ನವದೆಹಲಿ: ನಾಸ್ಕಾಮ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ರಾಜೇಶ್ ನಂಬಿಯಾರ್ ಅವರ ರಾಜೀನಾಮೆ ಬೆನ್ನಲ್ಲೇ, ಐಟಿ ಕ್ಷೇತ್ರ ಪ್ರಮುಖ ಕಂಪೆನಿ ಕಾಗ್ನಿಜೆಂಟ್ ರಾಜೇಶ್ ವಾರಿಯರ್ ಅವರನ್ನು ಜಾಗತಿಕ ಕಾರ್ಯಾಚರಣೆಯ ಪ್ರಖ್ಯಸ್ಥ ಹಾಗೂ ಭಾರತದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡುವುದಾಗಿ ಬುಧವಾರ ಪ್ರಕಟಿಸಿದೆ.
2024ರ ನವೆಂಬರ್‌ನಲ್ಲಿ ದೇಬ್ಜಾನಿ ಘೋಷ್ ಅವರ ಅವಧಿ ಪೂರ್ಣಗೊಂಡ ನಂತರ ನಂಬಿಯಾರ್ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡುವುದಾಗಿ ನಾಸ್ಕಾಮ್ ಪ್ರತ್ಯೇಕ ಪ್ರಕಟಣೆಯಲ್ಲಿ ಹೇಳಿದೆ. ನಂಬಿಯಾರ್ ಅವರು 2023ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೊದಲು ನಾಸ್ಕಾಮ್ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದರು. ಅವರ ನಾಯಕತ್ವ ಮತ್ತು ಕಾರ್ಯತಂತ್ರದ ಉಪಕ್ರಮಗಳು ಭಾರತದ ಟೆಕ್ ವಲಯವನ್ನು ಜಾಗತಿಕ ನಾಯಕನಾಗಿ ಇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ನಾಸ್ಕಾಮ್ ವಿವರಿಸಿದೆ.
ಐಟಿ ಸೇವೆಗಳ ಕಂಪನಿಯಲ್ಲಿನ ಉನ್ನತ ಮಟ್ಟದ ಬದಲಾವಣೆಗಳ ಬಗ್ಗೆ ಪ್ರಕಟಿಸಿರುವ ಕಾಗ್ನಿಜೆಂಟ್, ಕಾರ್ಯಾಚರಣೆಗಳು, ವಿತರಣಾ ಶ್ರೇಷ್ಠತೆ, ಉದ್ಯೋಗಿಗಳ ಯೋಜನೆ, ಭಾರತ ನಾಯಕತ್ವ ಮಂಡಳಿ, ವಿಸ್ತರಣೆ ಮತ್ತು ಇತರ ಪ್ರಮುಖ ಜವಾಬ್ದಾರಿಗಳು ವಾರಿಯರ್ ಅವರದ್ದಾಗಿರುತ್ತದೆ ಎಂದು ಹೇಳಿದೆ.
ಅವರು ಕಾಗ್ನಿಜೆಂಟ್‌ನ ಭಾರತ ಮೂಲದ ಉದ್ಯೋಗಿಗಳಿಗೆ ಪ್ರಾದೇಶಿಕ ನಾಯಕತ್ವವನ್ನು ಒದಗಿಸುತ್ತಾರೆ. ಜೊತೆಗೆ ಕಂಪನಿಯ ರೂಪಾಂತರ ಕಾರ್ಯಕ್ರಮಗಳ ಚಾಲನೆಗೆ ಬಲವಾದ ಒತ್ತು ನೀಡುತ್ತಾರೆ. ದೇಶಾದ್ಯಂತ ತನ್ನ ಬೆಳವಣಿಗೆಯ ಯೋಜನೆಯನ್ನು ಕಾರ್ಯಗತಗೊಳಿಸುವಾಗ ಕಂಪನಿಯನ್ನು ಪ್ರತಿನಿಧಿಸುತ್ತಾರೆ ಎಂದು ಹೇಳಿದೆ.
