ETV Bharat / technology

ಪವರ್​ಫುಲ್​ ಪ್ರೊಸೆಸರ್​, ಸೂಪರ್​ ಫೀಚರ್ಸ್; ರೆಡ್​ಮಿ ಟರ್ಬೋ 4 ದೇಶಿಯ ಮಾರುಕಟ್ಟೆಗೆ ಯಾವಾಗ ಎಂಟ್ರಿ? - REDMI TURBO 4 LAUNCHED

Redmi Turbo 4 Launched: ಚೀನಾದ ಮಾರುಕಟ್ಟೆಯಲ್ಲಿ ರೆಡ್​ಮಿ ಟರ್ಬೋ 4 ಬಿಡುಗಡೆಯಾಗಿದೆ. ಇದರ ವಿಶೇಷತೆಗಳು, ವೈಶಿಷ್ಟ್ಯಗಳು ಮತ್ತು ಬೆಲೆಯ ವಿವರ ಕೆಳಗೆ ನೀಡಲಾಗಿದೆ.

REDMI TURBO 4 PRICE  POCO X7 PRO SPECIFICATIONS  REDMI TURBO 4 IN INDIA  POCO X7 PRO
ರೆಡ್​ಮಿ ಟರ್ಬೋ 4 (Photo Credit - mi)
author img

By ETV Bharat Tech Team

Published : Jan 4, 2025, 9:57 AM IST

Redmi Turbo 4 Launched: ಚೀನಾ ಮಾರುಕಟ್ಟೆಯಲ್ಲಿ ರೆಡ್​ಮಿ ಟರ್ಬೋ 4 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಇದು Xiaomi ಉಪ-ಬ್ರಾಂಡ್‌ನ ಪ್ರಮುಖ ಸ್ಮಾರ್ಟ್‌ಫೋನ್ ಆಗಿದ್ದು, ಕಂಪನಿಯು ಇದನ್ನು ಮೀಡಿಯಾ ಟೆಕ್ ಡೈಮೆನ್ಶನ್ 8400-ಅಲ್ಟ್ರಾ ಚಿಪ್‌ಸೆಟ್‌ನೊಂದಿಗೆ ಬಿಡುಗಡೆ ಮಾಡಿದೆ.

ಈ ಫೋನ್‌ನ ವಿಶೇಷತೆಯೆಂದರೆ ಇದನ್ನು ಭಾರತ ಸೇರಿದಂತೆ ವಿಶ್ವದ ಇತರ ಮಾರುಕಟ್ಟೆಗಳಲ್ಲಿ 'Poco X7 Pro' ಹೆಸರಿನಲ್ಲಿ ಬಿಡುಗಡೆ ಮಾಡಬಹುದು. ಈ ಸ್ಮಾರ್ಟ್‌ಫೋನ್ ಜನವರಿ 9 ರಂದು ಭಾರತಕ್ಕೆ ಪ್ರವೇಶಿಸಲಿದೆ. ಈ ವೇಳೆ 'ರೆಡ್​ಮಿ ಟರ್ಬೋ 4' ಮೊಬೈಲ್‌ನ ಬೆಲೆ, ವೈಶಿಷ್ಟ್ಯಗಳು ಮತ್ತು ವಿಶೇಷತೆಗಳ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯೋಣ..

ರೆಡ್​ಮಿ ಟರ್ಬೋ 4 ವಿಶೇಷತೆಗಳು:

ಡಿಸ್‌ಪ್ಲೇ: ಈ ಫೋನ್ 6.67 ಇಂಚಿನ TCL Huaxing 1.5K ಫ್ಲಾಟ್ OLED ಸ್ಕ್ರೀನ್​ ಹೊಂದಿದೆ. ಇದರ ರಿಫ್ರೆಶ್ ರೇಟ್​ 120Hz ಆಗಿದೆ, ಬ್ರೈಟ್​ನೆಸ್​ 3200 ನಿಟ್ಸ್ ಆಗಿದೆ. ಈ ಡಿಸ್​ಪ್ಲೇ HDR10+, Dolby Vision ಸಪೋರ್ಟ್​ನೊಂದಿಗೆ ಬರುತ್ತದೆ.

ಪ್ರೊಸೆಸರ್: ಈ ಫೋನ್‌ನಲ್ಲಿರುವ ಪ್ರೊಸೆಸರ್‌ಗಾಗಿ ಕಂಪನಿಯು ಮೀಡಿಯಾ ಟೆಕ್ ಡೈಮೆನ್ಶನ್ 8400-ಅಲ್ಟ್ರಾ ಚಿಪ್‌ಸೆಟ್ ಅನ್ನು ಒದಗಿಸಿದೆ. ಈ ಪ್ರೊಸೆಸರ್ ತುಂಬಾ ಪವರ್​ಫುಲ್​ ಆಗಿದೆ.

