ETV Bharat / technology

ಅದ್ಭುತ ಫೀಚರ್​​ನೊಂದಿಗೆ ಅಗ್ಗದ ಸ್ಮಾರ್ಟ್​ಫೋನ್​ ಹುಡುಕುತ್ತಿದ್ದೀರಾ?: ಹಾಗಾದರೆ ಇಲ್ಲಿದೆ ಡೀಟೇಲ್ಸ್​ - BELOW 10K RANGE SMARTPHONE - BELOW 10K RANGE SMARTPHONE

ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಅನೇಕ ಆಂಡ್ರಾಯ್ಡ್​ ಫೋನ್​ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳ ವಿವರ ಬೇಕು ಅಂತಾದರೆ ಈ ವರದಿಯನ್ನೊಮ್ಮೆ ಓದಿ.

smartphone
ಸ್ಮಾರ್ಟ್​ಫೋನ್​ (IANS)
author img

By ETV Bharat Karnataka Team

Published : May 7, 2024, 8:19 PM IST

ಹೈದರಾಬಾದ್: ಅದ್ಭುತ ಫೀಚರ್‌ಗಳನ್ನು ಹೊಂದಿರುವ ಅಗ್ಗದ ಸ್ಮಾರ್ಟ್‌ಫೋನ್ ನಿಮ್ಮಲ್ಲಿದ್ದರೆ ಜೀವನವು ಬೆಣ್ಣೆಯಂತಾಗುತ್ತದೆ. ಇಂದಿನ ದಿನಗಳಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಅನೇಕ ಆಂಡ್ರಾಯ್ಡ್ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಒಂದು ವೇಳೆ ನೀವು 10,000 ರೂ. ಒಳಗಿನ ಆಂಡ್ರಾಯ್ಡ್ ಫೋನ್‌ಗಾಗಿ ಹುಡುಕುತ್ತಿದ್ದರೆ ನಿಮಗಾಗಿ ಪಟ್ಟಿಯೊಂದನ್ನು ನೀಡುತ್ತೇವೆ. ಇವು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ದೀರ್ಘ ಬ್ಯಾಟರಿ ಬಾಳಿಕೆ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವುದನ್ನು ನೀವು ಕಂಡುಕೊಳ್ಳಬಹುದು.

Poco M6 5G : Poco M6 5G ಮೊಬೈಲ್ ಅನ್ನು ಕಳೆದ ವರ್ಷ ಡಿಸೆಂಬರ್ 22 ರಂದು ಬಿಡುಗಡೆ ಮಾಡಲಾಯಿತು. ಇದು 6.74-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ (HD+) ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು 260 ಪಿಕ್ಸೆಲ್​ನೊಂದಿಗೆ ಪ್ರತಿ ಇಂಚಿನ PPI ಜೊತೆಗೆ 4GB, 6GB, 8GB RAM ಸೌಲಭ್ಯ ಹೊಂದಿದೆ. Poco M6 5G ಆಂಡ್ರಾಯ್ಡ್ 13 ಆಧರಿಸಿದೆ ಮತ್ತು 5000mAh ಬ್ಯಾಟರಿ ಕೂಡಾ ಹೊಂದಿದೆ.

Poco M6 5G ವೇಗದ ಚಾರ್ಜಿಂಗ್ ಹೊಂದಿದೆ. Poco M6 5G ಹಿಂಭಾಗದಲ್ಲಿ 50 MP ಮತ್ತು ಸೆಲ್ಫಿಗಾಗಿ ಸಿಂಗಲ್ ಫ್ರಂಟ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದು 5MP ಸಂವೇದಕವನ್ನು ಹೊಂದಿದ್ದು, ಆಂಡ್ರಾಯ್ಡ್ 13 ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸುತ್ತದೆ. 128GB, 256GB ಇಂಟರ್​ನಲ್ ಸ್ಟೋರೇಜ್​​ ಕೂಡಾ ಇದೆ. ಈ ಮೊಬೈಲ್​ನ್ನು ಗ್ಯಾಲಕ್ಟಿಕ್ ಕಪ್ಪು ಮತ್ತು ಓರಿಯನ್ ಬ್ಲೂ ಬಣ್ಣಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ Poco M6 5G ಬೆಲೆ 9,249 ರೂ. ಇದೆ.

Vivo Y18-Vivo Y18e: Vivo Y18 ಮತ್ತು Vivo Y18e ಗಳು 90Hz ರಿಫ್ರೆಶ್ ರೇಟ್ ಮತ್ತು 269 ppi ಪಿಕ್ಸೆಲ್ ಸಾಂದ್ರತೆಯೊಂದಿಗೆ 6.56-ಇಂಚಿನ HD+ (1,612 x 720 ಪಿಕ್ಸೆಲ್‌ಗಳು) LCD ಪರದೆ ಹೊಂದಿವೆ. ಎರಡೂ ಹ್ಯಾಂಡ್‌ಸೆಟ್‌ಗಳು 12nm ಆಕ್ಟಾ-ಕೋರ್ MediaTek G85 SoC ಚಿಪ್‌ಸೆಟ್‌ನಿಂದ ಚಾಲಿತವಾಗುತ್ತವೆ. ಹ್ಯಾಂಡ್‌ಸೆಟ್ 4GB, LPDDR4X RAM ಮತ್ತು 128GB eMMC 5.1 ಇಂಟರ್​ನಲ್ ಸ್ಟೋರೇಜ್ ಈ ಮೊಬೈಲ್​​ನ ವಿಶೇಷತೆ ಆಗಿದೆ.

