Reverse Image Search: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್‌ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಮತ್ತೊಂದು ಫೀಚರ್ ಹೊರತರಲು ಕಾರ್ಯನಿರತವಾಗಿದೆ.
ಇಮೇಜ್ಗಳ ಮೂಲಕ ಪತ್ತೆ ಹಚ್ಚಲು 'ರಿವರ್ಸ್ ಇಮೇಜ್ ಸರ್ಚ್' ಎಂಬ ಸೌಲಭ್ಯವನ್ನು ತರಲು ಪ್ರಯತ್ನಿಸುತ್ತಿದೆ. ವಾಟ್ಸ್ಆ್ಯಪ್ನಲ್ಲಿ ಇಮೇಜ್‌ಗಳನ್ನು ಸರ್ಚ್ ಮಾಡಲು ‘ಸರ್ಚ್ ಆನ್ ವೆಬ್’ ಎಂಬ ಆಯ್ಕೆಯನ್ನು ತಂದಿದೆ. ಇದರ ಸಹಾಯದಿಂದ ನೀವು ಡೈರೆಕ್ಟ್ ಆಗಿ ವಾಟ್ಸ್ಆ್ಯಪ್ನಲ್ಲಿಯೇ ಇಮೇಜ್‌ಗಳನ್ನು ಸರ್ಚ್ ಮಾಡಬಹುದು.
ಇದರ ಬಳಕೆ ಹೇಗೆ?:
- ನೀವು ವಾಟ್ಸ್‌ಆ್ಯಪ್ ಚಾಟ್ನಲ್ಲಿ ಇಮೇಜ್ ಓಪನ್ ಮಾಡಿದಾಗ ಮೇಲಿನ ಬಲಭಾಗದಲ್ಲಿ ಮೂರು ಡಾಟ್ಗಳ ಮೆನು ಕಾಣುತ್ತದೆ.
- ಮೆನುವಿನ ಮೇಲೆ ಕ್ಲಿಕ್ ಮಾಡಿದಾಗ ಹಲವಾರು ಆಪ್ಷನ್ಗಳು ಕಾಣಿಸುತ್ತವೆ.
- ಅಲ್ಲಿ ಸರ್ಚ್ ಆನ್ ವೆಬ್ ಎಂಬ ಆಪ್ಷನ್ ಗೋಚರಿಸುತ್ತೆ.
- ಅದರ ಮೇಲೆ ಕ್ಲಿಕ್ ಮಾಡಿ ರಿವರ್ಸ್ ಇಮೇಜ್ ಸರ್ಚ್ ಆರಂಭಿಸಬಹುದು.
- ಹೀಗೆ ನೀವು ವೆಬ್ ಸರ್ಚ್ಗಾಗಿ ಗೂಗಲ್ಗೆ ಕಳುಹಿಸುವ ಇಮೇಜ್ಗಳು ಗೌಪ್ಯವಾಗಿರುತ್ತವೆ.
- ಈ ಮಾಹಿತಿಯನ್ನು ಮೆಟಾ ಜೊತೆ ಹಂಚಿಕೊಳ್ಳಲಾಗುವುದಿಲ್ಲ ಎಂದು ವಾಬಿಟಾ ಇನ್ಫೋ ಸ್ಪಷ್ಟವಾಗಿ ಹೇಳಿದೆ.
ನೀವು ಹೀಗೆ ಇಮೇಜ್‌ಗಳನ್ನು ಸರ್ಚ್ ಮಾಡಿದಾಗ ಅದಕ್ಕೆ ಸಂಬಂಧಿಸಿದ ಮೂಲ, ಆ ಫೋಟೋ ಎಲ್ಲಿಂದ ಬಂತು, ಆನ್ಲೈನ್ನಲ್ಲಿ ಫೋಟೋವನ್ನು ಯಾರಾದ್ರೂ ಬಳಸಿದ್ದಾರೆಯೇ ಎಂಬಿತ್ಯಾದಿ ವಿವರಗಳೂ ಸೇರಿದಂತೆ ಹೆಚ್ಚಿನ ಮಾಹಿತಿಗಳು ಕಾಣಿಸುತ್ತವೆ. ಇದರ ಜೊತೆಗೆ ಫೋಟೋವನ್ನು ಯಾರಾದ್ರೂ ಎಡಿಟ್ ಮಾಡಿದ್ದಾರೆಯೇ, ತಪ್ಪಾಗಿ ಏನಾದ್ರೂ ಬದಲಾಯಿಸಿದ್ದಾರಾ ಎಂಬ ವಿಷಯಗಳನ್ನೂ ಸಹ ನೀವು ತಿಳಿದುಕೊಳ್ಳಬಹುದಾಗಿದೆ.
