ETV Bharat / technology

ಸರ್ಜನ್​ಗಳಿಗೆ ರೋಬೊಟ್​ ತಂತ್ರಜ್ಞಾನದ ತರಬೇತಿ ಅಗತ್ಯ: ತಜ್ಞರ ಅಭಿಪ್ರಾಯ - ROBOTICS SURGEONS

author img

By ETV Bharat Karnataka Team

Published : Apr 21, 2024, 5:57 PM IST

ಇಂದಿನ ತಂತ್ರಜ್ಞಾನ ಯುಗದಲ್ಲಿ ಸರ್ಜನ್​ಗಳಿಗೆ ರೋಬೊಟಿಕ್ ತಂತ್ರಜ್ಞಾನದ ತರಬೇತಿ ನೀಡುವುದು ಅಗತ್ಯವಾಗಿದೆ ಎಂದು ತಜ್ಞರು ಹೇಳಿದ್ದಾರೆ.

World needs better robotics surgeons to improve patient outcomes: Experts

ನವದೆಹಲಿ: ಭಾರತ ಸೇರಿದಂತೆ ಜಾಗತಿಕವಾಗಿ ಇತರ ದೇಶಗಳಲ್ಲಿ ರೋಬೋಟ್ ತಂತ್ರಜ್ಞಾನದ ನೆರವಿನಿಂದ ನಡೆಯುತ್ತಿರುವ ಶಸ್ತ್ರಚಿಕಿತ್ಸೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿವೆ. ಹೀಗಾಗಿ ರೋಬೊಟಿಕ್ ಚಿಕಿತ್ಸಾ ವಿಧಾನಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಸರ್ಜನ್​ಗಳಿಗೆ ಅತ್ಯಾಧುನಿಕ ರೋಬೊಟಿಕ್ ತಂತ್ರಜ್ಞಾನದ ಬಗ್ಗೆ ಸೂಕ್ತ ತರಬೇತಿ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ತಜ್ಞರು ರವಿವಾರ ಹೇಳಿದ್ದಾರೆ.

"ಹೊಸ ರೊಬೊಟಿಕ್ ತಂತ್ರಜ್ಞಾನವನ್ನು ಹೇಗೆ ಬಳಸಲಾಗುತ್ತಿದೆ ಎಂಬುದರ ಬಗ್ಗೆ ನಾವು ಗಮನ ಹರಿಸಬೇಕಿದೆ. ರೋಗಿಯ ಚಿಕಿತ್ಸಾ ಫಲಿತಾಂಶಗಳನ್ನು ಸುಧಾರಿಸಲು ಶಸ್ತ್ರಚಿಕಿತ್ಸೆಯ ಮೊದಲು, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮತ್ತು ನಂತರದ ಡೇಟಾ ಮುನ್ಸೂಚನೆ ಮಾದರಿಗಳನ್ನು ಸಂಗ್ರಹಿಸಬೇಕು" ಎಂದು ಯುಎಸ್ ಮೂಲದ ವಟ್ಟಿಕುಟಿ ಫೌಂಡೇಶನ್​ನ ಸಿಇಒ ಡಾ. ಮಹೇಂದ್ರ ಭಂಡಾರಿ ಹೇಳಿದರು.

"ಇತ್ತೀಚಿನ ತಾಂತ್ರಿಕ ಪ್ರಗತಿಯನ್ನು ಬಳಸಿಕೊಂಡು ತಮ್ಮ ಅತ್ಯಂತ ಉತ್ಕೃಷ್ಟ ಶಸ್ತ್ರಚಿಕಿತ್ಸಾ ವಿಧಾನವನ್ನು ಪ್ರದರ್ಶಿಸುವ ಉತ್ತಮ ಗುಣಮಟ್ಟದ, ಡಿಜಿಟಲ್ ವರದಿಗಳನ್ನು ತಯಾರಿಸಲು ನಾವು ನುರಿತ ಶಸ್ತ್ರಚಿಕಿತ್ಸಕರ ತಂಡಗಳನ್ನು ಪ್ರೋತ್ಸಾಹಿಸುತ್ತೇವೆ" ಎಂದು ಭಂಡಾರಿ ಹೇಳಿದರು.

