ETV Bharat / technology

ಟಾಪ್ ​-5 ಸ್ಮಾರ್ಟ್​ಫೋನ್​ ಬ್ರಾಂಡ್​ ಆದ ರಿಯಲ್ ಮಿ: 17.4 ಮಿಲಿಯನ್ ಫೋನ್​​ಗಳ​ ಮಾರಾಟ

author img

By ETV Bharat Karnataka Team

Published : Feb 9, 2024, 2:23 PM IST

17.4 ಮಿಲಿಯನ್ ಸ್ಮಾರ್ಟ್​ ಫೋನ್​ಗಳನ್ನು ಮಾರಾಟ ಮಾಡುವ ಮೂಲಕ ರಿಯಲ್ ಮಿ ದೇಶದ ಟಾಪ್ 5 ಸ್ಮಾರ್ಟ್​ಫೋನ್ ಬ್ರಾಂಡ್ ಆಗಿ ಹೊರಹೊಮ್ಮಿದೆ.

realme enters top 5 brands in India with 17.4 mn sales in 2023

ನವದೆಹಲಿ : 2023ರ ಭಾರತದ ಟಾಪ್ 5 ಸ್ಮಾರ್ಟ್​ಫೋನ್ ಬ್ರಾಂಡ್​ಗಳ ಪಟ್ಟಿಯಲ್ಲಿ ಪ್ರವೇಶ ಪಡೆದಿರುವ ರಿಯಲ್ ಮಿ 2024ನೇ ವರ್ಷವನ್ನು ಉತ್ತಮ ಮಾರಾಟದೊಂದಿಗೆ ಆಶಾದಾಯಕವಾಗಿ ಪ್ರಾರಂಭಿಸಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ರಿಯಲ್ ಮಿ ಒಟ್ಟಾರೆ ನಾಲ್ಕನೇ ಸ್ಥಾನವನ್ನು ಗಳಿಸುವ ಮೂಲಕ 2023ನೇ ವರ್ಷವನ್ನು ಯಶಸ್ವಿಯಾಗಿ ಕೊನೆಗೊಳಿಸಿದೆ.

ಇದಲ್ಲದೇ ರಿಯಲ್ ಮಿ 2023 ರಲ್ಲಿ ಭಾರತದ ಆನ್​ಲೈನ್ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಒಟ್ಟಾರೆಯಾಗಿ ಮತ್ತು 10,000 ರಿಂದ 20,000 ರೂ.ಗಳ ನಡುವಿನ ಬೆಲೆಯ ಸಾಧನಗಳ ಮಾರಾಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಡಿಸೆಂಬರ್​ನಲ್ಲಿ ಕಂಪನಿಯು ಇದೇ ಬೆಲೆ ಶ್ರೇಣಿಯಲ್ಲಿ ಅಮೆಜಾನ್​ನಲ್ಲಿ ಎರಡನೇ ಸ್ಥಾನ ಮತ್ತು ಫ್ಲಿಪ್​ಕಾರ್ಟ್​ನಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಕ್ಯಾನಲಿಸ್ ವರದಿಯ ಪ್ರಕಾರ, ರಿಯಲ್​ ಮಿ 2023 ರಲ್ಲಿ ಒಟ್ಟು 17.4 ಮಿಲಿಯನ್ ಯುನಿಟ್​ಗಳನ್ನು ಮಾರಾಟ ಮಾಡಿದೆ. ಇದರಲ್ಲಿ ನಾಲ್ಕನೇ ತ್ರೈಮಾಸಿಕದಲ್ಲಿ ಮಾತ್ರವೇ ದಾಖಲೆಯ 4.5 ಮಿಲಿಯನ್ ಯುನಿಟ್​ಗಳನ್ನು ಕಂಪನಿ ಮಾರಾಟ ಮಾಡಿದೆ. ಇ - ಕಾಮರ್ಸ್​ನಲ್ಲಿ ನಾರ್ಜೊ ಸರಣಿಯ ಸ್ಮಾರ್ಟ್​ಫೋನ್​ಗಳು ಹೆಚ್ಚಾಗಿ ಮಾರಾಟವಾಗುತ್ತಿದ್ದರೆ, ಉಳಿದ ಮಾಡೆಲ್​ಗಳು ಆಫ್​ಲೈನ್​ನಲ್ಲಿ ಅತ್ಯಧಿಕ ಮಾರಾಟ ಕಾಣುತ್ತಿವೆ.

