ETV Bharat / technology

ಭಾರತದಲ್ಲಿ ಸ್ಟಾರ್​ಲಿಂಕ್​ ಇಂಟರ್​ನೆಟ್​ ಸರ್ವಿಸ್​ಗೆ ಅನುಮತಿ ಸಾಧ್ಯತೆ; ಗ್ರೀನ್​ ಸಿಗ್ನಲ್​ ಸಿಕ್ಕರೆ ಆಗುತ್ತಾ ಕ್ರಾಂತಿ? - STARLINK

ಎಲೋನ್ ಮಸ್ಕ್ ಅವರ ಸ್ಟಾರ್​ಲಿಂಕ್ ಇಂಟರ್​ನೆಟ್​ ಸರ್ವಿಸ್ ಆರಂಭಿಸಲು ಭಾರತ ಸರ್ಕಾರವು ಶೀಘ್ರವೇ ಒಪ್ಪಿಗೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

author img

By ETV Bharat Karnataka Team

Published : Apr 17, 2024, 2:24 PM IST

Starlink internet service likely to be allowed in India

ನವದೆಹಲಿ : ಎಲೋನ್ ಮಸ್ಕ್ ಅವರು ಭಾರತ ಭೇಟಿಗೆ ಆಗಮಿಸುವ ಮುನ್ನವೇ ಅವರ ಉಪಗ್ರಹ ಆಧರಿತ ಸ್ಟಾರ್​ಲಿಂಕ್ ಇಂಟರ್​ನೆಟ್​ ಸರ್ವಿಸ್​ ಅನ್ನು ಭಾರತದಲ್ಲಿ ಆರಂಭಿಸಲು ಸಂವಹನ ಸಚಿವಾಲಯವು ತಾತ್ಕಾಲಿಕ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಅನುಮೋದನೆಯ ಫೈಲ್ ಪ್ರಸ್ತುತ ಸಂವಹನ ಸಚಿವ ಅಶ್ವಿನಿ ವೈಷ್ಣವ್ ಅವರ ಕಚೇರಿಗೆ ತಲುಪಿದ್ದು, ಕೆಲ ಭದ್ರತಾ ವಿಷಯಗಳ ಬಗ್ಗೆ ಗೃಹ ಸಚಿವಾಲಯದ ಅಂತಿಮ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಿದೇಶಿ ಹೂಡಿಕೆ ಮತ್ತು ನಿವ್ವಳ ಮೌಲ್ಯದಂತಹ ವಿಷಯಗಳನ್ನು ಒಳಗೊಂಡಿರುವ ವಾಣಿಜ್ಯ ಭಾಗವನ್ನು ಈಗಾಗಲೇ ಪರಿಶೀಲಿಸಲಾಗಿದೆ ಮತ್ತು ಪರವಾನಗಿ ಷರತ್ತುಗಳಿಗೆ ಅನುಗುಣವಾದ ತಾಂತ್ರಿಕ ಅವಶ್ಯಕತೆಗಳನ್ನು ಕೂಡ ಪರಿಶೀಲಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. ಸಚಿವ ವೈಷ್ಣವ್ ಅವರ ಕಚೇರಿಯಿಂದ ಅನುಮೋದನೆ ಪಡೆದ ನಂತರ ಸ್ಟಾರ್​ಲಿಂಕ್​ಗೆ ಉಪಗ್ರಹ ಸಂವಹನ ಮೂಲಕ ಜಾಗತಿಕ ಮೊಬೈಲ್ ವೈಯಕ್ತಿಕ ಸಂವಹನ (ಜಿಎಂಪಿಸಿಎಸ್) (Global Mobile Personal Communication by Satellite - GMPCS) ಸೇವೆಗಳ ಪರವಾನಗಿ ನೀಡಲಾಗುವುದು. ದೇಶದಲ್ಲಿ ಉಪಗ್ರಹ ಸಂವಹನ ಸೇವೆಗಳನ್ನು ಆರಂಭಿಸಲು ಈ ಪರವಾನಗಿ ಪಡೆಯುವುದು ಅಗತ್ಯ.

ಮಸ್ಕ್ ಈ ಹಿಂದೆಯೂ ಭಾರತದಲ್ಲಿ ತನ್ನ ಉಪಗ್ರಹ ಇಂಟರ್ ನೆಟ್ ಸೇವೆಯನ್ನು ಪ್ರಾರಂಭಿಸಲು ಪ್ರಯತ್ನಿಸಿದ್ದರು. ತೀರಾ ಇತ್ತೀಚೆಗೆ ಅಂದರೆ ನವೆಂಬರ್ 2022 ರಲ್ಲಿ ಸ್ಟಾರ್​ಲಿಂಕ್ ಜಿಎಂಪಿಸಿಎಸ್ ಪರವಾನಗಿಗಾಗಿ ಅರ್ಜಿ ಸಲ್ಲಿಸಿದೆ. ಆದಾಗ್ಯೂ, ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯಗಳ ಕಾರಣದಿಂದ ದೇಶದಲ್ಲಿ ಯೋಜಿತ ಉಪಗ್ರಹ ಸಂವಹನ ಸೇವಾ ಪ್ರಯೋಗಗಳನ್ನು ರದ್ದುಗೊಳಿಸಲಾಗಿತ್ತು.

ಕಳೆದ ವರ್ಷ ಡಿಸೆಂಬರ್​ನಲ್ಲಿ ಸರ್ಕಾರವು ದೂರಸಂಪರ್ಕ ಮಸೂದೆ 2023 ಅನ್ನು ಅಂಗೀಕರಿಸಿದೆ. ಹರಾಜಿನಲ್ಲಿ ಭಾಗವಹಿಸುವ ಅಗತ್ಯವಿಲ್ಲದೇ ಉಪಗ್ರಹ ಆಧಾರಿತ ಸೇವೆಗಳಿಗೆ ಸ್ಪೆಕ್ಟ್ರಮ್ ಹಂಚಿಕೆ ಮಾಡಲು ಈ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ. ಈ ಕ್ರಮವು ಒನ್​ವೆಬ್, ಮಸ್ಕ್ ಅವರ ಸ್ಟಾರ್​ಲಿಂಕ್ ಮತ್ತು ಅಮೆಜಾನ್​ನ ಕುಯಿಪರ್​ನಂತಹ ಕಂಪನಿಗಳಿಗೆ ಅನುಕೂಲಕರವಾಗಿದೆ.

ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಸಿಇಒ ಆಗಿರುವ ಎಲೋನ್​ ಮಸ್ಕ್ ಶೀಘ್ರವೇ ಭಾರತಕ್ಕೆ ಆಗಮಿಸಲಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ. ಈ ಭೇಟಿಯ ಸಮಯದಲ್ಲಿ ಅವರು ದೇಶದಲ್ಲಿ ಸ್ಟಾರ್​ಲಿಂಕ್ ಪ್ರಾರಂಭಿಸುವ ಬಗ್ಗೆ ಮತ್ತು 2 ಬಿಲಿಯನ್ ನಿಂದ 3 ಬಿಲಿಯನ್ ಡಾಲರ್​ವರೆಗಿನ ಹೂಡಿಕೆ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : 2 ಸ್ಕ್ರೀನ್​ಗಳ ಆಸೂಸ್ 'Zenbook DUO' ಲ್ಯಾಪ್​ಟಾಪ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ? - Asus Zenbook Duo

ETV Bharat Logo

Copyright © 2024 Ushodaya Enterprises Pvt. Ltd., All Rights Reserved.