ವಟ್ಟಿಕುಟಿ ಫೌಂಡೇಶನ್ ತನ್ನ 'ರೊಬೊಟಿಕ್ ಸರ್ಜರಿಯಲ್ಲಿ ಕೆಎಸ್ ಇಂಟರ್ ನ್ಯಾಷನಲ್ ಇನ್ನೋವೇಶನ್ ಅವಾರ್ಡ್ಸ್' ನ 2024 (KS International Innovation Awards in Robotic Surgery) ಸ್ಪರ್ಧೆಯನ್ನು ಪ್ರಕಟಿಸಿದೆ.

ಈ ಪ್ರಶಸ್ತಿಗಾಗಿ ರೊಬೊಟಿಕ್ ಕಾರ್ಯವಿಧಾನ ನಾವೀನ್ಯತೆ ಮತ್ತು ತಾಂತ್ರಿಕ ನಾವೀನ್ಯತೆ ಹೀಗೆ ಬಹು-ಶಿಸ್ತಿನ ತಂತ್ರಜ್ಞಾನ ವ್ಯಾಪ್ತಿಯನ್ನು ಎರಡು ವಿಭಿನ್ನ ಟ್ರ್ಯಾಕ್​ಗಳಲ್ಲಿ ವಿಂಗಡಿಸಲಾಗಿದೆ. ಹೃದಯ ಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ, ಸ್ತ್ರೀರೋಗ, ತಲೆ ಮತ್ತು ಕುತ್ತಿಗೆ, ಮೈಕ್ರೋ ಸರ್ಜರಿ, ಅಂಗಾಂಗ ಕಸಿ, ಮೂಳೆ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಪೀಡಿಯಾಟ್ರಿಕ್ಸ್, ಮೂತ್ರಶಾಸ್ತ್ರ ಮತ್ತು ಇತರ ಕ್ಷೇತ್ರಗಳಿಂದ ರೊಬೊಟಿಕ್ ಕಾರ್ಯವಿಧಾನದ ನಾವೀನ್ಯತೆ ಮಾಹಿತಿಗಳನ್ನು ಸಂಗ್ರಹಿಸಬಹುದು ಎಂದು ಫೌಂಡೇಶನ್ ಅಭಿಪ್ರಾಯಪಟ್ಟಿದೆ.

ಕೃತಕ ಬುದ್ಧಿಮತ್ತೆ, ಇಮೇಜಿಂಗ್ ವಿಧಾನಗಳು, ರೊಬೊಟಿಕ್ ವ್ಯವಸ್ಥೆಗಳು, ಟೆಲಿ ಸರ್ಜರಿ, ತರಬೇತಿ ವಿಧಾನಗಳು, ವರ್ಚುವಲ್ ರಿಯಾಲಿಟಿ ಮತ್ತು ಇತರ ಕ್ಷೇತ್ರಗಳಲ್ಲಿ ಹೊಸ ತಾಂತ್ರಿಕ ಆವಿಷ್ಕಾರಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂದು ವಟ್ಟಿಕುಟಿ ಫೌಂಡೇಶನ್ ಹೇಳಿದೆ.

2015 ರಲ್ಲಿ ಪ್ರಾರಂಭವಾದ ಈ ಸ್ಪರ್ಧೆಯು ರೊಬೊಟಿಕ್ ಶಸ್ತ್ರಚಿಕಿತ್ಸಕರು, ವೈದ್ಯಕೀಯ ಕಾಲೇಜು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.2023 ರ ಕೆಎಸ್ ಇನ್ನೋವೇಶನ್ ಅವಾಡ್ಸ್​ನಲ್ಲಿ 14 ದೇಶಗಳ 429 ಶಸ್ತ್ರಚಿಕಿತ್ಸಕರಿಂದ 10 ವಿವಿಧ ಕ್ಷೇತ್ರಗಳಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು.

ಇದನ್ನೂ ಓದಿ : ಎಐ ಚಾಲಿತ ಹೊಸ ಡೆಲ್ ಲ್ಯಾಪ್​ಟಾಪ್​, ವರ್ಕ್​ಸ್ಟೇಷನ್ ಬಿಡುಗಡೆ - Dell PC

ETV Bharat Logo

Copyright © 2024 Ushodaya Enterprises Pvt. Ltd., All Rights Reserved.