ಮುಂಬೈ : ಎಜ್ಯುಟೆಕ್ ಮತ್ತು ಸ್ಕಿಲಿಂಗ್ ಕಂಪನಿ ಅಪ್ ಗ್ರಾಡ್ ಸೋಮವಾರ ತನ್ನ ವಾರ್ಷಿಕ ಉದ್ಯೋಗ ನೇಮಕಾತಿಗಳಲ್ಲಿ ಸ್ಥಿರವಾದ ಬೆಳವಣಿಗೆ ಘೋಷಿಸಿದ್ದು, 2024ರ ಹಣಕಾಸು ವರ್ಷದಲ್ಲಿ ದಾಖಲೆಯ 55,000 ಉದ್ಯೋಗಗಳನ್ನು ಸೃಷ್ಟಿಸಿದೆ. ಇವುಗಳಲ್ಲಿ ಸುಮಾರು 3,000 ರಾಷ್ಟ್ರೀಯ ಮತ್ತು ಜಾಗತಿಕ ಕಂಪನಿಗಳಲ್ಲಿ ಹೊಸ ಉದ್ಯೋಗಗಳು, ವೃತ್ತಿಜೀವನದ ಬದಲಾವಣೆಗಳು ಮತ್ತು ಬಡ್ತಿಗಳು ಸೇರಿವೆ. ಈ ಉದ್ಯೋಗಿಗಳ ವಾರ್ಷಿಕ ಸಂಬಳ ಸಿಟಿಸಿ ಲೆಕ್ಕದಲ್ಲಿ ಬೇಸ್ಲೈನ್ 4.5 ಲಕ್ಷದಿಂದ ಗರಿಷ್ಠ 1.80 ಕೋಟಿ ರೂ.ಗಳವರೆಗೆ ಇರುತ್ತದೆ ಎಂದು ಕಂಪನಿ ತಿಳಿಸಿದೆ.
ಮಾರ್ಕೆಟಿಂಗ್, ಡೇಟಾ ಮತ್ತು ಟೆಕ್ ಡೊಮೇನ್ಗಳಲ್ಲಿ ಮುಖ್ಯವಾಗಿ ನೇಮಕಾತಿಗಳು ನಡೆದಿವೆ ಮತ್ತು ಇವುಗಳಲ್ಲಿ ಸುಮಾರು ಶೇಕಡಾ 50ರಷ್ಟು ನೇಮಕಾತಿಗಳು ಮುಂಬೈ, ನವದೆಹಲಿ, ಬೆಂಗಳೂರು ಮತ್ತು ಚೆನ್ನೈ ನಗರಗಳಲ್ಲಿ ನಡೆದಿವೆ. ಪುಣೆ, ಕೋಲ್ಕತಾ, ಹೈದರಾಬಾದ್, ನೋಯ್ಡಾ, ಗುರ್ಗಾಂವ್ ಮತ್ತು ಅಹಮದಾಬಾದ್, ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡು ನಂತರದ ಸ್ಥಾನಗಳಲ್ಲಿವೆ.
ಮುಖ್ಯವಾಗಿ ವೃತ್ತಿಜೀವನದ ಬೆಳವಣಿಗೆಗೆ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಅಥವಾ 'ರಿಟರ್ನ್ ಶಿಪ್' ಕಾರ್ಯಕ್ರಮಗಳ ಮೂಲಕ ಮತ್ತೆ ಕೆಲಸಕ್ಕೆ ಸೇರ ಬಯಸುವವರಲ್ಲಿ ಸುಮಾರು ಮೂರನೇ ಎರಡರಷ್ಟು ಮಹಿಳಾ ವೃತ್ತಿಪರರು ಇದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಜೆನ್ ಎಐ, ಡೇಟಾ, ಎಐ / ಎಂಎಲ್ ಮತ್ತು ತಂತ್ರಜ್ಞಾನದಲ್ಲಿ ಅಪ್ಗ್ರಾಡ್ನ ಉಚಿತ ಕೋರ್ಸ್ಗಳಿಗೆ 1.4 ಲಕ್ಷಕ್ಕೂ ಹೆಚ್ಚು ಜನ ದಾಖಲಾಗಿದ್ದಾರೆ.
