ETV Bharat / technology

WhatsApp ಬಳಕೆದಾರರಿಗೆ ಗುಡ್​ ನ್ಯೂಸ್​; ಶೀಘ್ರವೇ ಬರಲಿದೆ ಈ ಹೊಸ ವೈಶಿಷ್ಟ್ಯ - WhatsApp In App Dialer - WHATSAPP IN APP DIALER

ವಾಟ್ಸಾಪ್​ ಎರಡು ಹೊಸ​ ವೈಶಿಷ್ಟ್ಯಗಳನ್ನು ಪರಿಚಯಿಸಿದ್ದು, ಶೀಘ್ರವೇ ಬಳಕೆದಾರರಿಗೆ ಲಭ್ಯವಾಗಲಿದೆ.

WhatsApp ಬಳಕೆದಾರರಿಗೆ ಗುಡ್​ ನ್ಯೂಸ್​: ಶೀಘ್ರವೇ ಬರಲಿದೆ ಈ ಹೊಸ ವೈಶಿಷ್ಟ್ಯ

author img

By ETV Bharat Karnataka Team

Published : Apr 30, 2024, 12:36 PM IST

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ತನ್ನ ಬಳಕೆದಾರರನ್ನು ಆಕರ್ಷಿಸುತ್ತಲೇ ಇರುತ್ತದೆ. ಇದರ ಭಾಗವಾಗಿ, ಶೀಘ್ರದಲ್ಲೇ ಇನ್-ಆಪ್ ಡಯಲರ್ ಅನ್ನು ಸಹ ಜಾರಿಗೆ ತರುತ್ತಿದೆ. ಇದರರ್ಥ ಟ್ರೂಕಾಲರ್ ಅಥವಾ ಗೂಗಲ್ ಡಯಲರ್ ಬಳಸದೆಯೇ ಬಳಕೆದಾರರು ನೇರವಾಗಿ WhatsApp ನಿಂದ ಕರೆಗಳನ್ನು ಮಾಡಬಹುದಾಗಿದೆ.

ಸಂಪೂರ್ಣವಾಗಿ ಸುರಕ್ಷಿತ: ಪ್ರಸ್ತುತ WhatsApp ಇನ್-ಅಪ್ಲಿಕೇಶನ್ ಡಯಲರ್ ವೈಶಿಷ್ಟ್ಯವು Android ಬೀಟಾ ಆವೃತ್ತಿ 2.24.9.28 ನಲ್ಲಿ ಮಾತ್ರ ಲಭ್ಯವಿದೆ. ಇದು ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಯಿದೆ. ಅನೇಕ ಬಳಕೆದಾರರು WhatsApp ಮೂಲಕ ಆಡಿಯೋ ಮತ್ತು ವಿಡಿಯೋ ಕರೆಗಳನ್ನು ಮಾಡಲು ಬಯಸುತ್ತಾರೆ. ವಿಶೇಷವಾಗಿ ಅಂತಾರಾಷ್ಟ್ರೀಯ ಕರೆಗಳನ್ನು ಮಾಡಲು WhatsApp ಅನ್ನು ಬಳಸಲಾಗುತ್ತದೆ. ನೆಟ್‌ವರ್ಕ್ ಸಮಸ್ಯೆಯನ್ನು ತಪ್ಪಿಸಲು ಮತ್ತು ಕಡಿಮೆ ವೆಚ್ಚದಲ್ಲಿ ಕರೆ ಮಾಡಲು ಇದನ್ನು ಮಾಡಲಾಗುತ್ತದೆ. ಆದರೆ ಈಗ ಅದು ಕೂಡು ಹೆಚ್ಚು ಸುರಕ್ಷಿತವಾಗಿರಲಿದೆ. WhatsApp ಆಡಿಯೋ ಕರೆಗಳು ಮತ್ತು ವಿಡಿಯೋ ಕರೆಗಳು ಎಂಡ್​ ಟು ಎಂಡ್​ ಎನ್​ಕ್ರಿಪ್ಟೆಡ್​ ಆಗಿರಲಿದೆ. ಹಾಗಾಗಿ ಬಳಕೆದಾರರ ಖಾಸಗಿತನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ವಾಟ್ಸಾಪ್ ಹೇಳಿದೆ.

