Server Down: ಕಳೆದ ರಾತ್ರಿ ವಾಟ್ಸ್‌ಆ್ಯಪ್ , ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ಬಳಕೆದಾರರಿಗೆ ಅಡಚಣೆ ಉಂಟುಮಾಡಿತ್ತು. ಈ ಬಗ್ಗೆ ಗಮನಕ್ಕೆ ಬಂದಾಕ್ಷಣ ಮೆಟಾ ತನ್ನ ಪ್ರತಿಕ್ರಿಯೆ ನೀಡಿದೆ. ಬಳಕೆದಾರರು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವುದಕ್ಕೆ ನಾವು ವಿಷಾದಿಸುತ್ತೇವೆ ಎಂದು ಮೆಟಾ ಪ್ರಕಟಣೆ ಮೂಲಕ ತಿಳಿಸಿದೆ.
ಬಳಕೆದಾರರು ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾವು ಈ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮೆಟಾ ಹೇಳಿದೆ. ರಾತ್ರಿ ಸರಿ ಸುಮಾರು 11 ಗಂಟೆಯಿಂದ ಬಳಕೆದಾರರು ಈ ಅಪ್ಲಿಕೇಶನ್‌ಗಳಲ್ಲಿ ಮೆಸೇಜ್ ಕಳುಹಿಸಲು ಮತ್ತು ಸ್ವೀಕರಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಯು ಇದ್ದಕ್ಕಿದ್ದಂತೆ ಪ್ರಾರಂಭವಾಗಿದ್ದು, ಪ್ರಪಂಚದಾದ್ಯಂತ ಕೋಟ್ಯಂತರ ಜನರನ್ನು ಬಾಧಿಸಿದೆ. ವಾಟ್ಸ್‌ಆ್ಯಪ್ ಇನ್ನೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಜನರು ಸಂದೇಶಗಳನ್ನು ಕಳುಹಿಸಲು ತೊಂದರೆ ಎದುರಿಸುತ್ತಿರುವ ಬಗ್ಗೆ ಬಳಕೆದಾರರು ದೂರಿದ್ದಾರೆ.
We’re aware that a technical issue is impacting some users’ ability to access our apps. We’re working to get things back to normal as quickly as possible and apologize for any inconvenience.
— Meta (@Meta) December 11, 2024
ಕ್ಷಮೆಯಾಚಿಸಿದ ಮೆಟಾ: ನಮ್ಮ ಆಪ್ಗಳನ್ನು ಬಳಸುವಲ್ಲಿ ಅನೇಕ ಬಳಕೆದಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾವು ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಅದನ್ನು ಸರಿಪಡಿಸಲು ಭಾವಿಸುತ್ತೇವೆ. ನಿಮಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮಿಸಿ ಎಂದು ಮೆಟಾ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಡೌನ್ಡೆಕ್ಟರ್ನಲ್ಲಿ ದೂರು: ಈ ಮೆಟಾ - ಮಾಲೀಕತ್ವದ ಪ್ಲಾಟ್‌ಫಾರ್ಮ್‌ಗಳಿಗಾಗಿ ಡೌನ್‌ಡೆಕ್ಟರ್ ಔಟಟೇಜ್ ಚೆಕಿಂಗ್ ವೆಬ್‌ಸೈಟ್ 1,30,000 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದೆ. ಯುಕೆ ಮತ್ತು ಯುರೋಪ್, ಏಷ್ಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕದ ಕೆಲವು ಭಾಗಗಳಲ್ಲಿ ಬಳಕೆದಾರರು ಈ ಸಮಸ್ಯೆಗಳನ್ನು ಎದುರಿಸಿದ್ದರು ಎಂದು ತಿಳಿದು ಬಂದಿದೆ.
ಎಕ್ಸ್ನಲ್ಲಿ ಆಕ್ರೋಶ : ರಾತ್ರಿ 11 ಗಂಟೆಯವರೆಗೂ ಮೆಟಾ ಸರ್ವರ್ ಡೌನ್ ಆಗಿದ್ದರಿಂದ ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಎಕ್ಸ್ ಬಳಕೆದಾರರು ಇದರ ಬಗ್ಗೆ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದರು. ಇದಾದ ನಂತರ ಎಕ್ಸ್ನಲ್ಲಿ ಟ್ರೆಂಡಿಂಗ್ ಶುರುವಾಯಿತು. ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಇತರ ದೇಶಗಳಲ್ಲಿಯೂ ಸಹ ಸಾಮಾಜಿಕ ಮಾಧ್ಯಮ ವೇದಿಕೆಗಳು ಸ್ಥಗಿತಗೊಂಡಿರುವ ವರದಿಗಳಿವೆ ಎಂದು ಇತರ ದೇಶಗಳ ಜನರು ವರದಿ ಮಾಡಿದ್ದಾರೆ. ಈ ಸಮಸ್ಯೆ ಡೆಸ್ಕ್‌ಟಾಪ್ ಮತ್ತು ಮೊಬೈಲ್ ಎರಡರಲ್ಲೂ ಕಂಡು ಬಂದಿದೆ. 11:45 ರ ನಂತರ, ಕ್ರಮೇಣ ಎಲ್ಲಾ ಮೂರು ವೇದಿಕೆಗಳು ಕೆಲಸ ಮಾಡಲು ಪ್ರಾರಂಭಿಸಿದವು.
ವಾಟ್ಸ್‌ಆ್ಯಪ್ ಹೊರತುಪಡಿಸಿ, ಮೆಟಾ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಅನ್ನು ಸಹ ಹೊಂದಿದೆ. ಮೂರು ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಬಳಕೆದಾರರು ಈ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸಿದ್ದರು. ಸದ್ಯ ಈ ಮೂರು ವೇದಿಕೆಗಳು ಕಾರ್ಯ ನಿರ್ವಹಿಸುತ್ತಿವೆ.
ಓದಿ: 2035 ರಲ್ಲಿ ಬಾಹ್ಯಾಕಾಶ ನಿಲ್ದಾಣ, 2040ರ ವೇಳೆಗೆ ಚಂದ್ರನ ಮೇಲೆ ಭಾರತೀಯರು: ಕೇಂದ್ರ ಸರ್ಕಾರದ ಯೋಚನೆ