ETV Bharat / technology

ಫುಡ್​ ಆರ್ಡರ್​ ಮಾಡ್ತೀರಾ? ಹುಷಾರ್!​ ಪ್ಯಾಕೇಜಿಂಗ್‌ನಲ್ಲಿದೆ ಸ್ತನ ಕ್ಯಾನ್ಸರ್‌ ಹರಡುವ 200 ರಾಸಾಯನಿಕ ಅಂಶಗಳು- ಸಂಶೋಧನೆ - Breast Cancer In Food Packaging

author img

By ETV Bharat Tech Team

Published : 2 hours ago

Chemicals Linked To Breast Cancer In Food Packaging: ನಾವು ಆನ್​ಲೈನ್​ ಮೂಲಕ ಅಥವಾ ಹೋಟೆಲ್​ಗೆ ತೆರಳಿ ಆಹಾರವನ್ನು​ ಮನೆಗೆ ತಂದು ತಿನ್ನುತ್ತೇವೆ. ಆದರೆ ಇದರಿಂದೆಷ್ಟು ಅಪಾಯವಿದೆ ಎಂಬುದನ್ನು ಸಂಶೋಧನೆಯೊಂದು ಬಯಲು ಮಾಡಿದೆ. ಇದರಲ್ಲಿರುವ ರಾಸಾಯನಿಕ ಅಂಶಗಳು ಸ್ತನ ಕ್ಯಾನ್ಸರ್​ಗೆ ಕಾರಣವಾಗುತ್ತವೆ ಎಂದು ಎಚ್ಚರಿಸಿದೆ.

FOOD ORDER PACKAGING  BREAST CANCER  POTENTIAL BREAST CARCINOGENS  FRONTIERS IN TOXICOLOGY
ಸಾಂದರ್ಭಿಕ ಚಿತ್ರ (ETV Bharat)

Food Packaging: ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ಮಹಿಳೆ ಸ್ತನ ಕ್ಯಾನ್ಸರ್​​ಗೆ ಗುರಿಯಾಗುತ್ತಿದ್ದು, ಈ ಕುರಿತು ಅಗತ್ಯ ಕಾಳಜಿ ವಹಿಸಲೇಬೇಕಿದೆ. ಈಗ ನಾವು ತಿನ್ನುವ ಆಹಾರದ ಮೂಲಕವಲ್ಲ, ಆಹಾರವನ್ನು ಪ್ಯಾಕೇಜಿಂಗ್ ಮಾಡುವ ವಸ್ತುಗಳಿಂದಲೂ ಸ್ತನ ಕ್ಯಾನ್ಸರ್​ ಹರಡುತ್ತದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಹೌದು.​ ಪ್ಲಾಸ್ಟಿಕ್, ಪೇಪರ್ ಮತ್ತು ಕಾರ್ಡ್‌ಬೋರ್ಡ್ ಸೇರಿದಂತೆ ಆಹಾರ ಪ್ಯಾಕೇಜಿಂಗ್ ವಸ್ತುಗಳಲ್ಲಿ ಸುಮಾರು 200 ಸಂಭಾವ್ಯ ಸ್ತನ ಕಾರ್ಸಿನೋಜೆನ್‌ಗಳನ್ನು ಸಂಶೋಧಕರ ತಂಡ ಗುರುತಿಸಿದೆ. ಅಷ್ಟೇ ಏಕೆ?, ಇವುಗಳು ಅಸ್ತಿತ್ವದಲ್ಲಿರುವ ನಿಯಂತ್ರಣದ ಹೊರತಾಗಿಯೂ ಗಮನಾರ್ಹ ಅಪಾಯಗಳನ್ನು ಉಂಟುಮಾಡುತ್ತವೆ ಎಂಬುದನ್ನು ಅಧ್ಯಯನ ಕಂಡುಕೊಂಡಿದೆ.

ಮಂಗಳವಾರ 'ಫ್ರಾಂಟಿಯರ್ಸ್ ಇನ್ ಟಾಕ್ಸಿಕಾಲಜಿ'ಯಲ್ಲಿ ಪ್ರಕಟವಾದ ಅಧ್ಯಯನ ವರದಿ ದೈನಂದಿನ ಉತ್ಪನ್ನಗಳಲ್ಲಿ ಈ ರಾಸಾಯನಿಕಗಳನ್ನು ನಿರ್ಮೂಲನೆ ಮಾಡಲು ಬಲವಾದ ಕ್ರಮಗಳನ್ನು ಒತ್ತಿ ಹೇಳಿದೆ.

"ಈ ಅಧ್ಯಯನ ಬಹಳ ಮುಖ್ಯವಾಗಿದೆ. ಏಕೆಂದರೆ, ಇದು ಸ್ತನ ಕ್ಯಾನ್ಸರ್​ಗೆ ಕಾರಣವಾಗುವ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದನ್ನು ತಡೆಯಲು ಒಂದು ದೊಡ್ಡ ಅವಕಾಶ ಇದೆ ಎಂಬುದನ್ನು ತೋರಿಸುತ್ತದೆ. ನಿಮ್ಮ ದೈನಂದಿನ ಜೀವನದಲ್ಲಿ ಅಪಾಯಕಾರಿ ರಾಸಾಯನಿಕಗಳನ್ನು ಕಡಿಮೆ ಮಾಡುವ ಮೂಲಕ ಕ್ಯಾನ್ಸರ್ ತಡೆಗಟ್ಟುವಿಕೆಗೆ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಫುಡ್ ಪ್ಯಾಕೇಜಿಂಗ್ ಫೋರಂನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಯನದ ಸಹ-ಲೇಖಕರೂ ಆಗಿರುವ ಜೇನ್ ಮಂಕೆ ತಿಳಿಸಿದರು.

