Information About Lightning: ದೇಶದಲ್ಲಿ ಮುಂಗಾರು ಕೊನೆಯ ಹಂತಕ್ಕೆ ಪ್ರವೇಶಿಸುತ್ತಿದ್ದರೂ, ಹಲವು ರಾಜ್ಯಗಳಲ್ಲಿ ಮಳೆಯ ಎಚ್ಚರಿಕೆ ಇನ್ನೂ ಮುಂದುವರೆದಿದೆ. ಮಳೆಗಾಲದಲ್ಲಿ ಸಿಡಿಲು ಸಾಮಾನ್ಯ. ಇಲ್ಲಿ ನೈಸರ್ಗಿಕ ಮಿಂಚನ್ನು ನೋಡುವುದು ಒಂದೆಡೆ ಸಂತೋಷವೆಸನಿಸಿದರೆ, ಇದು ಅತ್ಯಂತ ಅಪಾಯಕಾರಿಯೂ ಹೌದು. ಮಿಂಚು ಮನುಷ್ಯರಿಗೆ ಮಾರಣಾಂತಿಕವಾಗಿದೆ. ಮಳೆ ಬಂದಾಗ ಮಿಂಚು ಹೇಗೆ ಹೊಳೆಯುತ್ತದೆ, ಅದು ಹೇಗೆ ನೆಲಕ್ಕೆ ಅಪ್ಪಳಿಸುತ್ತದೆ ಎಂಬುದರ ಬಗ್ಗೆ ನೀವು ಯೋಚಿಸಿದ್ದೀರಾ.. ಇಲ್ಲಿ ನಾವು ಮಿಂಚಿನ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಈ ಪ್ರಕ್ರಿಯೆಯು ಹೇಗೆ ನಡೆಯುತ್ತದೆ ಅನ್ನೋದನ್ನು ತಿಳಿಯೋಣ..
ಮಿಂಚು ಎಂದರೇನು: ಮಿಂಚುವುದು ಎಂದರೆ ವೇಗವಾಗಿ ಮತ್ತು ಅಷ್ಟೇ ಬಲವಾಗಿ ವಿದ್ಯುತ್ ಶಕ್ತಿಯು ಪರಿಸರದಲ್ಲಿ ಕಾಣಿಸಿಕೊಳ್ಳುವ ಒಂದು ಪ್ರಕ್ರಿಯೆ. ಅದರಲ್ಲಿ ಕೆಲವು ನೇರವಾಗಿ ಭೂಮಿಗೆ ಬಂದು ಅಪ್ಪಳಿಸುತ್ತವೆ. ಈ ಮಿಂಚು ಬೃಹತ್ ಆಕಾರದ ಮೋಡದಿಂದ ಉಂಟಾಗುತ್ತದೆ. ಮೋಡದ ತುದಿಯ ಉಷ್ಣಾಂಶ ಮೈನಸ್ 35 ರಿಂದ ಮೈನಸ್ 45 ಡಿಗ್ರಿ ಸೆಲ್ಸಿಯಸ್ನಷ್ಟು ಇರುತ್ತದೆ.
ಭೂಮಿಗೆ ಮಿಂಚು ಅಪ್ಪಳಿಸುವುದೇಕೆ: ಮೋಡದಲ್ಲಿ ನೀರಿನ ಅಂಶ ಮೇಲೆ ಸಾಗಿದಂತೆ ಮೋಡದ ತುದಿಯಲ್ಲಿ ತಾಪಮಾನ ಕಡಿಮೆ ಆಗುತ್ತಾ ಸಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಉಷ್ಣಾಂಶ ಉತ್ಪಾದನೆ ಆಗಿ ನೀರಿನ ಕಣಗಳನ್ನು ಮತ್ತೆ ಮೇಲಕ್ಕೆ ಸಾಗಿಸುವಂತೆ ಮಾಡುತ್ತದೆ. ಹೀಗೆ ಉಷ್ಣಾಂಶ ಸೊನ್ನೆ ಡಿಗ್ರಿಗಿಂತಲೂ ಕಡಿಮೆ ಆಗಿ ಮೈನಸ್ನತ್ತ ಹೋಗುತ್ತಿದ್ದಂತೆ ನೀರಿನ ಕಣಗಳು ಸಹ ಸಣ್ಣ ಮಂಜುಗಡ್ಡೆಯಾಗಿ ಬದಲಾಗುತ್ತಾ ಹೋಗುತ್ತದೆ. ಹೀಗೆ ತಮ್ಮ ಗಾತ್ರ ಬಲಿಷ್ಠವಾಗುತ್ತಿರುವಂತೆ ಮೇಲಕ್ಕೆ ಸಾಗುತ್ತಾ ಬಳಿಕ ಭೂಮಿಗೆ ಬೀಳಲು ತೊಡಗುತ್ತದೆ.