ಇದು ಯಾವಾಗ ಬರುತ್ತೆ?: ಈ ಫೀಚರ್ ಮೊದಲು ಬಿಟಾ ಬಳಕೆದಾರರಿಗೆ ಬರಲಿದೆ ಎಂದು ವಾಬಿಟಾ ಇನ್ಫೋ ತನ್ನ ಬ್ಲಾಗ್ನಲ್ಲಿ ತಿಳಿಸಿದೆ. ಇದಕ್ಕೆ ಸಂಬಂಧಿಸಿದ ಫೋಟೋ ಹಂಚಿಕೊಂಡಿದೆ. ಮುಂಬರುವ ಕೆಲ ವಾರಗಳಲ್ಲಿ ಈ ಫೀಚರ್ ಎಲ್ಲರಿಗೂ ಲಭ್ಯವಾಗಲಿದೆ ಎಂದು ತಿಳಿಸಿದೆ.
ಈ ಫೀಚರ್ ಉದ್ದೇಶವೇನು?: ಇದಕ್ಕೂ ಮುನ್ನಾ ವಾಟ್ಸಾಪ್ನಲ್ಲಿ ಡೈರೆಕ್ಟ್ ಆಗಿ ಇಮೇಜ್ ಬಗ್ಗೆ ಸರ್ಚ್ ಮಾಡುವ ಆಪ್ಷನ್ ಇಲ್ಲವಾಗಿತ್ತು. ಫೋಟೋ ಬಗ್ಗೆ ಸರ್ಚ್ ಮಾಡುವುದಕ್ಕೆ ನಾವು ಇತರೆ ಆ್ಯಪ್ ಅಥವಾ ಬ್ರೌಸರ್ಗಳ ಮೊರೆ ಹೋಗುತ್ತಿದ್ದೆವು. ಈಗ ವಾಟ್ಸ್‌ಆ್ಯಪ್ ತರುತ್ತಿರುವ ಈ ಫೀಚರ್ನಿಂದ ಆ ಸಮಸ್ಯೆ ಬಗೆಹರಿದಂತಾಗುತ್ತದೆ.
ಇಮೇಜ್ ಸರ್ಚ್ಗಾಗಿ ಇನ್ಮುಂದೆ ವಾಟ್ಸ್‌ಆ್ಯಪ್ ಬಳಕೆದಾರರು ಥರ್ಡ್ ಆ್ಯಪ್ ಅಥವಾ ಬ್ರೌಸರ್ಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ವಾಟ್ಸ್‌ಆ್ಯಪ್ ವೇದಿಕೆ ಮೂಲಕವೇ ನೇರವಾಗಿ ಇಮೇಜ್ ಸರ್ಚ್ ಮಾಡಬಹುದಾಗಿದೆ. ವಾಟ್ಸ್‌ಆ್ಯಪ್ ಮೂಲಕ ಹಂಚಿಕೊಳ್ಳಲಾದ ವಿಷಯದ ಪಾರದರ್ಶಕತೆಯನ್ನು ಸುಧಾರಿಸುವುದು ಈ ಫೀಚರ್ನ ಮುಖ್ಯ ಉದ್ದೇಶ.
ಇದನ್ನೂ ಓದಿ: ನಿಮ್ಮ ಮೊಬೈಲ್ ಇಂಟರ್ನೆಟ್ ಸ್ಲೋ ಆಗಿದೆಯೇ? ಸ್ಪೀಡ್ ಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್