ಸ್ತನ ಕ್ಯಾನ್ಸರ್ ಎಂಬುದು ವಿಶ್ವಾದ್ಯಂತ ಎರಡನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, 2022ರಲ್ಲಿ 2.3 ಮಿಲಿಯನ್ ಮಹಿಳೆಯರು ಈ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಈ ಪೈಕಿ 6,70,000 ಮಂದಿ ಜಾಗತಿಕವಾಗಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ.

ಸಂಶೋಧನ ತಂಡವು ಇತ್ತೀಚೆಗೆ ಪ್ರಕಟವಾದ ಸಂಭಾವ್ಯ ಸ್ತನ ಕಾರ್ಸಿನೋಜೆನ್‌ಗಳ ಪಟ್ಟಿಗೆ ಇದನ್ನು ಹೋಲಿಸಿದೆ. ಪ್ಲಾಸ್ಟಿಕ್‌ನಲ್ಲಿ 143 ಮತ್ತು ಪೇಪರ್ ಅಥವಾ ಬೋರ್ಡ್‌ನಲ್ಲಿ 89 ಸೇರಿದಂತೆ ಆಹಾರ ಸಂಪರ್ಕ ವಸ್ತುಗಳಲ್ಲಿ (ಎಫ್‌ಸಿಎಂ) 189 ಸಂಭಾವ್ಯ ಸ್ತನ ಕಾರ್ಸಿನೋಜೆನ್‌ಗಳು ಪತ್ತೆಯಾಗಿವೆ ಎಂದು ಕಂಡುಕೊಂಡಿದೆ.

ಪ್ರಪಂಚದಾದ್ಯಂತ ಖರೀದಿಸಿದ ಎಫ್‌ಸಿಎಂಗಳಿಂದ 76 ಶಂಕಿತ ಸಸ್ತನಿ ಕಾರ್ಸಿನೋಜೆನ್‌ಗಳಿಗೆ ಒಡ್ಡಿಕೊಂಡ ಪುರಾವೆಗಳನ್ನು ಅವರು ತಿಳಿಸಿದ್ದಾರೆ. ಇದರಲ್ಲಿ 61 (ಶೇ 80) ಪ್ಲಾಸ್ಟಿಕ್‌ಗಳಿಂದ ಬಂದಿರುವುದು ಗಮನಾರ್ಹ. ವಾಸ್ತವಿಕ ಬಳಕೆಯ ಪರಿಸ್ಥಿತಿಗಳಲ್ಲಿ ಈ ರಾಸಾಯನಿಕಗಳಿಗೆ ಜಾಗತಿಕ ಜನಸಂಖ್ಯೆಯ ನಿರಂತರ ಒಡ್ಡುವಿಕೆಯನ್ನು ಇದು ಸೂಚಿಸುತ್ತದೆ.

ಮುಖ್ಯವಾಗಿ, ಯುರೋಪ್​ ಮತ್ತು ಅಮೆರಿಕ ಸೇರಿದಂತೆ ಹೆಚ್ಚು ನಿಯಂತ್ರಿತ ಪ್ರದೇಶಗಳಲ್ಲಿನ ಮಾರುಕಟ್ಟೆಗಳಿಂದ ಕಳೆದ ಕೆಲವು ವರ್ಷಗಳಲ್ಲಿ ಆಹಾರ ಸಂಪರ್ಕ ಸಾಮಗ್ರಿಗಳನ್ನು ಖರೀದಿಸಲಾಗಿದೆ. ಈ ದೇಶಗಳಲ್ಲಿ ಅಸ್ತಿತ್ವದಲ್ಲಿರುವ ನಿಯಮಗಳ ಹೊರತಾಗಿಯೂ, FCMಗಳಲ್ಲಿ ಕಾರ್ಸಿನೋಜೆನಿಕ್ ಪದಾರ್ಥಗಳನ್ನು ಮಿತಿಗೊಳಿಸಲು ಉದ್ದೇಶಿಸಲಾಗಿದೆ. ಈ ಅಧ್ಯಯನವು ಪ್ರಸ್ತುತ ಇರುವ ನಿಯಂತ್ರಕ ಚೌಕಟ್ಟುಗಳಲ್ಲಿನ ಅಂತರವನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: ಚಂದ್ರಯಾನ-3: 160 ಕಿ.ಮೀ ಅಗಲದ ಬೃಹತ್​ ಕುಳಿ ಪತ್ತೆ ಹಚ್ಚಿದ ಪ್ರಗ್ಯಾನ್ ರೋವರ್ - Pragyan Rover Found Wide Crater

ETV Bharat Logo

Copyright © 2024 Ushodaya Enterprises Pvt. Ltd., All Rights Reserved.