ಇಂಟರ್​ನೆಟ್​ ಇಲ್ಲದೆ ಫೈಲ್ ಶೇರಿಂಗ್​: ಇಂಟರ್​ನೆಟ್ ಇಲ್ಲದೆಯೂ ಫೋಟೋಗಳು, ವಿಡಿಯೋಗಳು ಮತ್ತು ಫೈಲ್‌ಗಳನ್ನು ಹಂಚಿಕೊಳ್ಳುವ ಸೌಲಭ್ಯವನ್ನು ಸಂಸ್ಥೆ ಜಾರಿಗೆ ತರುತ್ತದೆ. ಒಂದು ವೇಳೆ ಈ ಫ್ಯೂಚರ್​ ಬಂದದ್ದೇ ಆದಲ್ಲಿ ಬಳಕೆದಾರರು ಇನ್ಮುಂದೆ ಇಂಟರ್​ನೆಟ್​​ ಇಲ್ಲದೆನೇ ಡಾಕ್ಯುಮೆಂಟ್‌ಗಳನ್ನು ಕಳುಹಿಸಬಹುದು. ಸಾಮಾನ್ಯವಾಗಿ, ನೆಟ್‌ವರ್ಕ್ ಸೌಲಭ್ಯ ಇಲ್ಲದಿದ್ದರೂ, ಬ್ಲೂಟೂತ್ ಸಹಾಯದಿಂದ ಶೇರ್​ಇಟ್ ಮತ್ತು ನಿಯರ್ ಬೈ ಶೇರ್‌ನಂತಹ ಅಪ್ಲಿಕೇಶನ್‌ಗಳ ಮೂಲಕ ಫೋಟೋಗಳು ಮತ್ತು ವಿಡಿಯೋಗಳನ್ನು ಕಳುಹಿಸಬಹುದು. ವಾಟ್ಸಾಪ್ ಇಂತಹ ಸೇವೆಗಳನ್ನು ಬಳಕೆದಾರರಿಗೆ ಲಭ್ಯವಾಗುವಂತೆ ಮಾಡುತ್ತದೆ. ಇದಕ್ಕಾಗಿ ಯಾವುದೇ ವಿಶೇಷ ಅಪ್ಲಿಕೇಶನ್ ಬಳಸುವ ಅಗತ್ಯವಿಲ್ಲ. ವಾಟ್ಸಾಪ್ ತರಲಿರುವ ಈ ವೈಶಿಷ್ಟ್ಯವು ದಾಖಲೆಗಳನ್ನು ಹೆಚ್ಚು ವೇಗವಾಗಿ ಮತ್ತು ಸುರಕ್ಷಿತವಾಗಿ ಕಳುಹಿಸಲು ಉಪಯುಕ್ತವಾಗಿರಲಿದೆ. ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು, ನೀವು WhatsApp ಸಿಸ್ಟಮ್ ಫೈಲ್ ಮತ್ತು ಫೋಟೋ ಗ್ಯಾಲರಿ ಪ್ರವೇಶದಂತಹ ಅನುಮತಿಗಳನ್ನು ನೀಡಬೇಕಾಗುತ್ತದೆ.

ಫೈಲ್​ ಶೇರ್​ ಮಾಡಲು ಬಯಸುವ ವ್ಯಕ್ತಿಯು ಹತ್ತರದಲ್ಲೇ ಇರಬೇಕು. ಮೊಬೈಲ್ ಬ್ಲೂಟೂತ್ ಸಂಪರ್ಕವನ್ನು ಹೊಂದಲು ಹತ್ತಿರದಲ್ಲಿದ್ದರೆ ಮಾತ್ರ ಆಫ್‌ಲೈನ್ ಹಂಚಿಕೆ ಸಾಧ್ಯ. ಬ್ಲೂಟೂತ್ ಆನ್ ಮಾಡಿ ಮತ್ತು ಹತ್ತಿರದ WhatsApp ಬಳಕೆದಾರರ ಸಾಧನವನ್ನು ಪತ್ತೆ ಮಾಡಿ ಮತ್ತು ಫೈಲ್ ಅನ್ನು ಕಳುಹಿಸಬೇಕಾಗುತ್ತದೆ. ಫೈಲ್​ಗಳನ್ನು ತನ್ನ ಮೊಬೈಲ್​ಗೆ ಪಡೆದುಕೊಳ್ಳಲು ಬಯಸಿದ ವ್ಯಕ್ತಿ ಅನುಮತಿ ನೀಡಿದರೆ ಮಾತ್ರ ಫೈಲ್​ ಶೇರ್​ ಸಾಧ್ಯ. ಒಂದುವೇಳೆ ಬೇಡವಾದಲ್ಲಿ ಅದನ್ನೂ ತಿರಸ್ಕರಿಸಬಹುದಾಗಿದೆ. ಪ್ರಸ್ತುತ ಈ ವೈಶಿಷ್ಟ್ಯವು ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಸ್ಮಾರ್ಟ್​​​ಫೋನ್ ಟಿವಿ ರಿಮೋಟ್​ ಆಗಿ ಬಳಸೋದು ಹೇಗೆ ?: ಇಲ್ಲಿದೆ ಸುಲಭ ಉಪಾಯ! - Smart Phone As A TV Remote

ETV Bharat Logo

Copyright © 2025 Ushodaya Enterprises Pvt. Ltd., All Rights Reserved.