ETV Bharat / technology

ಹೊಸ ಲಿಸ್ಟ್ಸ್​ ಎಂಬ ವೈಶಿಷ್ಟ್ಯ ಪರಿಚಯಿಸಿದ ವಾಟ್ಸ್​ಆ್ಯಪ್​​ , ಏನಿದರ ವಿಶೇಷತೆ? - WHATSAPP CUSTOM LISTS FEATURE

WhatsApp Custom Lists Feature: ವಾಟ್ಸಾಪ್ Lists ಎಂಬ ಹೊಸ ವೈಶಿಷ್ಟ್ಯ ಪರಿಚಯಿಸಿದೆ. ಇದು ಕಸ್ಟಮ್ ವಿಭಾಗಗಳ ಆಧಾರದ ಮೇಲೆ ವ್ಯವಸ್ಥಿತವಾಗಿ ಚಾಟ್‌ಗಳನ್ನು ಆಯೋಜಿಸಲು ನಿಮಗೆ ಸಹಾಯ ಮಾಡುತ್ತದೆ.

WHATSAPP CUSTOM LISTS  WHATSAPP CHAT FILTERS  WHATSAPP MESSAGING APP
ಹೊಸ ಲಿಸ್ಟ್ಸ್​ ಎಂಬ ವೈಶಿಷ್ಟ್ಯ ಪರಿಚಯಿಸಿದ ವಾಟ್ಸಾಪ್ (WhatsApp)
author img

By ETV Bharat Tech Team

Published : Nov 2, 2024, 1:30 PM IST

WhatsApp Custom Lists Feature: ಚಾಟ್‌ಗಳನ್ನು ಇನ್ನಷ್ಟು ಸುಲಭ ಮತ್ತು ವ್ಯವಸ್ಥಿತವಾಗಿ ಮಾಡಲು ವಾಟ್ಸ್​ಆ್ಯಪ್​​ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. "Lists" ಎಂದು ಹೆಸರಿಸಲಾಗಿದೆ. ಈ ವೈಶಿಷ್ಟ್ಯದ ಉದ್ದೇಶವು ಬಳಕೆದಾರರು ತಮ್ಮ ಚಾಟ್‌ಗಳನ್ನು ವಿವಿಧ ವರ್ಗಗಳಾಗಿ ವಿಂಗಡಿಸಲು ಅನುವು ಮಾಡಿಕೊಡುತ್ತದೆ. ಇದು ಚಾಟ್‌ಗಳನ್ನು ಮಾಡಲು ಮತ್ತು ಹುಡುಕಲು ಸುಲಭವಾಗುತ್ತದೆ. ಅದರ ಹಿಂದಿನ ಚಾಟ್ ಫಿಲ್ಟರ್‌ಗಳ ಯಶಸ್ಸಿನ ನಂತರ ವಾಟ್ಸ್​ಆ್ಯಪ್​​ ​ ಈಗ ತನ್ನ ಬಳಕೆದಾರರಿಗೆ ಇನ್ನಷ್ಟು ನಿಯಂತ್ರಣವನ್ನು ನೀಡಲು ಅದರ ವೈಶಿಷ್ಟ್ಯಗಳನ್ನು ಸುಧಾರಿಸುತ್ತಿದೆ. ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯೋಣ ಬನ್ನಿ..

ಲಿಸ್ಟ್​ ರಚಿಸುವುದು ಹೇಗೆ?: ಲಿಸ್ಟ್ಸ್​ ವೈಶಿಷ್ಟ್ಯವು ಬಳಕೆದಾರರಿಗೆ ಕುಟುಂಬ, ಕೆಲಸ ಅಥವಾ ಸ್ನೇಹಿತರು ನಂತಹ ಕಸ್ಟಮ್ ವರ್ಗಗಳನ್ನು ರಚಿಸಲು ಅನುಮತಿಸುತ್ತದೆ. ಪ್ರತಿ ಚಾಟ್ ಸುಲಭವಾಗಿ ಬೇರೆ ವರ್ಗಕ್ಕೆ ಪ್ರತ್ಯೇಕಿಸುತ್ತದೆ. ಇದರೊಂದಿಗೆ, ನೀವು ಮತ್ತೆ ಮತ್ತೆ ಸ್ಕ್ರೋಲ್ ಮಾಡದೆಯೇ ನಿಮ್ಮ ಪ್ರಮುಖ ಚಾಟ್ ತ್ವರಿತವಾಗಿ ಹುಡುಕಬಹುದು. ಈ ಹೊಸ ವೈಶಿಷ್ಟ್ಯವು ಬಳಕೆದಾರರ ಅನುಭವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ.

