ETV Bharat / technology

ಸೂರ್ಯನ ಬೆಳಕು ಭೂಮಿಗೆ ತಲುಪುವ ಸಮಯ 8 ನಿಮಿಷವಲ್ಲ: ಹಾಗಾದರೆ ಮತ್ತೆಷ್ಟು? - Sun To Earth Light Time

author img

By ETV Bharat Karnataka Team

Published : Apr 17, 2024, 7:16 AM IST

Updated : Apr 17, 2024, 8:08 AM IST

ಸೂರ್ಯನಿಂದ ಬೆಳಕು ಭೂಮಿ ತಲುಪಲು 8 ನಿಮಿಷ ಮತ್ತು 20 ಸೆಕೆಂಡುಗಳು ತೆಗೆದುಕೊಳ್ಳುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಆದರೆ, ಇದು ನಿಖರವಾದ ಸಮಯವಲ್ಲ. ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಮಾಹಿತಿ ತಿಳಿದುಕೊಳ್ಳಬೇಕಾ ಹಾಗಾದರೆ ಈ ಸ್ಟೋರಿ ನೋಡಿ

sun-to-earth-light-time-distance-to-reach-light-from-sun-to-earth-how-long-does-it-take-for-light-from-the-sun-to-reach-earth
ಇದು ನಿಮಗೆ ಗೊತ್ತಾ ಸೂರ್ಯನ ಬೆಳಕು ಭೂಮಿಯನ್ನು ತಲುಪುವ ಸಮಯ 8 ನಿಮಿಷವಲ್ಲ: ಹಾಗಾದರೆ ಮತ್ತೆಷ್ಟು?

ಹೈದರಾಬಾದ್​: ಸೂರ್ಯನಿಂದ ಬೆಳಕು ಭೂಮಿಯನ್ನು ತಲುಪಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಎಂಬ ಪ್ರಶ್ನೆ ಕೇಳಿದರೆ ಖಂಡಿತ 8 ನಿಮಿಷ 20 ಸೆಕೆಂಡ್ ಎಂದು ಶಾಲೆಗೆ ಹೋಗುವ ಮಕ್ಕಳು, ಹಾಗೂ ಈ ಬಗ್ಗೆ ತಿಳಿದುಕೊಂಡವರು ತಟ್ಟನೆ ಹೇಳಿ ಬಿಡುತ್ತಾರೆ. ಆದರೆ ಸೂರ್ಯನ ಬೆಳಕು ಭೂಮಿಯನ್ನು ತಲುಪಲು ತೆಗೆದುಕೊಳ್ಳುವ ಸಮಯ ಇಷ್ಟಲ್ಲವಂತೆ.

ಸೂರ್ಯ ಮತ್ತು ಭೂಮಿಯ ನಡುವಿನ ಅಂತರ ಸುಮಾರು 150 ಮಿಲಿಯನ್ ಕಿಲೋಮೀಟರ್. ಈ ಲೆಕ್ಕಾಚಾರದ ಪ್ರಕಾರ ಸೂರ್ಯನ ಬೆಳಕು ಭೂಮಿಯನ್ನು ತಲುಪಲು 500 ಸೆಕೆಂಡುಗಳು ಅಥವಾ ಎಂಟು ನಿಮಿಷ 20 ಸೆಕೆಂಡುಗಳು ಕಾಲ ತೆಗೆದುಕೊಳ್ಳುತ್ತದೆ. ಆದರೆ ಸೂರ್ಯನ ಸುತ್ತ ಭೂಮಿಯ ಕಕ್ಷೆಯು ಪರಿಪೂರ್ಣ ವೃತ್ತವಲ್ಲ. ಇದು ಸ್ವಲ್ಪ ದೀರ್ಘವೃತ್ತವಾಗಿದೆ ಎಂಬ ವಿಚಾರ ಇದೀಗ ಹೊರ ಬಿದ್ದಿದೆ. ಆದ್ದರಿಂದ ಭೂಮಿ ಮತ್ತು ಸೂರ್ಯನ ನಡುವಿನ ನಿಜವಾದ ಅಂತರವು ಸುಮಾರು 147 - 152 ಮಿಲಿಯನ್ ಕಿಲೋಮೀಟರ್ ಆಗಿದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಸೂರ್ಯನಿಂದ ಭೂಮಿಗೆ ಬೆಳಕಿನ ನಿಜವಾದ ಪ್ರಯಾಣದ ಸಮಯ 490 ರಿಂದ 507 ಸೆಕೆಂಡುಗಳು ಅಥವಾ 8 ನಿಮಿಷ 10 ಸೆಕೆಂಡುಗಳಿಂದ 8 ನಿಮಿಷ 27 ಸೆಕೆಂಡುಗಳು ಆಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.