"ಕಲಿಕಾರ್ಥಿಗಳ ವೃತ್ತಿಜೀವನದ ಅವಕಾಶಗಳನ್ನು ಹೆಚ್ಚಿಸಲು ರಿವರ್ಸ್-ಎಂಜಿನಿಯರಿಂಗ್ ಮಾಡಲಾದ ಕೋರ್ಸ್ಗಳು, ಬೂಟ್ಕ್ಯಾಂಪ್ಗಳು ಮತ್ತು ಪ್ರಮಾಣೀಕರಣಗಳೊಂದಿಗೆ ನಾವು ದೃಢವಾದ ಮತ್ತು ಸಂಯೋಜಿತ ಕಲಿಕಾ ಪಠ್ಯಕ್ರಮವನ್ನು ರಚಿಸಿದ್ದೇವೆ. ಹೊಸಬರು, ಮೊದಲ ಬಾರಿಯ ಉದ್ಯೋಗಾಕಾಂಕ್ಷಿಗಳು, ವೃತ್ತಿಜೀವನದ ಮಧ್ಯದಲ್ಲಿ ಮತ್ತು ಹಿರಿಯ ವೃತ್ತಿಪರರಿಗೆ ಕೌಶಲ್ಯಗಳನ್ನು ಕಲಿಸಲು ವಾರಗಳ ಅವಧಿಯ ವ್ಯಾಪಕ ತರಬೇತಿ, ಕಲಿಕೆ ನೀಡಲಾಗುತ್ತದೆ" ಎಂದು ಅಪ್ ಗ್ರಾಡ್ನ ಸಹ-ಸಂಸ್ಥಾಪಕ ಮತ್ತು ಎಂಡಿ ಮಾಯಾಂಕ್ ಕುಮಾರ್ ಹೇಳಿದರು.
"ನಮ್ಮ ಆಂತರಿಕ ಸಾಮರ್ಥ್ಯಗಳು, ತಂತ್ರಜ್ಞಾನದ ಮೇಲಿನ ಹೂಡಿಕೆಗಳು, ದೃಢವಾದ ವಿಶ್ವವಿದ್ಯಾಲಯದ ರೋಸ್ಟರ್ ಮತ್ತು ಕಾರ್ಯತಂತ್ರದ ವ್ಯವಹಾರ ವಿಲೀನಗಳ ಮೂಲಕ ನಾವು ಉತ್ಕೃಷ್ಟ ಶಿಕ್ಷಣವನ್ನು ಅಭಿವೃದ್ಧಿಪಡಿಸಿದ್ದೇವೆ" ಎಂದು ಅವರು ಹೇಳಿದರು. ಹಣಕಾಸು ವರ್ಷ 2024 ರಲ್ಲಿ, ಅಪ್ ಗ್ರಾಡ್ ನ ಎಂಟರ್ ಪ್ರೈಸ್ ವಿಭಾಗವು ಸುಮಾರು 6,00,000 ಕಾರ್ಪೊರೇಟ್ ವೃತ್ತಿಪರರಿಗೆ ಕೌಶಲ್ಯ ತರಬೇತಿ ನೀಡಿದೆ.
ಇದನ್ನೂ ಓದಿ : ಕೌಶಲ್ಯ ಆಧಾರಿತ ಇಸ್ಪೋರ್ಟ್ ಗೇಮಿಂಗ್ಗೆ ನಿಯಂತ್ರಣ ಹೇರುವ ಅಗತ್ಯವಿಲ್ಲ: ಪ್ರಧಾನಿ ಮೋದಿ - eSport