ಕ್ಯಾಮೆರಾ: OIS ಬೆಂಬಲದೊಂದಿಗೆ 50MP Sony LYT-600 ಮೇನ್​ ಸೆನ್ಸಾರ್​ ಅನ್ನು ಈ ಫೋನ್‌ನ ಹಿಂಭಾಗದಲ್ಲಿ ಜೋಡಿಸಲಾಗಿದೆ. ಫೋನ್‌ನ ಎರಡನೇ ಹಿಂಭಾಗದ ಕ್ಯಾಮರಾ 8MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ನೊಂದಿಗೆ ಬರುತ್ತದೆ. ಇವುಗಳ ಹೊರತಾಗಿ ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕಾಲ್​ಗಾಗಿ 20MP ಫ್ರಂಟ್​ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ, ಚಾರ್ಜಿಂಗ್: ಈ ಹೊಸ 'Redmi Turbo 4' ಸ್ಮಾರ್ಟ್‌ಫೋನ್ 6,550mAh ಬ್ಯಾಟರಿಯನ್ನು ಹೊಂದಿದೆ. ಇದು 90W ಸ್ಪೀಡ್​ ಚಾರ್ಜಿಂಗ್ ಸಪೋರ್ಟ್​ ಜೊತೆ ಬರುತ್ತದೆ.

ಸಾಫ್ಟ್‌ವೇರ್: ಫೋನ್ ಆಂಡ್ರಾಯ್ಡ್​ 15 ಆಧಾರಿತ HyperOS 2 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ವಿಶೇಷತೆಗಳ ಜೊತೆಗೆ ಈ ಮೊಬೈಲ್ IP66/IP67/IP68 ರೇಟಿಂಗ್, ಡ್ಯುಯಲ್ ಫ್ರೀಕ್ವೆನ್ಸಿ GPS, ಮಲ್ಟಿ-ಫಂಕ್ಷನ್ NFC ನಂತಹ ಹಲವು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ.

ಕಲರ್​ ಆಪ್ಷನ್​: ಕಂಪನಿಯು ಇದನ್ನು ಚೀನಾದ ಮಾರುಕಟ್ಟೆಯಲ್ಲಿ ಶ್ಯಾಡೋ ಬ್ಲ್ಯಾಕ್​, ಶ್ಯಾಡೋ ಸೀ ಬ್ಲೂ ಮತ್ತು ಲಕ್ಕಿ ಕ್ಲೌಡ್​ ವೈಟ್​ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ.

ರೂಪಾಂತರ, ಬೆಲೆ: ಕಂಪನಿಯು ಈ ಫೋನ್ ಅನ್ನು ನಾಲ್ಕು ರೂಪಾಂತರಗಳಲ್ಲಿ ಹೊರ ತಂದಿದೆ. ಇದರ ಬೆಲೆ CNY 1,999 (ಸುಮಾರು ರೂ. 23,488). ಇದರಲ್ಲಿ ಬಳಕೆದಾರರು 12GB RAM + 256GB ಸ್ಟೋರೇಜ್​ ಅನ್ನು ಪಡೆಯುತ್ತಾರೆ. ಇದರ ಉನ್ನತ ರೂಪಾಂತರವು 16GB RAM + 512GB ಸ್ಟೋರೇಜ್​ನೊಂದಿಗೆ ಬರುತ್ತದೆ. ಇದರ ಬೆಲೆ CNY 2,499 (ಸುಮಾರು ರೂ. 29,363) ಆಗಿದೆ.

ಕಂಪನಿಯು ಈ ಸ್ಮಾರ್ಟ್‌ಫೋನ್ ಅನ್ನು 'Poco X7 Pro' ಹೆಸರಿನಲ್ಲಿ ತಂದರೆ, ಅದರ ವಿಶೇಷತೆಗಳು ಮತ್ತು ವೈಶಿಷ್ಟ್ಯಗಳು ಬಹುತೇಕ ಚೀನಾದ ರೂಪಾಂತರ 'Redmi Turbo 4' ನಂತೆಯೇ ಇರಬಹುದು. ಇದರ ಬೆಲೆ ಸುಮಾರು ಒಂದೇ ಆಗಿರುವ ಸಾಧ್ಯತೆ ಇದೆ.

ಓದಿ: ಆಹಾ! ಏನ್​ ನೋಟ, ಏನ್​ ಫೀಚರ್ಸ್​: ಹೋಂಡಾ ಎಲಿವೇಟ್ ಬ್ಲ್ಯಾಕ್​ ಎಡಿಷನ್​ ಬಿಡುಗಡೆ ಯಾವಾಗ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.