ಈ ಲಿಸ್ಟ್ಸ್​ ಮಾಡುವುದು ತುಂಬಾ ಸುಲಭ. ಚಾಟ್ ಟ್ಯಾಬ್‌ನಲ್ಲಿರುವ “+” ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ನೀವು ಹೊಸ ಲಿಸ್ಟ್ಸ್​ ಕ್ರಿಯೆಟ್​ ಮಾಡಬಹುದು. ಹೆಸರುಗಳನ್ನು ಸಹ ನೀವು ಬದಲಿಸಬಹುದು. ಅಷ್ಟೇ ಅಲ್ಲ ಆ ಗ್ರೂಪ್​ಗೆ ನೀವು ಹೊಸ ನಂಬರ್​ಗಳನ್ನು ಸಹ ಸೇರಿಸಬಹುದು. ಲಿಸ್ಟ್ಸ್​ ವೈಶಿಷ್ಟ್ಯವು ಗುಂಪು ಮತ್ತು ಒಬ್ಬರಿಗೊಬ್ಬರು ಚಾಟ್‌ಗಳಿಗೆ ಲಭ್ಯವಿದೆ. ಇದು ಬಳಕೆದಾರರಿಗೆ ತಮ್ಮ ಸಂಭಾಷಣೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಅಪ್ಲಿಕೇಶನ್ ಬಳಸುವುದು ಅತಿ ಸುಲಭ: ಲಿಸ್ಟ್ಸ್​ನೊಂದಿಗೆ ನಿಮ್ಮ ಎಲ್ಲಾ ಚಾಟ್‌ಗಳನ್ನು ಒಂದೇ ಸ್ಥಳದಲ್ಲಿ ಸುಂದರವಾಗಿ ಪ್ರದರ್ಶಿಸಲಾಗುತ್ತದೆ. ಹೀಗಾಗಿ ವಾಟ್ಸ್​ಆ್ಯಪ್​​ ​ ಅಪ್ಲಿಕೇಶನ್ ಬಳಸಲು ಸುಲಭವಾಗುತ್ತದೆ. ನೀವು ಗೆಳತಿ ಅಥವಾ ಗೆಳೆಯನನ್ನು ಹೊಂದಿದ್ದರೆ, ಈ ವೈಶಿಷ್ಟ್ಯವು ನಿಮಗೆ ತುಂಬಾ ಉಪಯುಕ್ತವಾಗಿರುತ್ತದೆ. ಏಕೆಂದರೆ ನಿಮ್ಮ ವಿಶೇಷ ವ್ಯಕ್ತಿಯ ಚಾಟ್‌ಗಳನ್ನು ನೀವು ಪ್ರತ್ಯೇಕವಾಗಿ ಇರಿಸಬಹುದು.

ವಾಟ್ಸ್​ಆ್ಯಪ್​​​​​​ನ ಈ ವೈಶಿಷ್ಟ್ಯವು ಕ್ರಮೇಣ ಎಲ್ಲಾ ಬಳಕೆದಾರರಿಗೆ ಲಭ್ಯವಾಗುತ್ತಿದೆ ಮತ್ತು ಕಂಪನಿಯು ಅದನ್ನು ಇನ್ನಷ್ಟು ಉತ್ತಮಗೊಳಿಸಲು ಯೋಜಿಸುತ್ತಿದೆ. ವಿಶೇಷವಾಗಿ ಖಾಸಗಿ ಮತ್ತು ವೃತ್ತಿಪರ ಚಾಟ್‌ಗಳನ್ನು ಹೊಂದಿರುವವರಿಗೆ, ಈ ವೈಶಿಷ್ಟ್ಯವು ಕೆಲಸವನ್ನು ಹೆಚ್ಚು ಸುಲಭಗೊಳಿಸುತ್ತದೆ.

ಲಿಸ್ಟ್ಸ್​ನೊಂದಿಗೆ ನೀವು ನಿಮ್ಮ ಆಯ್ಕೆಯ ಕಸ್ಟಮ್ ವಿಭಾಗಗನ್ನು ಕ್ರಿಯಟ್​ ಮಾಡಬಹುದು. ಆಗ ನಿಮ್ಮ ಚಾಟ್‌ಗಳನ್ನು ಫಿಲ್ಟರ್ ಮಾಡಬಹುದು. ಅದು ಫ್ಯಾಮಿಲಿ, ಕೆಲಸ ಅಥವಾ ನಿಮ್ಮ ಸ್ಥಳೀಯ ನೆರೆಹೊರೆಯವರಿಗಾಗಿ ಲಿಸ್ಟ್​ ಆಗಿರಲಿ, ನಿಮಗೆ ಅಗತ್ಯವಿರುವಾಗ ಪ್ರಮುಖವಾದ ಸಂಭಾಷಣೆಗಳ ಮೇಲೆ ಕೇಂದ್ರೀಕರಿಸಲು ಲಿಸ್ಟ್​ಗಳು ನಿಮಗೆ ಸಹಾಯ ಮಾಡುತ್ತವೆ ಎಂದು ವಾಟ್ಸ್​​ಆ್ಯಪ್​ ​ ಹೇಳಿದೆ.

ಓದಿ: ದೇಶದಲ್ಲಿ ಹೆಚ್ಚುತ್ತಿದೆ ಡಿಜಿಟಲ್​ ವಹಿವಾಟು; ಅಕ್ಟೋಬರ್​ನಲ್ಲಿ ಹೊಸ ದಾಖಲೆ ಬರೆದ ಯುಪಿಐ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.