ಚೈನ್ ರಿಯಾಕ್ಷನ್ ಸಂಭವಿಸುವುದು ಹೇಗೆ?: ಸಣ್ಣ ಮಂಜುಗಡ್ಡೆ ಕಣಗಳು ಮೇಲಕ್ಕೆ ಹೋಗುತ್ತಾ ದೊಡ್ಡ ಮಂಜುಗಡ್ಡೆ ಕಣಗಳು ಕೆಳಗೆ ಬೀಳಲು ಪ್ರಾರಂಭಿಸುತ್ತವೆ. ಇದರಿಂದಾಗಿ ಒಂದಕ್ಕೊಂದು ಸಂಘರ್ಷ ಏರ್ಪಡುತ್ತದೆ. ಆ ಮೂಲಕ ಎಲೆಕ್ಟ್ರಾನ್ಗಳ ಬಿಡುಗಡೆ ಆಗುತ್ತದೆ. ಹೀಗೆ ವಿದ್ಯುತ್ ಶಕ್ತಿಯ ಸ್ಪಾರ್ಕ್ ಕಾಣಿಸಿಕೊಳ್ಳುತ್ತದೆ. ಹೀಗೆ ಸಂಚಾರ ಮಾಡುವ ಎಲೆಕ್ಟ್ರಾನ್ಗಳ ಕಾರಣದಿಂದ ಹೆಚ್ಚು ಘರ್ಷಣೆ ಉಂಟಾಗಿ ಚೈನ್ ರಿಯಾಕ್ಷನ್ ಸಂಭವಿಸುತ್ತದೆ.
ಚೈನ್ ರಿಯಾಕ್ಷನ್ ಕಾರಣದಿಂದ ಮೋಡದ ಮೇಲಿನ ಪದರ ಪಾಸಿಟಿವ್ ಚಾರ್ಜ್ ಹೊಂದುತ್ತದೆ. ಮಧ್ಯ ಪದರು ನೆಗೆಟಿವ್ ಚಾರ್ಜ್ ಹೊಂದುತ್ತದೆ. ಈ ಎರಡು ಪದರಗಳ ವಿದ್ಯುತ್ ಶಕ್ತಿಯ ವ್ಯತ್ಯಾಸ ದೊಡ್ಡದಾಗಿರುತ್ತದೆ. ಸಣ್ಣ ಅವಧಿಯಲ್ಲಿ ಬಹಳ ದೊಡ್ಡ ಪ್ರಮಾಣದ ಅಂದರೆ ಸುಮಾರು 100,000 ದಿಂದ ಮಿಲಿಯನ್ನಷ್ಟು ಆಂಪಿರ್ಸ್ ಕರೆಂಟ್ ಈ ಪದರಗಳ ಮಧ್ಯೆ ಸಂಚರಿಸುತ್ತವೆ.
ಗುಡುಗು ಕೇಳಿಸುವುದೇಕೆ?: ದೊಡ್ಡ ಪ್ರಮಾಣದಲ್ಲಿ ತಾಪಮಾನ ಉತ್ಪಾದನೆ ಆಗುವುದರಿಂದ ಮೋಡದ ಎರಡೂ ಪದರಗಳ ನಡುವಿನ ಗಾಳಿಯನ್ನೂ ಬಿಸಿ ಮಾಡುತ್ತದೆ. ಮಿಂಚು ಬರುವ ಸಂದರ್ಭ ಆ ಪದರದಲ್ಲಿ ಕೆಂಪು ಬಣ್ಣ ಉಂಟಾಗುತ್ತದೆ. ಹೀಗೆ ಅತಿ ಬಿಸಿ ಹೊಂದಿರುವ ಗಾಳಿಯ ಪದರವು ವಿಶಾಲವಾಗುತ್ತಾ ಶಾಕ್ ತರಂಗಗಳನ್ನು ಕೊಡುತ್ತದೆ. ಹೀಗಾಗಿ ನಮಗೆ ಗುಡುಗು ಕೇಳಿಸುತ್ತದೆ.