ಕಾಗ್ನಿಜೆಂಟ್ ಇಂದು, 2024 ಸೆಪ್ಟೆಂಬರ್ 2ರಿಂದ ಜಾರಿಗೆ ಬರುವಂತೆ ರಾಜೇಶ್ ವಾರಿಯರ್ ಅವರನ್ನು ಗ್ಲೋಬಲ್ ಹೆಡ್ ಆಫ್ ಆಪರೇಷನ್ಸ್ ಆಗಿ ನೇಮಕ ಮಾಡುವುದಾಗಿ ಘೋಷಿಸಿತು. ರಾಜೇಶ್ ನಂಬಿಯಾರ್ ಅವರು ನಾಸ್ಕಾಮ್ ಅಧ್ಯಕ್ಷರಾಗುವ ಹಿನ್ನಲೆ ಕಾಗ್ನಿಜೆಂಟ್ ಅನ್ನು ತೊರೆಯುವುದರಿಂದ, ಹೆಚ್ಚುವರಿಯಾಗಿ, 2024ರ ಅಕ್ಟೋಬರ್ 1ರಂದು ರಾಜೇಶ್ ವಾರಿಯರ್ ಕಾಗ್ನಿಜೆಂಟ್‌ನ ಭಾರತದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಳ್ಳುತ್ತಾರೆ.
ವಾರಿಯರ್ ಅವರು ಕಾಗ್ನಿಜೆಂಟ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದು, ಕಾಗ್ನಿಜೆಂಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿ ಕುಮಾರ್ ಎಸ್ ಅವರಿಗೆ ವರದಿ ಮಾಡುತ್ತಾರೆ. ವಾರಿಯರ್ ಭಾರತದ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ. ಕಾಗ್ನಿಜೆಂಟ್‌ಗೆ ಸೇರುವ ಮೊದಲು, ವಾರಿಯರ್ ಇವಿಪಿ, ಗ್ಲೋಬಲ್ ಸರ್ವಿಸಸ್ ಮತ್ತು ಇನ್ಫೋಸಿಸ್ ಅಮೆರಿಕದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಇನ್ಫೋಸಿಸ್ ಡಿಜಿಟಲ್ ಮತ್ತು ಮೈಕ್ರೋಸಾಫ್ಟ್ ವ್ಯವಹಾರಗಳ ಜಾಗತಿಕ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಅವರು ಈ ಹಿಂದೆ ಇನ್ಫೋಸಿಸ್‌ನಲ್ಲಿ ಮೈಕ್ರೋಸಾಫ್ಟ್ ವ್ಯವಹಾರಕ್ಕಾಗಿ ಡಿಜಿಟಲ್ ಅನುಭವದ SVP ಆಗಿಯೂ ಸೇವೆ ಸಲ್ಲಿಸಿದರು. ಇನ್ಫೋಸಿಸ್‌ಗೆ ಸೇರುವ ಮೊದಲು, ವಾರಿಯರ್ ಅವರು ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಶುರೆನ್ಸ್‌ನ CIO ಮತ್ತು ಡಿಜಿಟಲ್ ಅಧಿಕಾರಿಯಾಗಿದ್ದರು. ಮತ್ತು ವಿಶ್ಲೇಷಣಾ ಸಂಸ್ಥೆ ಆಕ್ಟಿವ್‌ಕ್ಯೂಬ್ಸ್‌ನ ಸಂಸ್ಥಾಪಕರಾಗಿದ್ದರು. ಅವರು ಮುಂಬೈ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಪ್ರತ್ಯೇಕ ಹೇಳಿಕೆ ಪ್ರಕಟಿಸಿರುವ ನಾಸ್ಕಾಮ್, ತನ್ನ ಹೊಸ ಅಧ್ಯಕ್ಷರಾಗಿ ನಂಬಿಯಾರ್ ಅವರನ್ನು ನೇಮಕ ಮಾಡಿರುವುದಾಗಿ ಘೋಷಿಸಿತು. "ನಂಬಿಯಾರ್ ಅವರು TCS, IBM, Ciena ಮತ್ತು Cognizant ನಲ್ಲಿ ಜಾಗತಿಕ ತಂಡಗಳಲ್ಲಿ ಕೆಲಸ ಮಾಡಿದ ಮತ್ತು ನೇತೃತ್ವದ ಉದ್ಯಮದ ನಾಯಕರಾಗಿದ್ದಾರೆ. ಅವರ ನಾಯಕತ್ವ ಮತ್ತು ಕಾರ್ಯತಂತ್ರದ ಉಪಕ್ರಮಗಳು ಭಾರತದ ಟೆಕ್ ವಲಯವನ್ನು ಜಾಗತಿಕ ಲೀಡ್ ಆಗಿ ಇರಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ" ಎಂದು Nasscom ಹೇಳಿದೆ.
ಇದನ್ನೂ ಓದಿ: ಹೈಡ್ರೋಜನ್ ಇನ್ನೋವೇಶನ್ ಸೆಂಟರ್ ಶಂಕುಸ್ಥಾಪನೆ ನೆರವೇರಿಸಿದ ತಮಿಳುನಾಡು ಸಿಎಂ - HYDROGEN TECHNOLOGY