೈಕ್ರೋಸಾಫ್ಟ್​ನ ಪ್ರಮುಖ ಹುದ್ದೆಗೆ ನೇಮಕಗೊಂಡ ಮುಸ್ತಫಾ ಸುಲೇಮಾನ್ ಬಗ್ಗೆ ಒಂದಿಷ್ಟು ಕುತೂಹಲಕರ ಮಾಹಿತಿ ಇಲ್ಲಿದೆ.

  • 2023 ರ ಟೈಮ್ ಮ್ಯಾಗಜೀನ್​ನ ಎಐ ಕ್ಷೇತ್ರದಲ್ಲಿ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಮುಸ್ತಫಾ ಸುಲೈಮಾನ್ ಸ್ಥಾನ ಪಡೆದಿದ್ದಾರೆ.
  • ಅವರು 1984 ರಲ್ಲಿ ಲಂಡನ್​ನಲ್ಲಿ ಟ್ಯಾಕ್ಸಿ ಚಾಲಕ ಸಿರಿಯನ್ ಮೂಲದ ತಂದೆ ಮತ್ತು ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಇಂಗ್ಲಿಷ್ ತಾಯಿಗೆ ಜನಿಸಿದರು.
  • ಮುಸ್ತಫಾ ಸುಲೈಮಾನ್ ಆಕ್ಸ್​ಫರ್ಡ್​ ವಿಶ್ವ ವಿದ್ಯಾಲಯದಲ್ಲಿ ಕಲಿಯುವಾಗ ಕಾಲೇಜು ಶಿಕ್ಷಣವನ್ನು ಅರ್ಧದಲ್ಲಿ ತೊರೆದು ಲಾಭರಹಿತ ದೂರವಾಣಿ ಸಮಾಲೋಚನೆ ಸೇವೆಗೆ ಸೇರಿಕೊಂಡರು. ಇದು ಮುಸ್ಲಿಮರಿಗೆ ಯುಕೆಯಲ್ಲಿ ಅತಿದೊಡ್ಡ ಮಾನಸಿಕ ಆರೋಗ್ಯ ಸಹಾಯ ಸೇವೆಗಳಲ್ಲಿ ಒಂದಾಗಿದೆ.
  • ಅವರು ವಿಶ್ವಸಂಸ್ಥೆ (ಯುಎನ್), ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಮತ್ತು ಡಚ್ ಸರ್ಕಾರದೊಂದಿಗೆ ಸಂಘರ್ಷ ಪರಿಹಾರ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಕೆಲಸ ಮಾಡಿದ್ದಾರೆ.
  • ಅವರು 2010 ರಲ್ಲಿ ತಮ್ಮ ಮೊದಲ ಎಐ ಸ್ಟಾರ್ಟ್ಅಪ್ ಡೀಪ್ ಮೈಂಡ್ ಅನ್ನು ಸಹ-ಸ್ಥಾಪಿಸಿದರು. ನಂತರ ಇದನ್ನು 2014 ರಲ್ಲಿ ಗೂಗಲ್ ಸ್ವಾಧೀನಪಡಿಸಿಕೊಂಡಿತು. ನಂತರ ಅವರು ಗೂಗಲ್​ನಲ್ಲಿ ಎಐ ಉತ್ಪನ್ನಗಳು ಮತ್ತು ಎಐ ನೀತಿ ವಿಭಾಗದ ಉಪಾಧ್ಯಕ್ಷರಾಗಿ ಕೆಲಸ ಮಾಡಿದರು.
  • ಗೂಗಲ್​ನ ಡೇಟಾ ಕೇಂದ್ರಗಳಲ್ಲಿ ಶೇಕಡಾ 40 ರಷ್ಟು ಶಕ್ತಿಯ ಬಳಕೆಯನ್ನು ಕಡಿಮೆ ಮಾಡಲು ಡೀಪ್ ಮೈಂಡ್​ನ ಯಂತ್ರ ಕಲಿಕೆ ಕ್ರಮಾವಳಿಗಳ ಅನ್ವಯವು ಅವರ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ.
  • ಅವರು 2022 ರಲ್ಲಿ ಲಿಂಕ್ಡ್ಇನ್ ಸಹ-ಸಂಸ್ಥಾಪಕ ರೀಡ್ ಹಾಫ್ ಮನ್ ಅವರೊಂದಿಗೆ ಸೇರಿಕೊಂಡು ಇನ್​ಫ್ಲೆಕ್ಷನ್ ಎಐ ಕಂಪನಿಯನ್ನು ಪ್ರಾರಂಭಿಸಿದರು. ಇದು 1.5 ಬಿಲಿಯನ್ ಡಾಲರ್ ಫಂಡಿಂಗ್ ಸಂಗ್ರಹಿಸಿತು ಮತ್ತು ಇದರ ಮೌಲ್ಯ ಈಗ 4 ಬಿಲಿಯನ್ ಡಾಲರ್ ಆಗಿದೆ. ಇದರ ಬೆಂಬಲಿಗರಲ್ಲಿ ಮೈಕ್ರೋಸಾಫ್ಟ್, ಎನ್ವಿಡಿಯಾ, ಬಿಲ್ ಗೇಟ್ಸ್ ಮತ್ತು ಹಾಫ್ ಮನ್ ಸೇರಿದ್ದಾರೆ.
  • ಅವರು 'ದಿ ಕಮಿಂಗ್ ವೇವ್: ಟೆಕ್ನಾಲಜಿ, ಪವರ್ ಅಂಡ್ ದಿ ಟ್ವೆಂಟಿ-ಫಸ್ಟ್ ಸೆಂಚುರಿ ಗ್ರೇಟೆಸ್ಟ್ ಡೈಲೆಮಾ' ಎಂಬ ಪುಸ್ತಕವನ್ನು ಬರೆದಿದ್ದಾರೆ. ಇದು 32 ಭಾಷೆಗಳಿಗೆ ಅನುವಾದಗೊಂಡಿದೆ.

ಇದನ್ನೂ ಓದಿ : ಸ್ಯಾಮ್​ಸಂಗ್ ಗ್ಯಾಲಕ್ಸಿ A55 5G, A35 5G ಬಿಡುಗಡೆ: ಬೆಲೆ ಎಷ್ಟು, ವಿಶೇಷತೆ ಏನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.