ಸೂರ್ಯನ ಮೇಲ್ಮೈಯಲ್ಲಿ ಬೆಳಕಿನ ಪೋಟಾನ್​ಗಳು ರೂಪುಗೊಳ್ಳುವುದಿಲ್ಲ. ಅವರು ಭೂಮಿಗೆ ತಮ್ಮ ಪ್ರಯಾಣ ಪ್ರಾರಂಭಿಸುವ ಮೊದಲು ಸೂರ್ಯನ ಮೇಲ್ಮೈ ತಲುಪಲು ಸಾವಿರಾರು ವರ್ಷಗಳನ್ನು ತೆಗೆದುಕೊಳ್ಳಬಹುದು ಎನ್ನಲಾಗಿದೆ.

ದಾಖಲೆ ಸೃಷ್ಟಿಸಿದ ದಕ್ಷಿಣ ಕೊರಿಯಾದ ’ಸನ್​’: ದಕ್ಷಿಣ ಕೊರಿಯಾದ ಕೃತಕ ಸೂರ್ಯ ಕೆಲವು ವರ್ಷಗಳ ಹಿಂದೆ ಹೊಸ ವಿಶ್ವದಾಖಲೆ ನಿರ್ಮಾಣ ಮಾಡಿದ್ದು ಖಗೋಳ ಆಸಕ್ತರಿಗೆ ಗೊತ್ತೇ ಇದೆ. ಈ ಸನ್​ 10 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 20 ಸೆಕೆಂಡುಗಳ ಕಾಲ ಬೆಳಗಿದೆ. ಕೊರಿಯನ್ ಇನ್‌ಸ್ಟಿಟ್ಯೂಟ್ ಆಫ್ ಫ್ಯೂಷನ್ ಎನರ್ಜಿ ಮತ್ತು ಸಿಯೋಲ್ ನ್ಯಾಷನಲ್ ಯೂನಿವರ್ಸಿಟಿಯ ವಿಜ್ಞಾನಿಗಳು ಜಂಟಿಯಾಗಿ ರಚಿಸಿರುವ ಈ ಕೃತಕ ಸೂರ್ಯನ ಹೆಸರು ಕೆ-ಸ್ಟಾರ್ (ದಿ ಕೊರಿಯಾ ಸೂಪರ್ ಕಂಡಕ್ಟಿಂಗ್ ಟೋಕಾಮಾಕ್ ಅಡ್ವಾನ್ಸ್ಡ್ ರಿಸರ್ಚ್). ಇದು 2008 ರಲ್ಲಿ ಮೊದಲ ಬಾರಿಗೆ ಸಂಚಲನವನ್ನು ಸೃಷ್ಟಿಸಿತ್ತು.

ಏನಿದರ ಗುರಿ: 2025ರ ವೇಳೆಗೆ ಸಂಶೋಧಕರು ಕನಿಷ್ಠ 300 ಸೆಕೆಂಡುಗಳ ಕಾಲ ಹೆಚ್ಚಿನ ತಾಪಮಾನದಲ್ಲಿ ಈ ಸೂರ್ಯನನ್ನು ಇಡುವ ಗುರಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ, ಅವರು ಸೂರ್ಯನಂತಹ ಕೆ - ನಕ್ಷತ್ರದಲ್ಲಿ ದಹನ (ಸಮ್ಮಿಳನ) ಪ್ರತಿಕ್ರಿಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಇದಕ್ಕಾಗಿ ಅವರು ಹೈಡ್ರೋಜನ್ ನಿಂದ ಪ್ಲಾಸ್ಮಾವನ್ನು ಸಂಗ್ರಹಿಸಿದ್ದಾರೆ. ಇದು 100 ಮಿಲಿಯನ್ ಡಿಗ್ರಿ ತಾಪಮಾನದೊಂದಿಗೆ ಅಯಾನುಗಳನ್ನು ಹೊಂದಿರುತ್ತದೆ. ಫ್ಯೂಷನ್ ರಿಯಾಕ್ಟರ್ ಸಹಾಯದಿಂದ ಅಯಾನುಗಳನ್ನು ಬಿಸಿ ಮಾಡುವ ಮೂಲಕ ಪ್ಲಾಸ್ಮಾವನ್ನು 100 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 20 ಸೆಕೆಂಡುಗಳ ಕಾಲ ಇರಿಸುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ.

ಇದನ್ನು ಓದಿ: ಕ್ಷೀರಪಥದ ಅತ್ಯಂತ ಭಾರವಾದ ಕಪ್ಪು ಕುಳಿ ಪತ್ತೆ ಹಚ್ಚಿದ ಖಗೋಳಶಾಸ್ತ್ರಜ್ಞರು: ಏನಿದು ಕಪ್ಪುರಂದ್ರ? - Astronomers have found BH3

Last Updated : Apr 17, 2024, 8:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.