ಮಿಂಚಿನಿಂದ ರಕ್ಷಿಸಿಕೊಳ್ಳುವುದು ಹೇಗೆ: ಮಿಂಚು ತುಂಬಾ ಸುಂದರವಾಗಿ ಕಂಡರೂ, ಅದರ ಅಪಾಯಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯ. ಇಲ್ಲಿ ನಾವು ನಿಮಗೆ ಕೆಲವು ಸುರಕ್ಷತಾ ಕ್ರಮಗಳನ್ನು ತಿಳಿಸುತ್ತೇವೆ. ಅದನ್ನು ಅಳವಡಿಸಿಕೊಳ್ಳುವ ಮೂಲಕ ನೀವು ನೈಸರ್ಗಿಕ ಮಿಂಚಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.
ಹವಾಮಾನದ ಮೇಲೆ ನಿಗಾ ಇರಿಸಿ: ದೇಶದ ಜತೆಗೆ ರಾಜ್ಯ ಸರ್ಕಾರದ ಹವಾಮಾನ ಇಲಾಖೆಯೂ ಮಳೆಯ ಸಂದರ್ಭದಲ್ಲಿ ನಾಗರಿಕರಿಗೆ ಎಚ್ಚರಿಕೆಯನ್ನು ನೀಡುತ್ತದೆ. ಇದಲ್ಲದೆ, ನೀವು ಹವಾಮಾನ ಸಂಬಂಧಿತ ಸುದ್ದಿಗಳನ್ನು ಸಹ ನೋಡಬೇಕು. ಹವಾಮಾನ ಇಲಾಖೆ ನೀಡುವ ಮುನ್ನೋಟ ಮತ್ತು ಎಚ್ಚರಿಕೆಗಳ ಮೇಲೆ ಕಡ್ಡಾಯವಾಗಿ ಗಮನ ಹರಿಸಬೇಕು.
ಸುರಕ್ಷಿತ ಸ್ಥಳ ಬಹಳ ಮುಖ್ಯ: ಹವಾಮಾನ ಇಲಾಖೆಯಿಂದ ಎಚ್ಚರಿಕೆ ಸ್ವೀಕರಿಸಿದ ನಂತರವೂ ನೀವು ಮಳೆಗಾಲದಲ್ಲಿ ಮನೆಯಿಂದ ಹೊರಬರಬೇಕಾದರೆ ಗುಡುಗು, ಸಿಡಿಲು, ಮಿಂಚು ಕಾಣಿಸಿಕೊಂಡಾಗ ಗಾಬರಿ ಪಡುವ ಅಗತ್ಯವಿಲ್ಲ. ಈ ಸಮಯದಲ್ಲಿ ನೀವು ತಕ್ಷಣ ಸುರಕ್ಷಿತ ಸ್ಥಳವನ್ನು ಕಂಡುಕೊಳ್ಳಬೇಕು. ಮಳೆಗಾಲದಲ್ಲಿ ಮರಗಳ ಕೆಳಗೆ ನಿಲ್ಲಬಾರದು ಎಂಬುದು ಗಮನಾರ್ಹ..
ವಿದ್ಯುತ್ ವಸ್ತುಗಳಿಂದ ದೂರ ಇರುವುದು ಸೂಕ್ತ: ನೀವು ಸುರಕ್ಷಿತ ಸ್ಥಳವನ್ನು ಹುಡುಕುತ್ತಿರುವಾಗ, ಲೋಹದ ಬೇಲಿಗಳು ಮತ್ತು ವಿದ್ಯುತ್ ಕಂಬಗಳಂತಹ ಕೆಲವು ವಿದ್ಯುತ್ ವಾಹಕ ವಸ್ತುಗಳಿಂದ ದೂರ ಸರಿಯಬೇಕು. ನಿಮ್ಮ ಬಳಿ ಮೊಬೈಲ್ ಫೋನ್ ಇದ್ದರೆ, ಕೂಡಲೇ ಅದನ್ನು ಸ್ವಿಚ್ ಆಫ್ ಮಾಡಬೇಕು. ಏಕೆಂದರೆ ಮೊಬೈಲ್ ಫೋನ್‌ಗಳಿಂದ ಹೊರಹೊಮ್ಮುವ ವಿದ್ಯುತ್ ತರಂಗಗಳು ಮಿಂಚನ್ನು ಆಕರ್ಷಿಸುತ್ತವೆ. ಹೀಗಾಗಿ ನೀವು ಎಲೆಕ್ಟ್ರಾನಿಕ್ ವಸ್ತುಗಳಿಂದ ದೂರ ಇರುವುದು ಒಳ್ಳೆಯದು.
ಓದಿ: ಈ ಮಳೆಗಾಲವನ್ನು ಇನ್ನಷ್ಟು ಎಂಜಾಯ್ ಮಾಡಲು ಈ ಗೆಜೆಟ್ಗಳನ್ನು ಬಳಸಿ ನೋಡಿ! - RAINY SEASON GADGETS