ನವದೆಹಲಿ: ಐಫೋನ್ 15ರ ಬಳಿಕ ದಕ್ಷಿಣ ಕೊರಿಯಾದ ದೈತ್ಯ ಸಂಸ್ಥೆ ಸ್ಯಾಮ್ಸಂಗ್ ಭಾರತದ ಘಟಕದಲ್ಲಿ ಗ್ಯಾಲಕ್ಸಿ ಎಸ್24 ಸರಣಿಯ ಸ್ಮಾರ್ಟ್ಫೋನ್ಗಳನ್ನು ಉತ್ಪಾದನೆ ಮಾಡಿದೆ. ಈ ಫೋನ್ ಇಂದಿನಿಂದ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಗ್ರಾಹಕರು ಇದನ್ನು ಕೊಳ್ಳಬಹುದಾಗಿದೆ.
ಉತ್ತರ ಪ್ರದೇಶದ ನೋಯ್ಡಾದ ಸ್ಯಾಮ್ಸಂಗ್ ಫ್ಯಾಕ್ಟರಿಯಲ್ಲಿ ಈ ಮೂರು ಗ್ಯಾಲಕ್ಸಿ ಸರಣಿಯ ಸ್ಮಾರ್ಟ್ಫೋನ್ಗಳ ನಿರ್ಮಾಣ ಮಾಡಲಾಗಿದೆ. ಅವು ಗ್ಯಾಲಕ್ಸಿ ಎಸ್24 ಅಲ್ಟ್ರಾ, ಗ್ಯಾಲಕ್ಸಿ ಎಸ್ 24 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್ 24 ಆಗಿದೆ. ಈ ಸ್ಮಾರ್ಟ್ಫೋನ್ಗಳು ಎಐ ತಂತ್ರಜ್ಞಾನದೊಂದಿಗೆ ಅದ್ಬುತ ಫೀಚರ್ಗಳಾದ ಲೈವ್ ಟ್ರಾನ್ಸ್ಲೇಟ್, ಸರ್ಕಲ್ ಟೂ ಸರ್ಚ್, ಪ್ರೊ ವಿಷವಲ್ ಇಂಜಿನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಗ್ರಾಹಕ ಸ್ನೇಹಿಯಾಗಿದೆ.
ಹೀಗಿದೆ ದರ: ಪ್ರಿ ಬುಕ್ಕಿಂಗ್ ಹೊರತಾಗಿ ಇಂದಿನಿಂದ ಮಾರುಕಟ್ಟೆಯಲ್ಲಿ ಕೊಳ್ಳಲು ಲಭ್ಯವಿರುವ ಗ್ಯಾಲಕ್ಸಿ ಎಸ್ 24 ಸರಣಿಯ ಮೊಬೈಲ್ಗಳು ವಿವಿಧ ರಾಮ್, ಸ್ಟೋರೇಜ್ ಹಾಗೂ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ. ಗ್ಯಾಲಕ್ಸಿ ಎಸ್24 8 ಜಿಬಿ 256 ಜಿಬಿ ಮಾಡೆಲ್ ಬೆಲೆ 79,999ನಿಂದ 89,999ರೂವರೆಗೆ ಇದೆ. ಗ್ಯಾಲಕ್ಸಿ ಎಸ್24ಪ್ಲಸ್ 12 ಜಿಬಿ 256 ಜಿಬಿ ಮಾದರಿ ಫೋನ್, 99,999ರಿಂದ 1,09,999 ರೂವರೆಗೆ ಇದೆ. ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಇವುಗಳಿಗಿಂತ ಕೊಂಚ ದುಬಾರಿಯಾಗಿದ್ದು, 12ಜಿಬಿ 256 ಜಿಬಿ ಮಾಡೆಲ್ ದರ 1,29,000 ದಿಂದ 159,999 ರೂವರೆಗೆ ಲಭ್ಯವಿದೆ.
ಗ್ಯಾಲಕ್ಸಿ ಎಸ್24 ಪ್ಲಸ್ ಕೊಬಾಲ್ಡ್ ವೈಲೆಟ್ ಮತ್ತು ಒನೆಕ್ಸ್ ಬ್ಲಾಕ್ ಬಣ್ಣದಲ್ಲಿ ಲಭ್ಯವಿದ್ದರೆ, ಗ್ಯಾಲಕ್ಸಿ ಎಸ್24 ಅಂಬರ್ ಯೆಲ್ಲೊ, ಕೊಬಾಲ್ಡ್ ವೈಲೆಟ್ ಮತ್ತು ಒನೆಕ್ಸ್ ಬ್ಲಾಕ್ ಬಣ್ಣದಲ್ಲಿ ಲಭ್ಯವಿದೆ. ಟೈಟಾನಿಯಂ ಫ್ರೇಂ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ಇದರ ಬಾಳಿಕೆ ದೀರ್ಘಕಾಲ ಬರಲಿದೆ.
ಸ್ಯಾಮ್ಸಂಗ್ ಈ ಎಲ್ಲ ಮೂರು ಫೋನ್ಗಳಿಗೆ ಏಳು ಜನರೇಷನ್ವರೆಗೆ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮತ್ತು ಏಳು ವರ್ಷಗಳವರೆಗೆ ಸೆಕ್ಯೂರಿಟಿ ಅಪ್ಡೇಟ್ಸ್ ನೀಡುವುದಾಗಿ ಭರವಸೆ ನೀಡಿದೆ. ಸ್ಯಾಮ್ಸಂಗ್ ಕೀಬೋರ್ಡ್ನಲ್ಲಿ ಅಳವಡಿಸಲಾದ ಎಐ ತಂತ್ರಜ್ಞಾನವು ಹಿಂದಿ ಸೇರಿದಂತೆ 13 ಭಾಷೆಗಳಲ್ಲಿ ನೈಜ ಸಮಯದಲ್ಲಿ ಸಂದೇಶಗಳನ್ನು ಭಾಷಾಂತರಿಸಬಲ್ಲದು.
ಗ್ಯಾಲಕ್ಸಿ 24 ಸರಣಿಯು ಸ್ಯಾಪ್ಡ್ರಾಗನ್ 8 ಜೆನ್ 3 ಮೊಬೈಲ್ ಫ್ಲಾಟ್ಫಾರ್ಮ್ನಿಂದ ರಚಿತವಾಗಿದೆ. ಕ್ಯಾಮೆರಾದಲ್ಲಿ ಪ್ರೊವಿಶುವಲ್ ಎಂಜಿನ್ ಹೊಂದಿದ್ದು, ಎಐ ಆಧಾರಿತ ಸಾಧನಗಳು ಇಮೇಜ್ ಸೆರೆ ಸಾಮರ್ಥ್ಯದ ಗುಣಮಟ್ಟವನ್ನು ಹೆಚ್ಚಿಸಿದೆ.
ಇದನ್ನೂ ಓದಿ: ದಾಖಲೆಯ 2.5 ಲಕ್ಷ ಪ್ರೀ - ಬುಕಿಂಗ್ ಪಡೆದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್24