ETV Bharat / technology

ಭಾರತದ ಮಾರುಕಟ್ಟೆಗೆ ಬರಲಿವೆ ಕೈಗೆಟಕುವ ದರದಲ್ಲಿ 7 ಸೀಟರ್​​ ಕಾರುಗಳು: ಮುಂಬರುವ ತಿಂಗಳಲ್ಲೇ ಈ SUVಗಳು ಲಾಂಚ್​!? - UPCOMING 7 SEATER CARS

author img

By ETV Bharat Karnataka Team

Published : Jun 24, 2024, 7:36 AM IST

ಕುಟುಂಬದೊಂದಿಗೆ ಪ್ರಯಾಣಿಸಲು ಉತ್ತಮ 7 ಆಸನಗಳ ಕಾರು ಖರೀದಿಸಬೇಕು ಎಂಬ ಹಂಬಲದಲ್ಲಿದ್ದೀರಾ?, ಯಾವ ಮಾದರಿ ಕಾರು ಖರೀದಿಸಬೇಕು ಎಂಬ ಗೊಂದಲವಿದೆಯೇ? ಹಾಗಾದರೆ ನಾವು ಆ ಬಗ್ಗೆಯೇ ಹೇಳಲು ಹೊರಟಿದ್ದೇವೆ. ಕೆಲವೇ ತಿಂಗಳುಗಳಲ್ಲಿ ಮಾರುಕಟ್ಟೆಗೆ ಬರಲಿರುವ, ಟಾಪ್ 7 ಸೀಟರ್ ಕಾರುಗಳ ಬಗ್ಗೆ ಈ ವರದಿಯಲ್ಲಿ ತಿಳಿಯೋಣ.

ಭಾರತಕ್ಕೆ ಬರಲಿವೆ ಕೈಗೆಟಕುವ ದರದಲ್ಲಿ 7 ಸೀಟರ್​​ ಕಾರುಗಳು
Upcoming 7 Seater Cars In India (Upcoming 7 Seater Cars In India (GettyImages))

ಇತ್ತೀಚಿನ ದಿನಗಳಲ್ಲಿ ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಲು ಅಥವಾ ದೂರದ ಸ್ಥಳಗಳಿಗೆ ಪ್ರಯಾಣಿಸಲು ಸ್ವಂತದ್ದೊಂದು ಕಾರು ಇದ್ದರೆ ಬೆಸ್ಟ್​ ಅಂತಾ ಯೋಚಿಸವವರೇ ಹೆಚ್ಚು. ಮತ್ತು ಅದು ಇಂದಿನ ಅಗತ್ಯ ಕೂಡಾ ಹೌದು. ಅದರಲ್ಲೂ 7 ಆಸನಗಳ ಕಾರ್ ಆಗಿದ್ದರೆ ಇನ್ನೂ ಬೆಸ್ಟ್​ ಎಂಬ ಯೋಚನೆ ಹಲವರದ್ದು. ಏಕೆಂದರೆ ಕುಟುಂಬ ಸಮೇತ ಆರಾಮಾಗಿ ಸಂಚರಿಸಬಹುದು ಎಂಬ ಕಾರಣಕ್ಕೆ 7 ಸೀಟರ್​ ಕಾರು ಇದ್ದರೆ ಬೆಸ್ಟ್​ ಅನ್ನೋದು ಬಹುತೇಕರ ಅನಿಸಿಕೆ. ಹಾಗಿದ್ದರೆ, 7 ಸೀಟರ್ ಸಾಮರ್ಥ್ಯದ ಕೆಲವು ಕಾರುಗಳು ಕೆಲವೇ ತಿಂಗಳುಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ. ಅದರಲ್ಲಿ ಟಾಪ್-5 ಕಾರುಗಳ ಬಗ್ಗೆ ತಿಳಿದುಕೊಳ್ಳೋಣ.

1. MG Gloster Facelift - ಎಂಜಿ ಗ್ಲೋಸ್ಟರ್ ಫೇಸ್​​​ಲಿಫ್ಟ್: ಇನ್ನು ಕೆಲವೇ ತಿಂಗಳುಗಳಲ್ಲಿ 7 ಸೀಟುಗಳ ಸಾಮರ್ಥ್ಯದ ಎಂಜಿ ಗ್ಲೋಸ್ಟರ್ ಫೇಸ್​​​​ಲಿಫ್ಟ್ ಮಾದರಿಯ ಕಾರು ಮಾರುಕಟ್ಟೆಗೆ ಬರಲಿದೆ. ಕಂಪನಿಯು ಈ ಕಾರನ್ನು ಬಿಡುಗಡೆ ಮಾಡಲು ಭಾರಿ ತಯಾರಿ ಮಾಡಿಕೊಂಡಿದೆ. ಎಂಜಿನ್ ಹೊರತುಪಡಿಸಿ, ಎಂಜಿ ಗ್ಲೋಸ್ಟರ್ ಫೇಸ್‌ಲಿಫ್ಟ್‌ನಲ್ಲಿ ಇನ್ನೂ ಹಲವು ಬದಲಾವಣೆಗಳಿರಬಹುದು ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ, ಈ ಕಾರು ಮಾರುಕಟ್ಟೆಯಲ್ಲಿ ಅಗ್ರ SUV ಆಗಿರುವ ಟೊಯೊಟಾ ಫಾರ್ಚುನರ್‌ಗೆ ಕಠಿಣ ಸ್ಪರ್ಧೆ ನೀಡುವ ನಿರೀಕ್ಷೆಯಿದೆ. ಎಂಜಿ ಗ್ಲೋಸ್ಟರ್ ಫೇಸ್‌ಲಿಫ್ಟ್ ಮಾದರಿಯ ಒಳ ಮತ್ತು ಹೊರಭಾಗವನ್ನು ಅಪ್‌ಗ್ರೇಡ್ ಮಾಡಬಹುದು ಎಂದು ತೋರುತ್ತದೆ.