ಇದು Android 14-ಆಧಾರಿತ FunTouch OS 14 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಿಂಭಾಗದಲ್ಲಿ 50-MP ಕ್ಯಾಮೆರಾ ಸೌಲಭ್ಯ ಕೂಡಾ ಇದೆ. ಮುಂಭಾಗದಲ್ಲಿ 8 MP ಕ್ಯಾಮೆರಾ ಇದೆ. Vivo Y18e 13 MP ಪ್ರಾಥಮಿಕ ಹಿಂಭಾಗದ ಸಂವೇದಕವನ್ನು 0.08 MP ಮತ್ತು ಸೆಲ್ಫಿಗಳಿಗಾಗಿ 5MP ಕ್ಯಾಮೆರಾ ವೈಶಿಷ್ಟ್ಯವನ್ನು ನೀಡಲಾಗಿದೆ. Vivo 18 ಮತ್ತು Vivo Y18e 5000mAh ಬ್ಯಾಟರಿ ಹೊಂದಿದ್ದು, ಇದು 15W ವೈರ್ಡ್ ಫಾಸ್ಟ್ ಚಾರ್ಜಿಂಗ್ ಕೊಡಲಾಗಿದೆ. ಭಾರತದಲ್ಲಿ ಇದರ ಬೆಲೆ 9,999 ರೂ. ಇದೆ.

Realme Narzo N53; Realme Narzo N53 ಮೊಬೈಲ್ ಅನ್ನು 18 ಮೇ 2023 ರಂದು ಬಿಡುಗಡೆ ಮಾಡಲಾಗಿದೆ. Realme Narzo N53 ಆಕ್ಟಾ-ಕೋರ್ Unisoc T612 ಪ್ರೊಸೆಸರ್‌ನಿಂದ 6.74-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ (HD+) ಜೊತೆಗೆ 90Hz ಹೊಂದಿದೆ. Realme Narzo N53 4GB, 6GB, 8GB RAM ಸೌಲಭ್ಯ ಹೊಂದಿದೆ. ಇದು Android 13 ಅನ್ನು ಆಧರಿಸಿದೆ. ಇದು 5000mAh ಬ್ಯಾಟರಿ ಹೊಂದಿದೆ. Realme Narzo N53 ಹಿಂದಿನ 50 MP ಕ್ಯಾಮೆರಾವನ್ನು ಹೊಂದಿದೆ. ಭಾರತದಲ್ಲಿ Realme Narzo N53 ಬೆಲೆ ಸುಮಾರು 10 ಸಾವಿರ ರೂ. ಇದೆ.

Oppo A17: Oppo A17 ಮೊಬೈಲ್ ಸೆಪ್ಟೆಂಬರ್ 2022ರಲ್ಲಿ ಬಿಡುಗಡೆ ಮಾಡಲಾಗಿದೆ. ಇದು 6.56-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯನ್ನು ಹೊಂದಿದ್ದು, ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ P35 (MT6765) ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ. 4GB RAM ಹೊಂದಿರುವ Oppo A17 ಆಂಡ್ರಾಯ್ಡ್ 12ರೊಂದಿಗೆ ಕೆಲಸ ಮಾಡುತ್ತದೆ. 5000mAh ಬ್ಯಾಟರಿ ಕೂಡಾ ಇದೆ. Oppo A17 ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದ್ದು, 50MP (f/1.8) ಪ್ರಾಥಮಿಕ ಮತ್ತು 2MP (f/2.8) ಕ್ಯಾಮೆರಾವನ್ನು ಒಳಗೊಂಡಿದೆ. Oppo A17 ಅನ್ನು ಲೇಕ್ ಬ್ಲೂ ಮತ್ತು ಮಿಡ್ನೈಟ್ ಬ್ಲಾಕ್ ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ Oppo A17 ಬೆಲೆ ರೂ 9,999 ರಿಂದ ಪ್ರಾರಂಭವಾಗುತ್ತದೆ.

Redmi 12: ಅಗ್ಗದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ Redmi 12 ಹೆಸರನ್ನೂ ಕೂಡಾ ಸೇರಿಸಿಕೊಳ್ಳಬಹುದು. ಸ್ಮಾರ್ಟ್‌ಫೋನ್ 6.79-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯೊಂದಿಗೆ 90Hz ರಿಫ್ರೆಶ್ ರೇಟ್ ಮತ್ತು 396 ಪಿಕ್ಸೆಲ್‌ಗಳೊಂದಿಗೆ FHD+ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. Redmi 12 ಆಕ್ಟಾ-ಕೋರ್ MediaTek Helio G88 ಪ್ರೊಸೆಸರ್‌ನಿಂದ ಚಾಲಿತವಾಗಲಿದೆ. ಇದು 4GB, 6GB, 12GB RAM ಅನ್ನು ಹೊಂದಿದೆ. Redmi 12 Android 13 ಅನ್ನು ಆಧರಿಸಿದೆ ಮತ್ತು 5000mAh ತೆಗೆಯಲಾಗದ ಬ್ಯಾಟರಿ ಸೌಲಭ್ಯ ಹೊಂದಿದೆ. ಭಾರತದಲ್ಲಿ Redmi 12 ಬೆಲೆ 9,499 ರೂ. ಇದೆ.

ಇದನ್ನೂ ಓದಿ : ಅತ್ಯಧಿಕ ಮಾರಾಟವಾದ ಸ್ಮಾರ್ಟ್​ಫೋನ್ ಆಗಿ ಹೊರಹೊಮ್ಮಿದ ಆ್ಯಪಲ್​ IPhone 15 Pro Max - APPLES IPHONE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.