ಕಾಲಾನಂತರದಲ್ಲಿ ಭಾರತೀಯ ಬಳಕೆದಾರರಿಗೆ ಹೊಂದಿಕೆಯಾಗುವ ಸಾಧನಗಳನ್ನು ನೀಡುವ ಮೂಲಕ, ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳು ಮತ್ತು ಸ್ಪರ್ಧಾತ್ಮಕ ಬೆಲೆಯನ್ನು ಸಂಯೋಜಿಸುವ ಮೂಲಕ ರಿಯಲ್​ ಮಿ ಭಾರತೀಯ ಸ್ಮಾರ್ಟ್​ಪೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ.

"ಯುವಜನತೆಗೆ ಅಚ್ಚುಮೆಚ್ಚಿನ ಟೆಕ್ ಬ್ರಾಂಡ್ ಆಗಿ ರೂಪಾಂತರಗೊಳ್ಳುವುದು ರಿಯಲ್​ಮಿ ಯ ಪ್ರಾಥಮಿಕ ಗುರಿಯಾಗಿದೆ. 2023 ರ ನಾಲ್ಕನೇ ತ್ರೈಮಾಸಿಕದಲ್ಲಿ ಮತ್ತು ಭಾರತದಲ್ಲಿ ವರ್ಷವಿಡೀ 20,000 ರಿಂದ 30,000 ರೂ.ಗಳ ನಡುವಿನ ಬೆಲೆಯ ಸಾಧನಗಳ ಮಾರಾಟದಲ್ಲಿ ಐದನೇ ಸ್ಥಾನ ಪಡೆದಿರುವ ರಿಯಲ್​ಮಿ ಯ ಸಾಧನೆ ಈ ಪ್ರಗತಿಗೆ ಸಾಕ್ಷಿಯಾಗಿದೆ" ಎಂದು ಕಂಪನಿ ಹೇಳಿದೆ.

ಜಾಗತಿಕವಾಗಿ ಮೂರು ಪ್ರಮುಖ ವಲಯಗಳ 18 ದೇಶಗಳಲ್ಲಿ ಅಗ್ರ ಐದು ಸ್ಮಾರ್ಟ್​ಫೋನ್ ಬ್ರಾಂಡ್​ಗಳಲ್ಲಿ ಸ್ಥಾನ ಪಡೆದಿರುವ ರಿಯಲ್ ಮಿ ಈಗ 2024 ಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಿದೆ. ಈ ಮಹತ್ವಾಕಾಂಕ್ಷೆಯ ಗುರಿಯ ಭಾಗವಾಗಿ ಶೇಕಡಾ 10 ರಷ್ಟು ಮಾರಾಟ ಹೆಚ್ಚಿಸಿಕೊಳ್ಳುವ ಗುರಿಯನ್ನು ಅದು ಹಾಕಿಕೊಂಡಿದೆ. 2024 ರಲ್ಲಿ ಭಾರತೀಯ ಸ್ಮಾರ್ಟ್​ಫೋನ್ ಮಾರುಕಟ್ಟೆ ಚೇತರಿಸಿಕೊಳ್ಳುವ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಕಂಪನಿಯು ಈ ಸಮಯದಲ್ಲಿ ತನ್ನ ಸಾಧನಗಳ ಮಾರಾಟ ವೃದ್ಧಿಗೆ ಕಾರ್ಯತಂತ್ರಗಳನ್ನು ರೂಪಿಸಿದೆ.

ಇದನ್ನೂ ಓದಿ : 20 ಲಕ್ಷ ಭಾರತೀಯರಿಗೆ ಮೈಕ್ರೋಸಾಫ್ಟ್​ನಿಂದ AI ತರಬೇತಿ: ಬೆಂಗಳೂರಿನಲ್ಲಿ ನಾದೆಲ್ಲಾ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.