2. New Kia Carnival -ಹೊಸ ಕಿಯಾ ಕಾರ್ನಿವಲ್: ಇನ್ನು ಕೆಲವೇ ತಿಂಗಳುಗಳಲ್ಲಿ ನಾಲ್ಕನೇ ತಲೆಮಾರಿನ ಕಿಯಾ ಕಾರ್ನಿವಲ್ ಮಾದರಿಯ ಕಾರು ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ. ಇದು ಹಿಂದಿನ ಮಾದರಿಗಿಂತ ಭಿನ್ನವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೊಸ ಕಿಯಾ ಕಾರ್ನಿವಲ್ ಮಾದರಿಯ ಕಾರಿನಲ್ಲಿ ಕ್ಯಾಬಿನ್ ಅನ್ನು ಉನ್ನತ ಗುಣಮಟ್ಟದೊಂದಿಗೆ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಮಾದರಿಯ ಕಾರು 2.2 ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆಯಂತೆ. ಈ ಮಾದರಿಯ ಕಾರು 7 ಸೀಟರ್ ಸಾಮರ್ಥ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬ ಸಮಾಚಾರ ಸಿಕ್ಕಿದೆ.

3. ನಿಸ್ಸಾನ್ ಎಕ್ಸ್-ಟ್ರಯಲ್ - Nissan X-Trail: ನಿಸ್ಸಾನ್ ಎಕ್ಸ್-ಟ್ರಯಲ್ ಮಾದರಿಯ ಕಾರು ಎರಡು ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆಯಂತೆ. ಈ ಕಾರು 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ನಿರೀಕ್ಷೆಯಿದೆ. ಈ ಮಾದರಿಯ ಕಾರು ಈಗ ಸೀಮಿತ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಈ ಕಾರು 7 ಸೀಟುಗಳ ಸಾಮರ್ಥ್ಯದೊಂದಿಗೆ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ಮೂಲಗಳಿಂದ ತಿಳಿದು ಬಂದಿದೆ.

4. Kia EV9 : ಕಿಯಾ ಇವಿ-9 ಮಾದರಿ ಕಾರು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಪರಿಚಯಿಸಬಹುದು ಎಂಬ ಸುದ್ದಿ ಹೊರ ಬಿದ್ದಿದೆ. ಈ 7-ಸೀಟರ್ ಕಾರು 12.3 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ, 12.3 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಪನೋರಮಿಕ್ ಸನ್ ರೂಫ್, ವೈರ್‌ಲೆಸ್ ಚಾರ್ಜರ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಬರಲಿದೆ ಎಂದು ವರದಿಯಾಗಿದೆ. ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 541 ಕಿಲೋಮೀಟರ್ ಪ್ರಯಾಣಿಸಬಹುದು ಎಂದು ಹೇಳಲಾಗುತ್ತಿದೆ.

5. ಜೀಪ್ ಮೆರಿಡಿಯನ್ ಫೇಸ್​​​ಲಿಫ್ಟ್ -Jeep Meridian Facelift : ಪ್ರಸಿದ್ಧ ಕಾರು ತಯಾರಿಕಾ ಕಂಪನಿ ಜೀಪ್ ತನ್ನ ಮೆರಿಡಿಯನ್ ಕಾರಿನ ಫೇಸ್ ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದು ಬಂದಿದೆ. ಇದು 7 ಆಸನಗಳ ಸಾಮರ್ಥ್ಯದೊಂದಿಗೆ ಈ ವರ್ಷದ ಕೊನೆಯಲ್ಲಿ ಮಾರುಕಟ್ಟೆಗೆ ಬರಲಿದೆ. ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು ಹೊಂದಿದೆ. ಈ ಮಾದರಿಯು ಹೊಸ ಗ್ರಿಲ್, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಮಿಶ್ರಲೋಹದ ಚಕ್ರಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

ಇವುಗಳನ್ನೂ ಒಮ್ಮೆ ಓದಿ: ಸುರಕ್ಷತೆಯಲ್ಲಿ ಟಾಟಾ ಕಾರುಗಳಿಗೆ ಟಾಪ್​ 5 ಸ್ಟಾರ್​ ರೇಟಿಂಗ್​: ಆ ಕಾರುಗಳಾವವು? ಹೇಗಿದೆ ಇವುಗಳ ಸಾಮರ್ಥ್ಯ? - 5 Star Rating Tata Cars

ಎಐ ಸಾಮರ್ಥ್ಯದ ಮೈಕ್ರೊಸಾಫ್ಟ್​ Copilot+ ಪಿಸಿ ಬಿಡುಗಡೆ; ಬೆಲೆ ಎಷ್ಟು ಗೊತ್ತಾ? - Copilot AI PC Launched

ಗುರಿಯ ಬೆನ್ನಟ್ಟಿ ಹೊಡೆಯುವ ನಾಗಾಸ್ತ್ರ-1 ಡ್ರೋನ್ ತಯಾರಿಸಿದ ಭಾರತ: ಏನಿದರ ವಿಶೇಷತೆ? - India Develops Nagastra Drone

ETV Bharat Logo

Copyright © 2024 Ushodaya Enterprises Pvt. Ltd., All Rights Reserved.